ನವದೆಹಲಿ: ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, 1954ಗೆ ತಿದ್ದುಪಡಿಯನ್ನು ತರುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿಟ್ಟಿದೆ.
ಸರ್ಕಾರ ರಚನೆ ಮಾಡಿರುವ ಕರಡಿನ ಅನ್ವಯ, ತ್ವಚೆಯ ಕಾಂತಿ ಹೆಚ್ಚಿಸುತ್ತೇವೆ, ಎತ್ತರ ಹೆಚ್ಚಿಸುತ್ತೇವೆ, ಕೂದಲು ಉದುರುವಿಕೆ ನಿಲ್ಲಿಸುತ್ತೇವೆ, ತೂಕ ಕುಗ್ಗಿಸುತ್ತೇವೆ ಎಂದು ಸುಳ್ಳು ಜಾಹೀರಾತು ಪ್ರಕಟಿಸುವವರ ವಿರುದ್ಧ ಸರ್ಕಾರವು 50 ಲಕ್ಷ ರೂಪಾಯಿಗಳ ದಂಡ ಮತ್ತು ಐದು ವರ್ಷಗಳ ಸೆರೆವಾಸವನ್ನು ವಿಧಿಸಲಿದೆ.
ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮಿಡೀಸ್ (ತಿದ್ದುಪಡಿ) ಮಸೂದೆ 2020 ರ ಹೊಸ ಕರಡು ಅಡಿಯಲ್ಲಿ, ಮೊದಲ ಬಾರಿ ತಪ್ಪು ಮಾಡಿದಾಗ 10 ಲಕ್ಷ ರೂ.ವರೆಗೆ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ. ನಂತರದ ಅಪರಾಧಗಳು ಸಾಬೀತಾದರೆ, ಜೈಲು ಶಿಕ್ಷೆ ಐದು ವರ್ಷ ಮತ್ತು ದಂಡ 50 ಲಕ್ಷ ರೂ. ಆಗಿರುತ್ತದೆ.
ಪ್ರಸ್ತುತ ಇರುವ ಕಾನೂನಿನಡಿ, ಮೊದಲ ಅಪರಾಧಕ್ಕೆ 6 ತಿಂಗಳ ಸಜೆ ಇದೆ. ಎರಡನೇ ಅಪರಾಧಕ್ಕೆ 1 ವರ್ಷಗಳ ಸಜೆ ಇದೆ.
ಬದಲಾಗುತ್ತಿರುವ ಕಾಲ ಮತ್ತು ತಂತ್ರಜ್ಞಾನದೊಂದಿಗೆ ಹೆಜ್ಜೆಯಿಟ್ಟು ಸವಾಲುಗಳನ್ನು ಎದುರಿಸುವ ಸಲುವಾಗಿ ಈ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.