ಬ್ರಿಟನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೊಸದಾಗಿ ಪುನರ್ ರಚನೆ ಮಾಡಿದ ಸಂಪುಟದಲ್ಲಿ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್ಮನ್ ಅವರನ್ನು ತಮ್ಮ ಹೊಸ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಲಂಡನ್ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಅಟಾರ್ನಿ ಜನರಲ್ ಆಗಿ ಸೋಮವಾರ ಔಪಚಾರಿಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಸುಯೆಲ್ಲಾ, “ಅಟಾರ್ನಿ ಜನರಲ್ ಆಗಿ ಪ್ರಮಾಣವಚನ ಸ್ವೀಕರಿಸುವುದು ಒಂದು ಭಾಗ್ಯ ಮತ್ತು ಈ ಐತಿಹಾಸಿಕ ಹುದ್ದೆಗೆ ನೇಮಕಗೊಂಡ ಎರಡನೇ ಮಹಿಳೆ ಎನ್ನುವುದು ನನಗೆ ಗೌರವ ತಂದಿದೆ” ಎಂದು ಹೇಳಿದ್ದಾರೆ.
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು ತನ್ನ ಮೊದಲ ಕ್ರಿಯಾ ಯೋಜನೆ ಎಂದು ಅವರು ಹೇಳಿದರು. ತನ್ನ ಹಿಂದಿನ ಕೆಲಸ ಮತ್ತು ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಬ್ರಾವರ್ಮನ್ ಅವರು ಕ್ವೀನ್ಸ್ ಕಾಲೇಜ್ ಕೇಂಬ್ರಿಡ್ಜ್ ಯೂನಿವರ್ಸಿಟಿಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ ಮತ್ತು ಅವರು ಪ್ಯಾಂಥಿಯಾನ್-ಸೊರ್ಬೊನ್ನೆ ವಿಶ್ವವಿದ್ಯಾಲಯದಲ್ಲಿ ಯುರೋಪಿಯನ್ ಮತ್ತು ಫ್ರೆಂಚ್ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ.
ಕೇಂಬ್ರಿಡ್ಜ್ನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಕನ್ಸರ್ವೇಟಿವ್ ಅಸೋಸಿಯೇಶನ್ನ ಅಧ್ಯಕ್ಷರಾಗಿದ್ದರು.
ಇವರ ಪೋಷಕರು ಗೋವಾ ಮತ್ತು ದಕ್ಷಿಣ ಭಾರತ ಮೂಲದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.