News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕರಿಗೆ ಬೀಳ್ಕೊಡುಗೆ – ಸನ್ಮಾನ

ಸುಳ್ಯ : ಸುಳ್ಯದ ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಆಲಿಸ್ ಪಿಂಟೋ ಹಾಗೂ ಶಿಕ್ಷಕ ವಿನ್ಸೆಂಟ್ ರೇಗೋರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

SUL-2APR-2

ಸಭಾಧ್ಯಕ್ಷತೆ ವಹಿಸಿ ನಿವೃತ್ತರನ್ನು ಸನ್ಮಾನಿಸಿದ ಮಂಗಳೂರು ಧರ್ಮಪ್ರಾಂತ್ಯದ ಕಾರ್ಯದರ್ಶಿ ಫಾ.ಜೆರಾಲ್ಡ್ ಡಿಸೋಜಾ ಮಾತನಾಡಿ “ನಿವೃತ್ತಿ ಸಹಜವಾಗಿದ್ದರೂ ಅವರ ಸೇವಾವಧಿಯಲ್ಲಿ ಮಕ್ಕಳನ್ನು ರೂಪಿಸಿದ ರೀತಿಯಿಂದ ಅವರು ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.

ಸುಳ್ಯದ ಧರ್ಮಗುರು ಫಾ.ವಿನ್ಸೆಂಟ್ ಡಿಸೋಜಾ ನಿವೃತ್ತರಿಗೆ ಶುಭ ಹಾರೈಸಿದರು. ಸುಳ್ಯ ತಾಲೂಕು ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು ನಿವೃತ್ತರನ್ನು ಗೌರವಿಸಿದರು.

ಶಿಕ್ಷಣ ಸಂಯೋಜಕ ಕೇಶವ ಮಾಸ್ತರ್, ಕ್ಲಸ್ಟರ್, ಸಂಪನ್ಮೂಲ ವ್ಯಕ್ತಿ ಪದ್ಮನಾಭ ಅತ್ಯಾಡಿ, ನ.ಪಂ.ಸದಸ್ಯೆ ಸುನಿತಾ ಮೊಂತೆರೋ, ಶಾಲಾ ನಾಯಕ ಚಿತ್ತಾರ ಬಂಟ್ವಾಳ, ಸೈಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮಾ, ಶಿಕ್ಷಕ ರಕ್ಷಕ ಸಂಘದ ಶೈಲೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.

ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಲೂಸೀ ಪಿ.ಡಿಸೋಜ ಸ್ವಾಗತಿಸಿ, ಶಿಕ್ಷಕಿ ಸಿ ಜಾನೆಡ್ ಲೋಬೋ ವಂದಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top