ನವದೆಹಲಿ: ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೊಸಾ ಅವರು ಜಂಟಿಯಾಗಿ ಶುಕ್ರವಾರ ಜೊವಾನಾ ವಾಸ್ಕೊನ್ಸೆಲೋಸ್ ಅವರ ಕಲಾಕೃತಿ ಚಾ-ಚಾಯ್ (ಟೀ ಪಾಟ್)ನ ಸ್ಥಾಪನೆಯನ್ನು ಉದ್ಘಾಟಿಸಿದರು.
ಕೇಂದ್ರ ಸಚಿವರ ಪ್ರಕಾರ, ಈ ಕಲಾಕೃತಿಯು 17 ನೇ ಶತಮಾನದಲ್ಲಿ ಪೋರ್ಚುಗಲ್ನಲ್ಲಿ ಹುಟ್ಟಿಕೊಂಡ ಚಹಾವನ್ನು ನೀಡುವ 5 0’clock ಕ್ಲಾಕ್ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ಈ ಕಾರ್ಯಕ್ರಮಕ್ಕೆ ಪೋರ್ಚುಗೀಸ್ ಅಧ್ಯಕ್ಷರೊಂದಿಗೆ ಜೊವಾನಾ ವಾಸ್ಕೊನ್ಸೆಲೋಸ್ ಎಂಬ ಕಲಾವಿದರನ್ನು ಕೂಡ ಪಟೇಲ್ ಆಹ್ವಾನಿಸಿದರು.
ಸಾಂಸ್ಕೃತಿಕ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಪೋರ್ಚುಗಲ್ ಮುಂದಾಗುತ್ತಿವೆ, ಪರಸ್ಪರ ಸಹಕರಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ.
ವಸ್ತುಸಂಗ್ರಹಾಲಯದಲ್ಲಿ ‘ಟೀಪಾಟ್’ ಕಲಾಕೃತಿ ಅಳವಡಿಕೆ ಕುರಿತು ಮಾತನಾಡಿದ ಪೋರ್ಚುಗೀಸ್ ಅಧ್ಯಕ್ಷರು, ಕಲಾಕೃತಿಯು ಸಾಂಕೇತಿಕವಾಗಿ ಜನರ ನಡುವಿನ ಸಾಂಸ್ಕೃತಿಕ ಸೇತುವೆಗಳನ್ನು ಮತ್ತು ಉಭಯ ದೇಶಗಳ ನಡುವಿನ ಜನರ ಸಂಬಂಧಗಳನ್ನು ಚಿತ್ರಿಸುತ್ತದೆ ಎಂದು ಹೇಳಿದರು.
ಚಹಾವು ಪೋರ್ಚುಗಲ್ನಲ್ಲಿ ಸಂಜೆ 5 ಗಂಟೆಗೆ ಕುಟುಂಬ ಸಂಬಂಧವನ್ನು ಬಲಪಡಿಸುವ ಕುಟುಂಬ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಅವರು ರಾಷ್ಟ್ರ ರಾಜಧಾನಿಯಲ್ಲಿನ ಹೈದರಾಬಾದ್ ಹೌಸ್ನಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಇದು ಸೊಸಾ ಅವರು ಭಾರತಕ್ಕೆ ನೀಡಿದ ಮೊದಲ ಭೇಟಿ ಮಾತ್ರವಲ್ಲ, 2007 ರಿಂದ ಪೋರ್ಚುಗಲ್ನ ಯಾವುದೇ ಅಧ್ಯಕ್ಷರು ದೇಶಕ್ಕೆ ನೀಡಿದ ಮೊದಲ ಭೇಟಿ ಕೂಡ ಆಗಿದೆ.
ಭಾರತವನ್ನು ‘ಮಹಾಶಕ್ತಿ’ ಎಂದು ಬಣ್ಣಿಸಿದ ಸೊಸಾ ಅವರು ಉಭಯ ದೇಶಗಳ ನಡುವಿನ ಐತಿಹಾಸಿಕ ಸ್ನೇಹವನ್ನು ಬಲಪಡಿಸುವ ಬಗ್ಗೆ ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.