ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟದ ಕುರಿತು ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಅವರು ಮಾಡಿದ ಕೆಲವು ಪ್ರತಿಕ್ರಿಯೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಸಂಸದರು ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧಿಯವರ ಕೊಡುಗೆಯನ್ನು ‘ನಾಟಕ’ ಎಂದು ಹೇಳುವ ಮೂಲಕ ಅವರಿಗೆ ಅವಮಾನಿಸಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ.
ಇಂಡಿಯಾ ಟುಡೆ “ಬಿಜೆಪಿಯ ಅನಂತ್ಕುಮಾರ್ ಹೆಗ್ಡೆ ಅವರು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಹೋರಾಟವನ್ನು’ ನಾಟಕ ‘ಎಂದು ಕರೆದಿದ್ದಾರೆ ” ಎಂದಿದೆ. ಅದೇ ವರದಿ ‘ಶನಿವಾರ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುವಾಗ ಉತ್ತರ ಕನ್ನಡದ ಲೋಕಸಭಾ ಸಂಸದ ಅನಂತ್ಕುಮಾರ್ ಹೆಗಡೆ ಅವರು ಮಹಾತ್ಮಾ ಗಾಂಧಿಯವರ ಉಪವಾಸ ಮತ್ತು ಸತ್ಯಾಗ್ರಹವನ್ನು “ನಾಟಕ” ಎಂದು ಬಣ್ಣಿಸಿದರು” ಎಂದಿದೆ.
ಈ ಕುರಿತು ಟ್ವೀಟ್ ಮಾಡಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಅವರು ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಇಂಡಿಯಾ ಟುಡೆ ವರದಿಯನ್ನು ಆಧರಿಸಿ ಅವರು ಟ್ವೀಟ್ ಮಾಡಿದ್ದಾರೆ.
Mahatma Gandhi does not need a certificate from cadre of Britishers “Chamchas & Spies”
High time BJP is renamed as “Nathuram Godse Party” https://t.co/5gC7f4ZXyZ
— Jaiveer Shergill (@JaiveerShergill) February 3, 2020
ಮಹಾತ್ಮಾ ಗಾಂಧಿ ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆ ಕುರಿತು ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಿದ ಹಿನ್ನಲೆಯಲ್ಲಿ ಲೋಕಸಭೆಯನ್ನು ಇಂದು ಮಧ್ಯಾಹ್ನ 12 ರವರೆಗೆ ಮುಂದೂಡಲಾಗಿದೆ ಎಂದು ವರದಿಗಳು ಹೇಳಿವೆ. ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಅವರು, ಬಿಜೆಪಿ ಸಂಸದರನ್ನು “ಆಜ್ ಯೆ ಮಹಾತ್ಮ ಗಾಂಧಿ ಕೋ ಗಾಲಿ ದೇತೇ ಹೈನ್. ಯೇ ರಾವನ್ ಕ ಔಲಾದ್ ಹೈ. ರಾಮ್ ಕೆ ಪೂಜಾರಿ ಕಾ ಯೆ ಅಪಮಾನ್ ಕರ್ ರಹೇ ಹೈ” ಎಂದಿದ್ದಾರೆ.
Lok Sabha adjourned till 12 pm after uproar by opposition over BJP MP Anant Kumar Hegde’s statement against Mahatma Gandhi. pic.twitter.com/rbUuBbWkzq
— ANI (@ANI) February 4, 2020
ಆದರೆ ತಮ್ಮ ಭಾಷಣದಲ್ಲಿ ಗಾಂಧಿ ಬಗ್ಗೆ ಹೆಸರನ್ನು ಉಲ್ಲೇಖಿಸದೆಯೇ ಅನಂತ್ ಕುಮಾರ್ ಹೆಗಡೆ ಅವರು ಟಾರ್ಗೆಟ್ ಆಗಿದ್ದಾರೆ ಎಂಬುದು ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿಯ ವದಂತಿಗಳು ಹಬ್ಬುತ್ತವೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
ಫೆಬ್ರವರಿ 1 ರಂದು ವೀರ್ ಸಾವರ್ಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪುಸ್ತಕದ ಲೇಖಕ ಜಿ.ಬಿ.ಹರೀಶ್ ಮತ್ತು ಇತರರು ಉಪಸ್ಥಿತರಿದ್ದರು. ಅವರ 47 ನಿಮಿಷಗಳ ಸುದೀರ್ಘ ಭಾಷಣದ ಸಂಪೂರ್ಣ ವೀಡಿಯೊವನ್ನು ಸಂವಾದ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದೆ.
ಕನ್ನಡದಲ್ಲಿ ಮಾಡಿದ ಭಾಷಣದಲ್ಲಿ, ಅವರು ಎಲ್ಲಿಯೂ ಮಹಾತ್ಮ ಗಾಂಧಿ ಅಥವಾ ನೆಹರೂ ಹೆಸರನ್ನು ಬಳಸಿಲ್ಲ. ಮಹಾನ್ ಹೋರಾಟಗಾರರ ವಿಚಾರಗಳು ಜನರ ಮನಸ್ಸನ್ನು ಹೇಗೆ ಆಳಿದವು ಎಂಬುದರ ಕುರಿತು ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದ್ದಾರೆ.
ವೀರ್ ಸಾವರ್ಕರ್ ಅವರಂತಹ ಚಿತ್ರಹಿಂಸೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡುತ್ತಾ ಹೆಗಡೆ ಅವರು, ಬ್ರಿಟಿಷರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ ಕೆಲವರು ‘ಮಹಾಪುರುಷರು’ ಎಂದು ಕರೆಯಲ್ಪಟ್ಟರು ಎಂದಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಅನೇಕರು ಸಾವರ್ಕರ್ ಮತ್ತು ಭಗತ್ ಸಿಂಗ್ ಅವರಂತೆ ತೊಂದರೆ ಅನುಭವಿಸಲಿಲ್ಲ ಎಂಬ ಅಂಶವನ್ನು ಅವರು ಒತ್ತಿ ಹೇಳಿದ್ದಾರೆ. ಸುಳ್ಳು ಇತಿಹಾಸವನ್ನು ನಮಗೆ ಕಲಿಸಲಾಗಿದೆ. ಇತಿಹಾಸ ಸುಳ್ಳುಗಳಿಂದ ಕೂಡಿದೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಕೇವಲ ಒಂದು ಚಿಂತನೆಯ ಹರಿವನ್ನು ಬೆಂಬಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಾಸ್ತವವಾಗಿ, ಅವರು ತಮ್ಮ ಭಾಷಣದಲ್ಲಿ ಒಂದು ಬಾರಿ ಸಹ ಕಾಂಗ್ರೆಸ್ ಬಗ್ಗೆ ಉಲ್ಲೇಖಿಸಿಲ್ಲ. ಅನಂತ್ಕುಮಾರ್ ಹೆಗಡೆ ಅವರು ಯಾವುದೇ ರಾಜಕೀಯ ಪಕ್ಷವನ್ನು ಅಥವಾ ಮಹಾತ್ಮ ಗಾಂಧಿಯನ್ನು ಅಥವಾ ಬೇರೆಯವರನ್ನು ಉಲ್ಲೇಖಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಾನು ಕೇವಲ ಸ್ವಾತಂತ್ರ್ಯ ಹೋರಾಟವನ್ನು ವರ್ಗೀಕರಿಸಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.
BJP MP Anant Kumar Hegde on his statement against Mahatma Gandhi: I own my statement made on 1 Feb, 2020. I never made any reference to any political party or Mahatma Gandhi or anybody else, I was just trying to categorize freedom struggle. pic.twitter.com/MKxES1s3Hr
— ANI (@ANI) February 4, 2020
ಅನಂತ್ ಕುಮಾರ್ ಹೆಗಡೆ ಬಳಸಿದ ‘ಮಹಾಪುರುಷರು’ ಮತ್ತು ‘ಉಪವಾಸ ಸತ್ಯಾಗ್ರಹ’ ಎಂಬ ಪದವನ್ನು ಕೇಳುವ ಮೂಲಕ ಅವರು ಮಹಾತ್ಮಾ ಗಾಂಧಿಯವರ ಬಗ್ಗೆ ಮಾತನಾಡಿದ್ದಾರೆ ಎಂಬ ತೀರ್ಮಾನಕ್ಕೆ ಕನ್ನಡದ ಬಗ್ಗೆ ಯಾವುದೇ ಜ್ಞಾನವಿಲ್ಲದವರು ಅಥವಾ ಅವರ ಭಾಷಣ ಕೇಳದೆ, ಕೇವಲ ಮಾಧ್ಯಮಗಳು ಮತ್ತು ಸುದ್ದಿ ಪೋರ್ಟಲ್ ನೋಡಿ ಕೆಲವರು ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೂ ವಿಚಿತ್ರ ಸಂಗತಿಯೆಂದರೆ, ಹಲವಾರು ಕನ್ನಡ ಮಾಧ್ಯಮಗಳು ಆನ್ಲೈನ್ನಲ್ಲಿ ಉಚಿತವಾಗಿ ಇವರ ಭಾಷಣ ಲಭ್ಯವಿದ್ದರೂ ಕೇಳದೆ ಸುಳ್ಳು ಸುದ್ದಿಯನ್ನು ಹಬ್ಬಿಸಿವೆ.
ಅದೇ ಭಾಷಣದಲ್ಲಿ ಅನಂತ್ಕುಮಾರ್ ಹೆಗಡೆ ಅವರು ಭಾರತದ ಇಸ್ಲಾಮಿಕ್ ಲೂಟಿ ಮತ್ತು ಬ್ರಿಟಿಷ್ ಶಿಕ್ಷಣದ ಬಗ್ಗೆ ಮಾತನಾಡುತ್ತಾರೆ, ಇದು ನಮ್ಮ ಹಿಂದಿನ ವೈಭವವನ್ನು ಮರೆಯುವಂತೆ ಮಾಡಿದೆ ಎಂದಿದ್ದಾರೆ. ಅಜೆಂಡಾಕ್ಕೆ ತಕ್ಕಂತೆ ಇತಿಹಾಸವನ್ನು ಹೇಗೆ ತಿರುಚಲಾಗಿದೆ ಮತ್ತು ವೀರ್ ಸಾವರ್ಕರ್ ಅವರಂತಹ ಹೋರಾಟಗಾರರು ಇದನ್ನು ಸರಿಪಡಿಸಲು ಹೇಗೆ ಹೆಣಗಾಡಿದರು ಎಂಬುದರ ಕುರಿತು ಅವರ ಭಾಷಣವನ್ನು ಯಾವುದೇ ಸುದ್ದಿ ಪೋರ್ಟಲ್ಗಳಲ್ಲಿ ಉಲ್ಲೇಖ ಮಾಡಲಾಗಿಲ್ಲ.
ಅನಂತ್ಕುಮಾರ್ ಹೆಗಡೆ ಅವರು ಬುದ್ಧಿಜೀವಿಗಳ ನೆಚ್ಚಿನ ಟಾರ್ಗೆಟ್ ಆಗಿದ್ದಾರೆ, ಏಕೆಂದರೆ ಅವರು ಯಾವುದೇ ಪದಗಳನ್ನು ಅಂಜಿಕೆ ಇಲ್ಲದೆ ಹೇಳುತ್ತಾರೆ. ಸಂವಿಧಾನವನ್ನು ಬದಲಿಸಲು ಅವರು ಹೇಳಿದ್ದಾರೆ ಎಂದು ಈ ಹಿಂದೆ ಟಾರ್ಗೆಟ್ ಮಾಡಲಾಗಿತ್ತು, ಆದರೆ ಅವರು ಮಾತು ಆ ಧಾಟಿಯಲ್ಲಿ ಹೇಳೇ ಇರಲಿಲ್ಲ. ರಾಷ್ಟ್ರೀಯತಾವಾದಿ ನಾಯಕರನ್ನು ಗುರಿಯಾಗಿಸಲು ಕೆಲವರು ಸುಳ್ಳು ಸುದ್ದಿ ಹರಡುವ ವಿಧಾನಗಳನ್ನು ಪದೇ ಪದೇ ಬಳಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಪೂರ್ಣ ಭಾಷಣದ ವೀಡಿಯೋ
https://www.facebook.com/Samvada/videos/185778075830166/
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.