ನವದೆಹಲಿ: ಭಾರತವು 200 ಕಿ. ಮೀ. ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯುವಂತಹ ಸಾಮರ್ಥ್ಯವಿರುವ ಹೊಸ ಯುದ್ಧತಂತ್ರದ ಖಂಡಾಂತರ ಕ್ಷಿಪಣಿಯನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಗೊಂಡಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸುತ್ತಿರುವ ಈ ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಗೆ ಪ್ರಣಾಶ್ ಎಂದು ಹೆಸರಿಸಲಾಗಿದೆ, ಅಧಿಕಾರಿಗಳು ಮಾಧ್ಯಮಗಳಿಗೆ DefExpo 2020 ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಭಾರತವನ್ನು ಜಾಗತಿಕ ರಕ್ಷಣಾ ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮಿಸುವ ಪ್ರಯತ್ನದ ಭಾಗವಾಗಿ ರಕ್ಷಣಾ ಉತ್ಪಾದನಾ ಇಲಾಖೆಯು ಇಲ್ಲಿ ಮಿಲಿಟರಿ ವ್ಯವಸ್ಥೆಗಳ ಪ್ರದರ್ಶನವನ್ನು ಆಯೋಜಿಸಿದೆ.
ಹೊಸ ಶಸ್ತ್ರಾಸ್ತ್ರವು ಡಿಆರ್ಡಿಒ ಅಭಿವೃದ್ಧಿಪಡಿಸಿದ ಪ್ರಹಾರ್ ಕ್ಷಿಪಣಿಯ ಮೂಲವನ್ನು ಹೋಲುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಹಾರ್ 150 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಆದರೆ ಸೇನೆಗೆ ಅದಕ್ಕಿಂತಲೂ ಉತ್ತಮ ವ್ಯಾಪ್ತಿಯನ್ನು ಹೊಂದಿರುವ ಶಸ್ತ್ರಾಸ್ತ್ರದ ಅಗತ್ಯವಿದೆ. ಹೀಗಾಗಿಯೇ ಪ್ರಣಾಶ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಪ್ರಣಾಶ್ ಸಂರಚನೆ ಈಗಾಗಲೇ ಮುಕ್ತಾಯಗೊಂಡಿದೆ ಮತ್ತು 2021ರ ಅಂತ್ಯದ ವೇಳೆಗೆ ಅಭಿವೃದ್ಧಿ ಪ್ರಯೋಗಗಳು ಪ್ರಾರಂಭವಾಗುತ್ತವೆ. ನಾವು ಅದನ್ನು ಎರಡು ವರ್ಷಗಳಲ್ಲಿ ಬಳಕೆದಾರರ ಪ್ರಯೋಗಗಳಿಗಾಗಿ ನೀಡಲು ಸನ್ನದ್ಧರಾಗಲಿದ್ದೇವೆ. ಸೇನೆಯು 200 ಕಿ.ಮೀ ವ್ಯಾಪ್ತಿಯಲ್ಲಿ ಕ್ಷಿಪಣಿಯನ್ನು ಬಯಸುತ್ತಿದೆ” ಎಂದು ಮತ್ತೋರ್ವ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.
ಪರಮಾಣು ರಹಿತ ಪ್ರಣಾಶ್ ಕ್ಷಿಪಣಿಯನ್ನು ಏಕ-ಹಂತದ ಸಾಲಿಡ್ ಪ್ರೊಪೆಲ್ಲಂಟ್ ಎಂಜಿನ್ ಮೂಲಕ ಚಾಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಮ್ಮೆ ಅಭಿವೃದ್ಧಿಪಡಿಸಿದ ನಂತರ, ಪ್ರಣಾಶ್ ಕ್ಷಿಪಣಿಯನ್ನು ಸ್ನೇಹಪರ ವಿದೇಶಗಳಿಗೆ ರಫ್ತು ಮಾಡಬಹುದು ಎಂದು ಅಧಿಕಾರಿ ಹೇಳಿದ್ದಾರೆ. “ಇದು ತನ್ನ ವ್ಯಾಪ್ತಿಯ ವಿಭಾಗದಲ್ಲೇ ವಿಶ್ವದ ಅಗ್ಗದ ಕ್ಷಿಪಣಿಗಳಲ್ಲಿ ಒಂದಾಗಿದೆ. ಅಲ್ಲದೆ, ಕ್ಷಿಪಣಿಯು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪ್ರಭುತ್ವ (ಎಂಟಿಸಿಆರ್)ದ ವ್ಯಾಪ್ತಿಯಿಂದ ಹೊರಗಿದೆ, ಎಂಟಿಸಿಆರ್ 300 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಕ್ಷಿಪಣಿಗಳ ಮೇಲೆ ರಫ್ತು ನಿರ್ಬಂಧವನ್ನು ವಿಧಿಸುತ್ತದೆ”ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.