ಡೆಹ್ರಾಡೂನ್: ಉತ್ತರಾಖಂಡ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಮಹತ್ವಪೂರ್ಣ ಯಶಸ್ಸನ್ನು ದಾಖಲಿಸಿಕೊಂಡಿದ್ದಾರೆ. ಅವರು ಆಪರೇಷನ್ ಸ್ಮೈಲ್ ಮತ್ತು ಆಪರೇಷನ್ ಐಡೆಂಟಿಫಿಕೇಶನ್ ಅಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಕೇವಲ ಎರಡು ತಿಂಗಳಲ್ಲಿ ನಾಪತ್ತೆಯಾಗಿದ್ದ 315 ಮಕ್ಕಳು, 100 ಪುರುಷರು ಮತ್ತು 207 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ತಮ್ಮ ಪ್ರಮುಖ ಸಾಧನೆಯನ್ನು ಮಂಗಳವಾರ ಉತ್ತರಾಖಂಡ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ಷಿಸಿದ ಒಟ್ಟು 622 ಜನರಲ್ಲಿ 621 ಜನರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಮತ್ತು ಒಬ್ಬರನ್ನು ಪುನರ್ವಸತಿಗಾಗಿ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ‘ಆಪರೇಷನ್ ಐಡೆಂಟಿಫಿಕೇಶನ್’ ಅಡಿಯಲ್ಲಿ ರಾಜ್ಯ ಪೊಲೀಸರು 24 ಅಪರಿಚಿತ ಮೃತದೇಹಗಳ ಗುರುತಿನ್ನೂ ಪತ್ತೆ ಮಾಡಿದ್ದಾರೆ. ಈ ಪೈಕಿ 17 ಮಂದಿ ಸಾವನ್ನಪ್ಪಿದವರು ಉತ್ತರಾಖಂಡಕ್ಕೆ ಸೇರಿದವರು ಎಂದು ತಿಳಿದುಬಂದಿದ್ದು, ಉಳಿದ ಏಳು ಮೃತ ದೇಹಗಳು ಇತರ ರಾಜ್ಯಗಳಿಗೆ ಸೇರಿವೆ.
ನಾಪತ್ತೆಯಾದ ಮಕ್ಕಳು, ಪುರುಷರು ಮತ್ತು ಮಹಿಳೆಯರನ್ನು ಪತ್ತೆ ಹಚ್ಚಲು ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರಿಸಲು 2019 ರ ಡಿಸೆಂಬರ್ 1 ರಂದು ಪೊಲೀಸರು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಕಾನೂನು ಮತ್ತು ಅಪರಾಧದ ಮಹಾನಿರ್ದೇಶಕ (ಎಡಿಜಿ) ಅಶೋಕ್ ಕುಮಾರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.