ಲಕ್ನೋ: ಮಿತ್ರ ರಾಷ್ಟ್ರಗಳಿಗೆ ರಫ್ತು ಮಾಡಬಹುದಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನೇಕ ದೇಶಗಳು ಆಸಕ್ತಿ ತೋರಿಸಿವೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮುಖ್ಯಸ್ಥ ಸತೀಶ್ ರೆಡ್ಡಿ ಗುರುವಾರ ಹೇಳಿದ್ದಾರೆ.
ರಕ್ಷಣಾ ರಫ್ತುಗಳನ್ನು 5 ಬಿಲಿಯನ್ಗೆ ಹೆಚ್ಚಿಸುವ ಗುರಿಯನ್ನು ಸಾಧಿಸಬಹುದಾಗಿದೆ ಮತ್ತು ಡಿಆರ್ಡಿಒ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.
“ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ನಾವು ರಫ್ತು ಮಾಡಲು ಬಯಸುವ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ಕ್ಷಿಪಣಿ ವ್ಯವಸ್ಥೆಯ ಮಾಹಿತಿ ಕೇಳಿ ನಮಗೆ ಅನೇಕ ಪ್ರಶ್ನೆಗಳು ಬರುತ್ತಿವೆ” ಎಂದು ಅವರು ಹೇಳಿದ್ದಾರೆ.
ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ಬ್ರಹ್ಮೋಸ್ ಕ್ಷಿಪಣಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿಸಿವೆ. ಈ ಕ್ಷಿಪಣಿ ಸುಮಾರು 300 ಕಿ. ಮೀ. ವ್ಯಾಪ್ತಿಯ ಗುರಿಯನ್ನು ಹೊಡೆಯಬಲ್ಲುದಾಗಿದೆ ಎಂದಿದ್ದಾರೆ.
“ನಾವು ರಫ್ತಿಗಾಗಿ ರಾಡಾರ್, ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು, ಮೇಲ್ಮೈಯಿಂದ ವಾಯು ಕ್ಷಿಪಣಿಗಳು ಮತ್ತು ವಿವಿಧ ರೀತಿಯ ಟಾರ್ಪಿಡೊಗಳನ್ನು ಸಹ ನೀಡಬಲ್ಲೆವು” ಎಂದು ರೆಡ್ಡಿ ಹೇಳಿದ್ದಾರೆ.
“ಮುಂದಿನ 5 ವರ್ಷಗಳಲ್ಲಿ 5 ಬಿಲಿಯನ್ ರಕ್ಷಣಾ ರಫ್ತು ಮಾಡುವ ಗುರಿ ಪ್ರಧಾನಮಂತ್ರಿ ನಮಗೆ ನೀಡಿದ ನಿರ್ದೇಶನವಾಗಿದೆ ಮತ್ತು ನಾವೆಲ್ಲರೂ ಗುರಿಯನ್ನು ತಲುಪುವತ್ತ ಕೆಲಸ ಮಾಡಬೇಕಾಗಿದೆ. ವರ್ಷಗಳಿಂದ ನಾವು ಅಭಿವೃದ್ಧಿಪಡಿಸುತ್ತಾ ಬಂದ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳ ಮೂಲಕ ನಾವಿದನ್ನು ಖಂಡಿತವಾಗಿಯೂ ಸಾಧಿಸಬಹುದು “ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.