ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಒಂದೇ ಒಂದು ಟ್ವೀಟ್ ಇಡೀ ದೇಶವನ್ನೇ ಚಿಂತನೆಗೆ ಹಚ್ಚಿಬಿಟ್ಟಿದೆ. ಮೋದಿ ನಿಜಕ್ಕೂ ಸಾಮಾಜಿಕ ಜಾಲತಾಣಗಳನ್ನು ಬಿಡುತ್ತಿದ್ದಾರಾ? ಅಥವಾ ಭಾನುವಾರ ಒಂದು ದಿನ ಮಾತ್ರ ಸಾಮಾಜಿಕ ಜಾಲತಾಣಗಳಿಂದ ವಿರಾಮ ಪಡೆದುಕೊಳ್ಳುತ್ತಿದ್ದಾರಾ? ಅಥವಾ ಅವರು ಮಾಡಿರುವ ಟ್ವೀಟ್ನ ಒಳಾರ್ಥ ಬೇರೆಯೇ ಇರಬಹುದಾ ಎಂಬೆಲ್ಲಾ ಚರ್ಚೆಗಳು ದೇಶದುದ್ದಕ್ಕೂ ಆರಂಭಗೊಂಡಿದೆ.
ಟ್ವೀಟ್ ಮಾಡಿರುವ ಮೋದಿ, “ಈ ಭಾನುವಾರ, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಮತ್ತು ಯುಟ್ಯೂಬ್ಗಳನ್ನು ತೊರೆಯುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ನಿಮಗೆ ಎಲ್ಲಾ ವಿಷಯಗಳನ್ನು ತಿಳಿಸುತ್ತಿರುತ್ತೇನೆ” ಎಂದಿದ್ದಾರೆ. ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲೂ ಇದೇ ಸಂದೇಶವನ್ನು ಮೋದಿ ಬರೆದುಕೊಂಡಿದ್ದಾರೆ.
This Sunday, thinking of giving up my social media accounts on Facebook, Twitter, Instagram & YouTube. Will keep you all posted.
— Narendra Modi (@narendramodi) March 2, 2020
ಆದರೆ ತನ್ನ ಈ ನಿರ್ಧಾರದ ಹಿಂದಿನ ಕಾರಣವನ್ನು ಮೋದಿ ತಿಳಿಸಿಯೇ ಇಲ್ಲ. ಹೀಗಾಗಿ ಮೋದಿ ಹಿಂಬಾಲಕರು ಮತ್ತು ನೆಟ್ಟಿಗರು ತೀವ್ರವಾದ ಊಹೆಯಲ್ಲಿ ತೊಡಗಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ 44 ದಶಲಕ್ಷ ಫಾಲೋವರ್ಸ್ಗಳನ್ನು, ಟ್ವಿಟರ್ನಲ್ಲಿ ಸುಮಾರು 53 ದಶಲಕ್ಷ ಫಾಲೋವರ್ಸ್ಗಳನ್ನು ಮತ್ತು ಇನ್ಸ್ಟಾಗ್ರಾಮ್ನಲ್ಲಿ 35.2 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಮತ್ತು ಯುಟ್ಯೂಬ್ನಲ್ಲಿ 4.5 ದಶಲಕ್ಷ ಚಂದಾದಾರರನ್ನು ಹೊಂದಿರುವ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿಗಳಲ್ಲಿ ಒಬ್ಬರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.