ಲಕ್ನೋ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಒಟ್ಟು 108 ಸದಸ್ಯರನ್ನು ಕಳೆದ ನಾಲ್ಕು ದಿನಗಳಲ್ಲಿ ಯುಪಿ ಪೊಲೀಸರು ಬಂಧಿಸಿದ್ದಾರೆ. ಜನವರಿ 20 ಮತ್ತು ಫೆಬ್ರವರಿ 2, 2020 ರ ನಡುವೆ ಇವರೆಲ್ಲರ ಬಂಧನವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಎಲ್ಲಾ 108 ಪಿಎಫ್ಐ ಸದಸ್ಯರು ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಈ ಹಿಂದೆ 25 ಜನರನ್ನು ಬಂಧಿಸಲಾಗಿದ್ದು, ಇದೀಗ ಮತ್ತೆ 108 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಕುಮಾರ್ ಅವಸ್ಥಿ ಹೇಳಿದ್ದಾರೆ. “ಇದು ಕೇವಲ ಪ್ರಾರಂಭ. ನಾವು ಸಂಘಟನೆಯ ಬೇರುಗಳನ್ನು ತಡಕಾಡಲಿದ್ದೇವೆ. ಅವರ ಹಣಕಾಸಿನ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ನಾವು ಕೇಂದ್ರ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಸಂಘಟನೆಯ ವಿರುದ್ಧ ಈ ರೀತಿಯ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶ ಎಂದು ಅವಸ್ಥಿ ಹೇಳಿದ್ದಾರೆ.
ಬಂಧಿತ ಜನರ ವಿವರಗಳನ್ನು ಒದಗಿಸಿದ ಹಾಲಿ ಡೈರೆಕ್ಟರ್ ಜನರಲ್ (ಡಿಜಿಪಿ) ಹಿತೇಶ್ ಚಂದ್ರ ಅವಸ್ಥಿ ಅವರು, ಲಕ್ನೋದಲ್ಲಿ 14, ಮೀರತ್ನಲ್ಲಿ 21, ವಾರಣಾಸಿಯಲ್ಲಿ 20, ಬಹರೈಚ್ನಲ್ಲಿ 16, ಸೀತಾಪುರದಲ್ಲಿ 3, ಘಜಿಯಾಬಾದ್ನಲ್ಲಿ 9, ಮುಜಫರನಗರದಲ್ಲಿ 6, ಶಾಮ್ಲಿಯಲ್ಲಿ 7, ಬಿಜ್ನೋರ್ನಲ್ಲಿ 4, ಕಾನ್ಪುರದಲ್ಲಿ 5 ಮತ್ತು ಗೊಂಡಾ, ಹಾಪುರ ಮತ್ತು ಜೌನ್ಪುರದಲ್ಲಿ ತಲಾ ಒಂದು ಪಿಎಫ್ಐ ಸದಸ್ಯರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಸಿಎಎ ವಿರುದ್ಧ ಉತ್ತರಪ್ರದೇಶದ ರಾಜ್ಯವ್ಯಾಪಿಯಾಗಿ ಭುಗಿಲೆದ್ದ ಹಿಂಸಾಚಾರದಲ್ಲಿ ಪಿಎಫ್ಐ ಸಂಘಟನೆಯ ನೇರ ಕೈವಾಡ ಇದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.