ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರವು ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಿರುವ ಹೊಸ ನಿರ್ಬಂಧಗಳ ವಿರುದ್ಧ ಫೇಸ್ಬುಕ್, ಗೂಗಲ್ ಮತ್ತು ಟ್ವಿಟರ್ ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಬಂಧಗಳನ್ನು ತೆರವುಗೊಳಿಸದೇ ಹೋದರೆ ಆ ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದೆ.
ಏಷ್ಯಾ ಇಂಟರ್ನೆಟ್ ಒಕ್ಕೂಟ (ಎಐಸಿ) ಈ ತಿಂಗಳ ಆರಂಭದಲ್ಲಿ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರಿಗೆ ಪತ್ರವನ್ನು ಬರೆದು, ಸಾಮಾಜಿಕ ಮಾಧ್ಯಮಕ್ಕಾಗಿ ರೂಪಿಸಿರುವ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಷ್ಕರಿಸುವಂತೆ ಅವರ ಸರ್ಕಾರವನ್ನು ಕೋರಿದ್ದಾರೆ.
“ಪ್ರಸ್ತುತ ರೂಪಿಸಿರುವ ನಿಯಮಗಳೊಂದಿಗೆ ಎಐಸಿ ಸದಸ್ಯರಿಗೆ ತಮ್ಮ ಸೇವೆಗಳನ್ನು ಪಾಕಿಸ್ಥಾನಿ ಬಳಕೆದಾರರಿಗೆ ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲು ಬಹಳ ಕಷ್ಟಕರವಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೊಸ ನಿಯಮಗಳ ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಇಸ್ಲಾಮಾಬಾದ್ನಲ್ಲಿ ಕಚೇರಿಗಳನ್ನು ತೆರೆಯುವುದು, ಮಾಹಿತಿಯನ್ನು ಸಂಗ್ರಹಿಸಲು ಡೇಟಾ ಸರ್ವರ್ಗಳನ್ನು ನಿರ್ಮಿಸುವುದು ಮತ್ತು ಅಧಿಕಾರಿಗಳಿಂದ ಗುರುತಿಸಲ್ಪಟ್ಟ ನಂತರವೇ ವಿಷಯವನ್ನು ರಚಿಸುವುದು ಕಡ್ಡಾಯವಾಗಿದೆ.
ಪಾಕಿಸ್ಥಾನದ ಅಧಿಕಾರಿಗಳ ಮಾತನ್ನು ಅನುಸರಿಸಲು ವಿಫಲವಾದರೆ ಭಾರಿ ದಂಡ ಮತ್ತು ಸೇವೆಗಳನ್ನು ಕೊನೆಗೊಳಿಸಬೇಕಾಗುತ್ತದೆ.
ಆದರೆ ಸಾಮಾಜಿಕ ಮಾಧ್ಯಮಗಳ ಕಂಪನಿಗಳು ಈ ನಿಯಮಗಳನ್ನು ಒಪ್ಪಲು ಸಿದ್ಧರಿಲ್ಲ, ಹೀಗಾಗಿ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ರವಾನಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.