ವಾಷಿಂಗ್ಟನ್: ಫೆಬ್ರವರಿ 24 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಭೇಟಿಯನ್ನು ಆರಂಭಿಸಲಿದ್ದಾರೆ. ಈ ಸಂದರ್ಭದಲ್ಲಿ ಯುಎಸ್ ಮತ್ತು ಭಾರತ ನಡುವೆ ಪ್ರಮುಖ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂಬ ಸೂಚನೆಯನ್ನು ನೀಡಿರುವ ಟ್ರಂಪ್ ಅವರು ಮಂಗಳವಾರ, “ಮುಂದಿನ ದಿನಗಳಿಗಾಗಿ ಭಾರತದೊಂದಿಗೆ ದೊಡ್ಡ ವ್ಯಾಪಾರವನ್ನು ಉಳಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
2020ರ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ ಎಂದಿರುವ ಟ್ರಂಪ್, “ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬಹುದು. ಆದರೆ ಇಲ್ಲಿ ನಾನು ನಂತರದ ದಿನಗಳಿಗೆ ದೊಡ್ಡ ವ್ಯಾಪಾರವನ್ನು ಉಳಿಸುತ್ತಿದ್ದೇನೆ” ಎಂದು ಅವರು ಜಾಯಿಂಟ್ ಬೇಸ್ ಆಂಡ್ರ್ಯೂಸ್ನಲ್ಲಿ ವರದಿಗಾರರಿಗೆ ಹೇಳಿದ್ದಾರೆ.
ಟ್ರಂಪ್ ಭೇಟಿಯ ಸಮಯದಲ್ಲಿ ಯುಎಸ್ ಮತ್ತು ಭಾರತವು “ವ್ಯಾಪಾರ ಪ್ಯಾಕೇಜ್” ಗೆ ಸಹಿ ಹಾಕಬಹುದು ಎಂದು ಮೂಲಗಳು ತಿಳಿಸಿವೆ. ಭೇಟಿಗೆ ಮುಂಚಿತವಾಗಿ ನೀವು ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ನಿರೀಕ್ಷಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನಾವು ಭಾರತದೊಂದಿಗೆ ಬಹಳ ದೊಡ್ಡ ವ್ಯಾಪಾರ ಒಪ್ಪಂದವನ್ನು ಮಾಡುತ್ತಿದ್ದೇವೆ. ಇದನ್ನು ಚುನಾವಣೆಗೆ ಮೊದಲೇ ಅಂತಿಮಗೊಳಿಸಲಾಗುತ್ತದೆಯೇ ಎಂದು ನನಗೆ ಗೊತ್ತಿಲ್ಲ, ಆದರೆ ನಾವು ಭಾರತದೊಂದಿಗೆ ಬಹಳ ದೊಡ್ಡ ವ್ಯವಹಾರವನ್ನು ಹೊಂದುತ್ತಿದ್ದೇವೆ” ಎಂದಿದ್ದಾರೆ.
ಭಾರತಕ್ಕಾಗಮಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ ಅವರು, “ವಿಮಾನ ನಿಲ್ದಾಣ ಮತ್ತು ಕಾರ್ಯಕ್ರಮದ ನಡುವೆ ಏಳು ಮಿಲಿಯನ್ ಜನರು ನಮ್ಮನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಮೋದಿ ನನಗೆ ಹೇಳಿದ್ದಾರೆ. ಕಾರ್ಯಕ್ರಮ ನಡೆಯಲಿರುವ ಕ್ರೀಡಾಂಗಣ ಒಂದು ರೀತಿಯ ಅರೆ ನಿರ್ಮಾಣ ಹಂತದಲ್ಲಿದೆ, ಆದರೆ ಇದು ವಿಶ್ವದ ಅತಿದೊಡ್ಡ ಕ್ರೀಡಾಂಗಣವಾಗಲಿದೆ. ಆದ್ದರಿಂದ ನನಗೆ ತುಂಬಾ ರೋಮಾಂಚಕವಾಗುತ್ತಿದೆ. ನೀವು ಕೂಡ ಇದನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.