ಜಗತ್ತು ಬದಲಾಗುತ್ತಿದೆ. ಬಡತನ, ಶಿಕ್ಷಣ, ಉದ್ಯೋಗ ಇತ್ಯಾದಿ ಅನೇಕ ಕಾರಣಗಳಿಂದ ಜನರು ಹಳ್ಳಿಗಳಿಂದ ನಗರದತ್ತ ಮುಖ ಮಾಡುತ್ತಿದ್ದಾರೆ. ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಹಳ್ಳಿಗಳೂ ಮಾಯವಾಗಿ ವಿಶ್ವವೇ ಕಾಂಕ್ರೀಟ್ ಕಟ್ಟಡಗಳ ಕಾಡಾಗಿ ಪರಿವರ್ತನೆಯಾಗಿದೆ, ಆಗುತ್ತಲೇ ಇದೆ. ಈ ನಡುವೆ ಕಾಡು ನಾಶವಾಗಿದೆ. ಪ್ರಾಣಿ ಪಕ್ಷಿಗಳ ಬದುಕಿನ ಜೊತೆಗೆ ಮನುಷ್ಯನ ಜೀವನವೂ ಅಪಾಯದಂಚಿಗೆ ಸಾಗುತ್ತಿದೆ. ಕೊಳಚೆ, ಹೊಗೆ, ವಾಹನ ದಟ್ಟಣೆ ಇತ್ಯಾದಿ ಕಾರಣಗಳಿಂದಾಗಿ ವಾತಾವರಣವೂ ಕಲುಷಿತವಾಗುತ್ತಿದೆ. ಭೂಮಿ ಅಪಾಯದ ಅಂಚಿನಲ್ಲಿದೆ. ಹಸಿರು ಮಾಯವಾಗಿ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿಯೂ ನಮ್ಮ ಮುಂದೆ ರಾಕ್ಷಸ ರೂಪ ತಾಳಿ ನಿಂತಿದೆ. ಹೀಗಿರುವಾಗ ಮನೆಗಳಲ್ಲಿ ಖಾಲಿ ಇರುವ ಪ್ರದೇಶದಲ್ಲಿ ಹಸಿರು ಬೆಳೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ 19ರ ಇಂಜಿನಿಯರಿಂಗ್ ಓದುತ್ತಿರುವ ಈ ಹುಡುಗ ಜುಬೇರ್ ಮೊಹಮ್ಮದ್.
ಭೋಪಾಲ್ ಮೂಲದ ಜುಬೇರ್ ತನ್ನ ಮನೆಯ ತಾರಸಿ, ಅಂಗಳ ಇತ್ಯಾದಿಗಳಲ್ಲಿ ಹಸಿರು ಬೆಳೆಯುವ ಮೂಲಕ ಕ್ರಾಂತಿಕಾರಕ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ನಗರಗಳಲ್ಲೂ ಹಸಿರು ಸ್ವರ್ಗವನ್ನು ನಿರ್ಮಾಣ ಮಾಡುವ ಪಣ ತೊಟ್ಟು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಆ ಮೂಲಕ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಯಲ್ಲಿ ಮನಸ್ಸನ್ನೂ ಸ್ವಸ್ಥವನ್ನಾಗಿಸುತ್ತಿದ್ದಾರೆ.
ಹಿಂದೆಲ್ಲಾ ಪ್ರಕೃತಿಯ ನಡುವೆ ಮನೆ, ಮನೆ ತುಂಬಾ ಜನರಿದ್ದರು. ಅದರೆ ಇಂದು ಪರಿಸ್ಥಿತಿ ಬದಲಾಗಿದೆ. ಉಸಿರಾಡುವುದಕ್ಕೆ ಶುದ್ಧ ಗಾಳಿಯೂ ಇಲ್ಲ. ಮನೆ ತುಂಬಾ ಜನರಿರುವುದು ಬಿಡಿ, ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿ ಇರುವ ಇಬ್ಬರೂ ಹತ್ತಿರವಿದ್ದರೂ, ದೂರವಿರುವಂತೆ ಬದುಕುವ ಸ್ಥಿತಿ ಇದೆ. ಯುವ ಜನಾಂಗದ ಮನಸ್ಸು ಹೀಗೆ ಬದಲಾಗಿರುವಾಗ, ಹಸಿರು ನಿರ್ಮಾಣದಲ್ಲಿ ತೊಡಗಿರುವ ಜುಬೇರ್ ಕೊಂಚ ಭಿನ್ನ ಎನಿಸುತ್ತಾರೆ. ಪ್ಯಾರಡೈಸ್ ಗಾರ್ಡನ್ ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಮನೆಯ ಲಭ್ಯವಿರುವ ಜಾಗದಲ್ಲಿ ಕೈ ತೋಟ ನಿರ್ಮಿಸುವ ಆಸಕ್ತಿ ಇದ್ದವರಿಗೆ ಕೈ ತೋಟ ನಿರ್ಮಾಣ ಮಾಡಿಕೊಡುವುದಕ್ಕೆ ಆರಂಭಿಸಿದ್ದಾರೆ.
2015 ರ ಸುಮಾರಿಗೆ ಜುಬೇರ್ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗಲೇ ಈ ಯೋಜನೆ ಅವನೊಳಗೆ ಸೃಜಿಸಿದ್ದು, ಇದನ್ನು ಸಾಕಾರ ರೂಪಕ್ಕೆ ತರುವ ಸಲುವಾಗಿ ಅವನ ಹೆತ್ತವರ ಜೊತೆಗೆ ಚರ್ಚೆ ಮಾಡುತ್ತಾರೆ. ಪ್ಯಾರಡೈಸ್ ಗಾರ್ಡನ್ ಆರಂಭಕ್ಕೂ ಮೊದಲು ಒಂದು ತಂಡ ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿಯೇ(ಫೇಸ್ಬುಕ್ ಪೇಜ್) ತನ್ನ ಯೋಜನೆಯನ್ನು ಜನರಿಗೆ ತಲುಪಿಸುವುದಕ್ಕೂ ಆರಂಭಿಸುತ್ತಾರೆ. ತಮ್ಮ ಈ ಮನೋಭಿಲಾಷೆಯ ಬಗ್ಗೆ ಹಿಂದೆ ಮುಂದೆ ಯಾವುದೇ ಸರಿಯದ ಯೋಜನೆಗಳಿಲ್ಲದೇ ಇದ್ದರೂ ಇದನ್ನು ಆರಂಭಿಸಲೇ ಬೇಕು ಎನ್ನು ಅಧಮ್ಯ ಉತ್ಸಾಹವೇ ಈ ಹುಡುಗನನ್ನು ಈ ಸಾಧನೆ ಮಡುವುದಕ್ಕೆ, ಇತರರಿಗೆ ಪ್ರೇರಣೆಯಾಗುವುದಕ್ಕೂ ಪ್ರೇರೇಪಿಸಿದೆ.
ಇಂಜಿನಿಯರಿಂಗ್ ವಿದ್ಯಭ್ಯಾಸದಲ್ಲಿ ತೊಡಗಿಕೊಂಡಿದ್ದಾಗ, ಒಂದು ವರ್ಷಗಳ ಕಾಲ ಕೈ ತೋಟ ನಿರ್ಮಾಣವನ್ನು ಸಾಕಾರಗೊಳಿಸುವ ಬಗೆ ಹೇಗೆ ಎಂಬುದರ ಕುರಿತಾಗಿಯೇ ಅಧ್ಯಯನ ಮಡಿರುವ ಇವರು, ಅನಂತರದಲ್ಲಿ ತಮ್ಮ ಕನಸನ್ನು ಪ್ಯಾರಡೈಸ್ ಗಾರ್ಡನ್ ಎಂಬ ಹೆಸರಿನ ಮೂಲಕ ಆರಂಭಿಸುತ್ತಾರೆ. ಅತೀ ಕಡಿಮೆ ಜಾಗದಲ್ಲಿಯೂ ಗಾರ್ಡನ್ಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಇವರ ತಂಡಕ್ಕೆ ಸಲ್ಲುತ್ತದೆ. 7000 ರೂ. ಗಳಿಂದ ಆರಂಭವಾಗುವ ಈ ಉದ್ಯಮ ಇಂದು ಅವರನ್ನು ಭೋಪಾಲ್ ಜನತೆಗೆ ಹತ್ತಿರವನ್ನಾಗಿಸಿದೆ ಎಂದರೂ ತಪ್ಪಾಗಲಾರದು. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ, ಗ್ರಾಹಕರು ಇಷ್ಟ ಪಡುವ ಗಿಡಗಳಿಂದಲೇ ಇವರ ಗಾರ್ಡನ್ ನಿರ್ಮಾಣವಗುತ್ತದೆ. ಅವರ ಬೇಡಿಕೆ ಅನುಗುಣವಾಯೇ ಮೌಲ್ಯವನ್ನು ನಿರ್ಧರಿಸುವುದಾಗಿಯೂ ಅವರು ಹೇಳುತ್ತಾರೆ.
ಕೇವಲ ಕೈ ತೋಟವನ್ನು ನಿರ್ಮಿಸಿ ಕೊಡುವುದ ಮಾತ್ರವಲ್ಲದೆ, ಅದರ ಪಾಲನೆ ಪೋಷಣೆಯನ್ನು ಬಯಸುವ ಗ್ರಾಹಕರಿಗೆ ಅ ಸೇವೆಯನ್ನೂ ನೀಡುತ್ತಿದ್ದಾರೆ. ಅದಕ್ಕಾಗಿ ಅವರು 2000 ರೂ. ಗಳನ್ನೂ ಅದಕ್ಕಾಗಿ ನಿಗದಿ ಪಡಿಸಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 5ಅ ರ ವರೆಗೆ ಮಾಡುವ ಆಫೀಸ್ ಕೆಲಸಗಳತ್ತ ಮನಸ್ಸು ಮಾಡದ ಜುಬೇರ್, ನಗರಗಳಲ್ಲಿಯೂ ಹಸಿರು ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.