ಲಕ್ನೋ : ಡ್ರೋನ್ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡುವ ಸಲುವಾಗಿ ಭಾರತದ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಲಿಮಿಟೆಡ್ (ಡಿಟಿಎಲ್) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಲಿಮಿಟೆಡ್ (ಐಎಐ) ನೊಂದಿಗೆ ಡೆಫ್ ಎಕ್ಸ್ಪೋ 2020 ರಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
“ಈ ಸಹಯೋಗವು ಎಚ್ಎಎಲ್ಗೆ ತನ್ನ ಉತ್ಪನ್ನಗಳನ್ನು ರಕ್ಷಣಾ ಗ್ರಾಹಕರಿಗೆ ವಿಸ್ತರಿಸಲು, ನಿರ್ಣಾಯಕ ತಂತ್ರಜ್ಞಾನಗಳನ್ನು ಪಡೆದಕೊಳ್ಳಲು ಮತ್ತು ದೇಶದಲ್ಲಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ವಿಶೇಷವಾಗಿ ಯುಎವಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ” ಎಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಎಚ್ಎಎಲ್ನ ಆರ್. ಮಾಧವನ್ ಹೇಳಿದರು.
ಐಎಐ ಅಧ್ಯಕ್ಷ ಮತ್ತು ಸಿಇಒ ನಿಮ್ರೋಡ್ ಶೆಫರ್ ಮಾತನಾಡಿ, “ಭಾರತವು ಡ್ರೋನ್ಗಳಿಗೆ ಒಂದು ಪ್ರಮುಖ ಕಾರ್ಯತಂತ್ರದ ಮಾರುಕಟ್ಟೆಯಾಗಿದೆ ಮತ್ತು ನಮ್ಮ ಕಂಪನಿಯ ವ್ಯಾಪಕ ಅನುಭವದ ಬಗ್ಗೆ ನಮಗೆ ವಿಶ್ವಾಸವಿದೆ. ಎಚ್ಎಎಲ್ ಮತ್ತು ಡಿಟಿಎಲ್ನ ತಾಂತ್ರಿಕ ಸಾಮರ್ಥ್ಯಗಳು ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗುತ್ತವೆ” ಎಂದಿದ್ದಾರೆ.
ಭಾರತದಲ್ಲಿ, ಯುದ್ಧಗಳು ಮತ್ತು ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ (ಐಎಸ್ಆರ್)ದಂತಹ ಇತರ ಯುದ್ಧತಂತ್ರದ ಕಾರ್ಯಾಚರಣೆಗಳಲ್ಲಿ ಡ್ರೋನ್ಗಳು ಮಹತ್ವದ ಪಾತ್ರ ವಹಿಸುತ್ತಿವೆ.
ಮುಂದಿನ ವರ್ಷಗಳಲ್ಲಿ, ಭಾರತೀಯ ರಕ್ಷಣಾ ಪಡೆಗಳು ಅಂತಹ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಸಂಖ್ಯೆಯ ಡ್ರೋನ್ಗಳನ್ನು ನಿಯೋಜಸಿಸಿಕೊಳ್ಳುವ ನಿರೀಕ್ಷೆಯಿದೆ.
ವಿಶ್ವ ದರ್ಜೆಯ ಮತ್ತು ಯುದ್ಧ-ಪರಿಪಕ್ವತೆಯ ಡ್ರೋನ್ಗಳನ್ನು ತಯಾರಿಸಲು ಎಚ್ಎಎಲ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಸಾಮರ್ಥ್ಯ ಮತ್ತು ಮೂಲಸೌಕರ್ಯವನ್ನು ಹೊಂದಿದೆ. ಐಎಐನ ದೀರ್ಘಕಾಲದ ಪಾಲುದಾರನಾಗಿರುವ ಎಚ್ಎಎಲ್, 2004 ರಿಂದ ಭಾರತೀಯ ಪಡೆಗಳಿಗೆ ಐಎಐ ಪೂರೈಸುವ ಎಲ್ಲಾ ಶ್ರೇಣಿಯ ಡ್ರೋನ್ಗಳ ಡಿಪೋ ಮಟ್ಟದ ನಿರ್ವಹಣೆಯಲ್ಲಿ ತೊಡಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.