ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC)ಯ ಹೊರಗಡೆ ಪಾಕಿಸ್ಥಾನದ ಮಾನ ಹರಾಜು ಹಾಕುವಂತಹ ಪೋಸ್ಟರ್ ಅನ್ನು ಹಾಕಲಾಗಿದೆ. ಜಿನೆವಾದಲ್ಲಿನ ಬ್ರೋಕನ್ ಚೇರ್ ಸ್ಮಾರಕದ ಬಳಿ ‘ಪಾಕಿಸ್ಥಾನ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ ಸ್ಥಾನ’ ಎಂದು ಬರೆಯಲಾದ ಪೋಸ್ಟರ್ ರಾರಾಜಿಸುತ್ತಿದೆ.
ಪಾಕಿಸ್ಥಾನದ ಅಲ್ಪಸಂಖ್ಯಾತರು ಈ ಪೋಸ್ಟರ್ ಅನ್ನು ಹಾಕಿದ್ದಾರೆ. ಮಾತ್ರವಲ್ಲದೇ, ಇಸ್ಲಾಮಾಬಾದ್ ಭಯೋತ್ಪಾದನೆಗೆ ರಹಸ್ಯವಾಗಿ ನೀಡುತ್ತಿರುವ ಬೆಂಬಲ ಮತ್ತು ಧನಸಹಾಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ಥಾನಿ ಅಲ್ಪಸಂಖ್ಯಾತರು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
‘ಪಾಕಿಸ್ಥಾನಿ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ ಸ್ಥಾನ’ ಎನ್ನುವ ಈ ಪೋಸ್ಟರ್ಗಳು ಪಾಕಿಸ್ಥಾನದ ಕರಾಳ ಸತ್ಯವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಪ್ರಸ್ತುಪಡಿಸಿವೆ. ಪಾಕಿಸ್ಥಾನ ಸೇನೆ ಮಾಡುತ್ತಿರುವ ನಟೋರಿಯಸ್ ಕೃತ್ಯಗಳು, ಅದು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲದ ಬಗ್ಗೆ ಜಗತ್ತನ್ನು ಎಚ್ಚರಿಸಿವೆ.
ಭಯೋತ್ಪಾದಕ ಸಂಘಟನೆಗಳನ್ನು ಬೆಳೆಸುವಲ್ಲಿ ಪಾಕಿಸ್ಥಾನ ಮಿಲಿಟರಿ ನೀಡುತ್ತಿರುವ ಕೊಡುಗೆಗಳನ್ನು ವಿರೋಧಿಸಿ ಬಲೂಚ್ ಮತ್ತು ಪಶ್ತೂನ್ ಕಾರ್ಯಕರ್ತರು ಬ್ರೋಕನ್ ಚೇರ್ನಲ್ಲಿರುವ ವಿಶ್ವಸಂಸ್ಥೆಯ ಜಿನೆವಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬೆಳವಣಿಗೆಗಳ ಹಳಿ ತಪ್ಪಿಸುವ ಸಲುವಾಗಿ ಪಾಕಿಸ್ಥಾನ ನಡೆಸುತ್ತಿರುವ ಪ್ರಯತ್ನಗಳ ವಿರುದ್ಧ ಭಾರತ ಗುಡುಗಿದೆ. ”ಭಯೋತ್ಪಾದನೆಗೆ ಮಾಡುತ್ತಿರುವ ಧನಸಹಾಯವನ್ನು ನಿಲ್ಲಿಸಿ ಮತ್ತು ನಿಮ್ಮ ಮಣ್ಣಿನಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ಶಿಬಿರಗಳನ್ನು ಕೆಡವಿ ಹಾಕಿ” ಎಂದು ಪಾಕಿಸ್ಥಾನದ ನಾಯಕತ್ವಕ್ಕೆ ಕಟು ಎಚ್ಚರಿಕೆಯನ್ನು ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.