ದುಬೈ: ಭಾರತೀಯ ಅಲ್ಟ್ರಾ ಮ್ಯಾರಥಾನ್ ಓಟಗಾರ ‘ಬೇರ್ಫೂಟ್ ಮಲ್ಲು’ ಎಂದೇ ಕರೆಯಲ್ಪಡುವ ಆಕಾಶ್ ನಂಬಿಯಾರ್ ಅವರು ಯುಎಇಯ ರಾಜಧಾನಿ ಅಬುಧಾಬಿಯಿಂದ ದುಬೈವರೆಗೆ ಓಡಿದ್ದಾರೆ. ವರದಿಗಳ ಪ್ರಕಾರ, ಈ ಮ್ಯಾರಥಾನ್ ಓಟಗಾರ 27 ಗಂಟೆಗಳ ಅವಧಿಯಲ್ಲಿ ಒಟ್ಟು 118 ಕಿ.ಮೀ ಓಡಿದ್ದಾರೆ. ಫಿಟ್ನೆಸ್ಗೆ ಆದ್ಯತೆ ನೀಡುವ ಉದ್ದೇಶದಿಂದ ಅಬುಧಾಬಿಯಿಂದ ದುಬೈಗೆ ಓಡುವ ನಿರ್ಧಾರವನ್ನು ಇವರು ತೆಗೆದುಕೊಂಡಿದ್ದಾರೆ.
ಆಕಾಶ್ ನಂಬಿಯಾರ್ ಅವರು ಅಬುಧಾಬಿ ಕಾರ್ನಿಚೆಯಿಂದ ಜನವರಿ 25 ರಂದು E11 ಹೆದ್ದಾರಿ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಜನವರಿ 26 ರಂದು ದುಬೈನ ಇಬ್ನ್ ಬಟುಟಾ ಮಾಲ್ನಲ್ಲಿ ತನ್ನ ಓಟವನ್ನು ಮುಕ್ತಾಯಗೊಳಿಸಿದರು. ಭಾರತ ಗಣರಾಜ್ಯೋತ್ಸವ ಆಚರಿಸಿದಂತೆ ಅವರು ಓಟ ಸಮಾಪಣಗೊಂಡಿತು.
ಸ್ಥಳೀಯ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅವರು, ಯುವಕರಿಗೆ ಫಿಟ್ನೆಸ್ ಅನ್ನು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂಬ ಸಂದೇಶವನ್ನು ನೀಡಿದರು. ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಓಡಿರುವುದಾಗಿ ಅವರು ತಿಳಿಸಿದರು.
ಕ್ಯಾನ್ಸರ್, ಹೃದಯ ಸಮಸ್ಯೆಗಳು ಮತ್ತು ಮಧುಮೇಹದಂತಹ ರೋಗಗಳು ಹೆಚ್ಚುತ್ತಿವೆ. ಧೂಮಪಾನ ಮತ್ತು ಬೊಜ್ಜು ಪ್ರಕರಣಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಇದಕ್ಕೆ ಫಿಟ್ ನೆಸ್ ಕಾಯ್ದುಕೊಳ್ಳುವುದು ಅತೀ ಮುಖ್ಯ. ಅಬುಧಾಬಿ ನಗರದಿಂದ ಮಕ್ಕಾದವರೆಗೆ ಓಡುವ ಮೂಲಕ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ ತನ್ನ ಸ್ನೇಹಿತ ಖಲೀದ್ ಅಲ್ ಸುವೈದಿ ಅವರಿಂದ ಸ್ಫೂರ್ತಿ ಪಡೆದುಕೊಂಡು ಓಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನಂಬಿಯಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.