ಲಕ್ನೋ : ಸ್ನಿಫರ್ ಗುಂಡುಗಳ ವಿರುದ್ಧ ರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದ್ದ ಭಾರತೀಯ ಸೇನೆಯ ಮೇಜರ್, ಈಗ ಮಹತ್ವದ ಹೆಲ್ಮೆಟ್ ಅನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ. ಈ ಹೆಲ್ಮೆಟ್ ಎಕೆ -47 ಬುಲೆಟ್ ಅನ್ನು 10 ಮೀಟರ್ ದೂರದಿಂದ ತಡೆಹಿಡಿಯಬಲ್ಲದಂತಹ ವಿಶ್ವದ ಮೊದಲನೆಯ ಹೆಲ್ಮೆಟ್ ಆಗಿದೆ ಎಂದು ಮೂಲಗಳು ತಿಳಿಸಿವೆ.
“ಬ್ಯಾಲಿಸ್ಟಿಕ್ ಹೆಲ್ಮೆಟ್ ಅನ್ನು ಮೇಜರ್ ಅನೂಪ್ ಮಿಶ್ರಾ ಅವರು ಅಭೇದ್ಯ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ, ಅವರು ಸಂಪೂರ್ಣ ದೇಹದ ರಕ್ಷಣೆಯ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಸಹ ಅಭಿವೃದ್ಧಿಪಡಿಸಿದ್ದು, ಇದು ಸ್ನಿಫರ್ ರೈಫಲ್ಗಳನ್ನು ಕೂಡ ತಡೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ” ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಮೇಜರ್ ಅನೂಪ್ ಮಿಶ್ರಾ ಅವರು ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನ ಭಾಗವಾಗಿದ್ದು, ಇವರ ವಿಂಟೇಜ್ ಬುಲೆಟ್ ಪ್ರೂಫ್ ಜಾಕೆಟ್ಗೆ ಗುಂಡೇಟು ತಗುಲಿದ ನಂತರ ಅವರು ಗುಂಡು ನಿರೋಧಕ ಜಾಕೆಟ್ಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದರೊಂದಿಗೆ, ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಖಾಸಗಿ ಸಂಸ್ಥೆಯೊಂದಿಗೆ ಸಹಯೋಗ ಮಾಡಿಕೊಂಡು ಭಾರತದ ಮೊದಲ ಮತ್ತು ವಿಶ್ವದ ಅಗ್ಗದ ಗನ್ ಶಾಟ್ ಲೊಕೇಟರ್ ಅನ್ನು ಅಭಿವೃದ್ಧಿಪಡಿಸಿದೆ. ಇದು 400 ಮೀಟರ್ ದೂರದಿಂದ ಬುಲೆಟ್ನ ನಿಖರವಾದ ಸ್ಥಳವನ್ನು ಕಂಡುಹಿಡಿಯಬಲ್ಲದು, ಇದು ಭಯೋತ್ಪಾದಕರನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.
“2016-17ರ ಅವಧಿಯಲ್ಲಿ, ಭಾರತೀಯ ಸೇನೆಗೆ ಕಂದಾಯ ಮಾರ್ಗದ ಮೂಲಕ 50,000 ಗುಂಡು ನಿರೋಧಕ ಜಾಕೆಟ್ಗಳನ್ನು ಖರೀದಿಸಲಾಗಿತ್ತು. ಬೈ (ಇಂಡಿಯನ್) ವಿಭಾಗದ ಅಡಿಯಲ್ಲಿ ಬಂಡವಾಳ ಮಾರ್ಗದ ಮೂಲಕ 1,86,138 ಬಿಪಿಜೆಗಳನ್ನು ಖರೀದಿಸುವ ಒಪ್ಪಂದವನ್ನು 2018 ರ ಏಪ್ರಿಲ್ನಲ್ಲಿ ತೀರ್ಮಾನಿಸಲಾಗಿದೆ. ಇದಲ್ಲದೆ, ಬಂಡವಾಳ ಮಾರ್ಗದ ಮೂಲಕ 1,58,279 ಬ್ಯಾಲಿಸ್ಟಿಕ್ ಹೆಲ್ಮೆಟ್ ಖರೀದಿಗೆ ಡಿಸೆಂಬರ್ 2016 ರಲ್ಲಿ ತೀರ್ಮಾನಿಸಲಾಯಿತು” ಎಂದು ಆಗಿನ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು ಜುಲೈ 2018 ರಲ್ಲಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.
ಪ್ರಮುಖ ಯುದ್ಧತಂತ್ರದ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಯಾದ ಪುಣೆಯ ಕಾಲೇಜ್ ಆಫ್ ಮಿಲಿಟರಿ ಎಂಜಿನಿಯರಿಂಗ್ (CME) ಕಾರ್ಪ್ಸ್ ಆಫ್ ಎಂಜಿನಿಯರ್ಗಳ ವಿದ್ಯಾ ಸಂಸ್ಥೆಯಾಗಿದೆ.
ಎಲ್ಲಾ ಶಸ್ತ್ರಾಸ್ತ್ರ ಮತ್ತು ಸೇವೆಗಳ ಸಿಬ್ಬಂದಿಗೆ ಯುದ್ಧ ಎಂಜಿನಿಯರಿಂಗ್, CBRN ಪ್ರೊಟೆಕ್ಷನ್, ವರ್ಕ್ಸ್ ಸರ್ವೀಸಸ್ ಮತ್ತು ಜಿಐಎಸ್ ವಿಷಯಗಳಲ್ಲಿ ಸಲಹೆಗಳನ್ನು ನೀಡುವುದರ ಜೊತೆಗೆ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಸಿಬ್ಬಂದಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು CME ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.