ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸೆಯ ಬಗೆಗಿನ ಎಡಿಟ್ ಮಾಡದೇ ಇರುವಂತಹ ವೀಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಹಿಂಸಾತ್ಮಕ ಪ್ರತಿಭಟನಾಕಾರರ ಕೈಯಲ್ಲಿ ಕಲ್ಲುಗಳು ಇದ್ದದ್ದನ್ನು ಈ ವಿಡಿಯೋ ಸ್ಪಷ್ಟಪಡಿಸಿದೆ.
ಕೆಲವರು ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಜಾಮಿಯಾ ಇಸ್ಲಾಮಿಯಾ ಗ್ರಂಥಾಲಯದೊಳಗೆ ಆಶ್ರಯ ಪಡೆದುಕೊಂಡಿದ್ದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಅನ್ ಎಡಿಟೆಡ್ ವಿಡಿಯೋ ಜಾಮಿಯಾದೊಳಗೆ ಕೆಲವರು ಹಿಂಸೆಯನ್ನು ಪ್ರಚೋದಿಸಲೆಂದೇ ಹೊಂಚು ಆಗಿದ್ದರು ಎಂಬುದನ್ನು ಸ್ಪಷ್ಟಪಡಿಸಿದೆ.
ಈ ಹಿಂದೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಗ್ರಂಥಾಲಯದ ಒಳಗಿನಿಂದ ಸಿಸಿಟಿವಿ ದೃಶ್ಯಾವಳಿವೆಂದು ಹೇಳಿ ವಿಡಿಯೋವನ್ನು ಬಿಡಲಾಗಿತ್ತು. ಈ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿಗಳು ವಿದ್ಯಾರ್ಥಿಗಳ ಮೇಲೆ ತಮ್ಮ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯವಿತ್ತು. ಆದರೀಗ ಬಿಡುಗಡೆ ಮಾಡಲಾದ ಎಡಿಟ್ ಮಾಡದೇ ಇರುವಂತಹ ವಿಡಿಯೋ ವಿದ್ಯಾರ್ಥಿಗಳು ಹಿಂಸೆಯನ್ನು ನಡೆಸಿದ್ದರು ಎಂಬುದನ್ನು ಸ್ಪಷ್ಟಪಡಿಸಿದೆ.
ಹಿಂಸಾತ್ಮಕ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಆವರಣದ ಹೊರಗೆ ವಾಹನಗಳನ್ನು ಸುಟ್ಟುಹಾಕಿದ ನಂತರ ಗ್ರಂಥಾಲಯದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಮತ್ತು ಇದರಿಂದಾಗಿ ಪೊಲೀಸರಿಗೆ ಕ್ರಮ ಜರುಗಿಸುವುದು ಅನಿವಾರ್ಯವಾಯಿತು ಎಂಬುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ಗ್ರಂಥಾಲಯದ ಹಿಂದಿನ ಗೇಟ್ನಿಂದ ಪ್ರವೇಶಿಸಿ ಲಾಠಿಚಾರ್ಜ್ ಮಾಡಿದರು.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಅಧಿಕಾರಿಗಳು ಈವರೆಗೂ ತನ್ನ ವಿದ್ಯಾರ್ಥಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.