ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಮಹತ್ವಾಕಾಂಕ್ಷೆಯ ಆಟಗಾರರು ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಪ್ರೇರಣಾದಾಯಕರಾಗಿ ಉಳಿಯುತ್ತಾರೆ. ಕ್ರಿಕೆಟ್ ಅನ್ನು ಅತೀವವಾಗಿ ಪ್ರೀತಿಸುವ ಭಾರತದಲ್ಲಿ, ದೊಡ್ಡ ಮೈದಾನದಲ್ಲಿ ಆಡಬೇಕೆಂಬ ಅದಮ್ಯ ಉತ್ಸಾಹವನ್ನು ಇಟ್ಟುಕೊಂಡು ಅನೇಕರು ಕ್ರಿಕೆಟ್ ಅಭ್ಯಾಸ ನಡೆಸುತ್ತಿರುತ್ತಾರೆ. ಆದರೆ ಅವಕಾಶ ಎಂಬುದು ಎಲ್ಲರಿಗೂ ದೊರಕುವುದಿಲ್ಲ. ಅವಕಾಶ ಸಿಕ್ಕವರೆಲ್ಲರೂ ಯಶಸ್ಸನ್ನು ಕಾಣುವುದಿಲ್ಲ, ನಿರೀಕ್ಷೆ ಮಟ್ಟವನ್ನು ತಲುಪುವುದಿಲ್ಲ. ಅಪಾರ ಪ್ರತಿಭೆ ಇದ್ದರೂ ಭಾರತೀಯ ಕ್ರೀಡಾಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಯಶಸ್ವಿ ಜೈಸ್ವಾಲ್ ಈಗ ನಂಬಲಸಾಧ್ಯ ರೀತಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದ್ದಾನೆ. ಒಂದೊಮ್ಮೆ ಮುಂಬಯಿ ಬೀದಿ ಬದಿಯಲ್ಲಿ ಪಾನಿ ಪುರಿ ಮಾರುತ್ತಿದ್ದ ಹುಡುಗ ಇಂದು ಅಂಡರ್ 19 ಐಸಿಸಿ ವಿಶ್ವಕಪ್ 2019ರಲ್ಲಿ ಚಾಂಪಿಯನ್ಗಳು ಹೇಗೆ ಹೊರಹೊಮ್ಮುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಕ್ರೀಡಾಪಟು ಆದವನಿಗೆ ಸ್ವ-ನಂಬಿಕೆ, ಆತ್ಮವಿಶ್ವಾಸ ಎಂಬ ಅತ್ಯಂತ ಪ್ರಾಮುಖ್ಯತೆಯ ಗುಣಗಳು ಇರಬೇಕಾದುದು ಅವಶ್ಯಕ. ಸನ್ನಿವೇಶ ಹೇಗೆಯೇ ಇರಲಿ, ತಾನು ದೊಡ್ಡ ಮೈದಾನಕ್ಕೆ ಸೇರಿದವನು, ಕೋಟ್ಯಂತರ ಅಭಿಮಾನಿಗಳಿಗಾಗಿ ಇರುವವನು ಎಂಬ ನಂಬಿಕೆ ಕ್ರೀಡಾಪಟುವಿಗೆ ಇದ್ದರೆ ಆತ ಯಶಸ್ವಿ ಜೈಸ್ವಾಲ್ ಆಗಿ ಹೊರಹೊಮ್ಮುತ್ತಾನೆ. ಭಾರತದ ಪ್ರಾದೇಶಿಕ ಪಂದ್ಯಗಳಲ್ಲಿ ರನ್ ಮಳೆಗಳನ್ನು ಸುರಿಸಿರುವ ಎಡಗೈ ಆರಂಭಿಕ ಜೈಸ್ವಾಲ್, ಐಸಿಸಿ ಯು19 ವಿಶ್ವಕಪ್ ಪಂದ್ಯದ ಫೈನಲ್ನಲ್ಲಿ ಇಡೀ ಜಗತ್ತೇ ತನ್ನನ್ನು ತಿರುಗಿ ನೋಡುವಂತೆ ಮಾಡಿದ್ದಾನೆ. ತಾನು ಆಡುತ್ತಿರುವುದು ಅತೀದೊಡ್ಡ ಮೈದಾನದಲ್ಲಿ ಎಂಬ ಅರಿವು ಯಶಸ್ವಿಗೆ ಇತ್ತು. ಯುವರಾಜ್ ಸಿಂಗ್, ಝಹೀರ್ ಖಾನ್, ಮೊಹಮ್ಮದ್ ಖೈಫ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಸುಭ್ ಮನ್ ಗಿಲ್ ಮತ್ತು ಪೃಥ್ವಿ ಶಾ ಅವರಂತಹ ಸೂಪರ್ ಸ್ಟಾರ್ ಆಟಗಾರರು ಇಲ್ಲೇ ಮುನ್ನಲೆಗೆ ಬಂದಿದ್ದು ಎಂಬುದನ್ನು ಆತ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದ.
19 ವರ್ಷದೊಳಗಿನವರ ವಿಶ್ವಕಪ್, 50 ಓವರ್ಗಳ ವಿಶ್ವಕಪ್ ಸೃಷ್ಟಿ ಮಾಡುವ ಅಬ್ಬರ, ಪ್ರಚಾರದ ಅರ್ಧದಷ್ಟನ್ನು ಕೂಡ ಸೃಷ್ಟಿಸುವುದಿಲ್ಲ. ಆದರೂ ಭಾರತವು ಪಾಕಿಸ್ಥಾನದೊಂದಿಗೆ ಹೋರಾಟ ನಡೆಸಲು ಮುಂದಾಗುವಾಗ ಯು 19ನಲ್ಲೂ ಲಕ್ಷಾಂತರ ಜನರು ತಮ್ಮ ಮೊಬೈಲ್ ಪರದೆಗಳು ಮತ್ತು ಟಿವಿ ಸೆಟ್ಗಳಿಗೆ ಅಂಟಿಕೊಂಡಿರುತ್ತಾರೆ. ಟಿಕೆಟ್ಗಳು ಬಿಸಿ ಕೇಕ್ಗಳಂತೆ ಮಾರಾಟವಾಗುತ್ತವೆ. ಯು189 ಸೆಮಿಫೈನಲ್ ಪಂದ್ಯದಲ್ಲೂ ಇದೇ ಆಯಿತು. ಪಾಕಿಸ್ಥಾನ ಮತ್ತು ಭಾರತ ಪರಸ್ಪರ ಪ್ರತಿಸ್ಪರ್ಧಿ ಎಂದು ತಿಳಿದಾಗ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಕ್ರೀಡಾ ಮೋಡಿಗೊಳಗಾದರು. ಹೆಚ್ಚಿನ ಒತ್ತಡದ ಪಂದ್ಯದಲ್ಲಿ ಗೆಲುವು ಸಾಧಿಸಲೇ ಬೇಕು ಎಂಬ ಛಲ ಎರಡೂ ಕಡೆಯವರಿಗೂ ಇದ್ದೇ ಇರುತ್ತದೆ. ಚಾಂಪಿಯನ್ಗಳು ಯಾವತ್ತೂ ಅತ್ಯುತ್ತಮ ಪ್ರದರ್ಶನಗಳನ್ನು ಅತಿದೊಡ್ಡ ಪಂದ್ಯಗಳಿಲ್ಲಿ ನೀಡುವುದಕ್ಕಾಗಿಯೇ ಉಳಿಸಿಕೊಂಡಿರುತ್ತಾರೆ, ಅಂತೆಯೇ 18 ವರ್ಷ ವರ್ಷದ ಜೈಸ್ವಾಲ್ ಕೂಡ ಮೆನ್ ಇನ್ ಗ್ರೀನ್ ವಿರುದ್ಧದ ಪಂದ್ಯದಲ್ಲಿ ಅಜೇಯ 105 ರನ್ಗಳ ಮಳೆ ಸುರಿಸಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡರು. ಭಾರತ ವಿಜಯಿ ಆಗಿ ಹೊರಹೊಮ್ಮಿತು.
ಅಲ್ಪ 173 ರನ್ಗಳ ಗುರಿಯನ್ನು ಭಾರತ ಬೆನ್ನಟ್ಟಿದರೂ, ಯಶಸ್ವಿ ತಮ್ಮ ವಿಕೆಟ್ ಕಬಳಿಸಲು ಪಾಕ್ ಬೌಲರ್ಗಳಿಗೆ ಅವಕಾಶವನ್ನೇ ನೀಡಲಿಲ್ಲ. ದೊಡ್ಡ ಆಟಗಾರರು ಯಾವಾಗಲೂ ಪಂದ್ಯಗಳನ್ನು ಸಮಾಪನಗೊಳಿಸುತ್ತಾರೆ ಮತ್ತು ತಮ್ಮ ಕೆಲಸ ಮುಗಿದ ನಂತರವೇ ಸಂಭ್ರಮಪಡುತ್ತಾರೆ. ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ವರ್ಷಗಳಿಂದ ಅದನ್ನೇ ಮಾಡುತ್ತಿದ್ದಾರೆ. ಯಶಸ್ವಿ ಮಾಡಿದ್ದು ಕೂಡ ಇದನ್ನೇ. ಅತ್ಯುತ್ತಮ ಫಿನಿಶರ್ ಆಗಿ ಆತ ಹೊರಹೊಮ್ಮಿದ.
18 ನೇ ವಯಸ್ಸಿನಲ್ಲಿ ಈ ಮಟ್ಟದ ಪರಿಪಕ್ವತೆಯನ್ನು ಯಶಸ್ವಿ ತೋರಿಸಿದ್ದರ ಹಿಂದೆ ಆತನ ಪರಿಶ್ರಮ ಇದೆ. ಭವಿಷ್ಯದಲ್ಲಿ ಭಾರತದ ಕ್ರಿಕೆಟ್ ತಾರೆ ಆಗಿ ಹೊರಹೊಮ್ಮುವ ಎಲ್ಲಾ ಅರ್ಹತೆಯನ್ನು ಸಾಬೀತುಪಡಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.