ನವದೆಹಲಿ: ಇಂದು ಭಾರತೀಯ ತಟ ರಕ್ಷಣಾ ಪಡೆ ದಿನ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಕಡಲ ಸುರಕ್ಷತೆಯನ್ನು ಬದ್ಧತೆಯಿಂದ ಸಂರಕ್ಷಣೆ ಮಾಡುತ್ತಿರುವ ತಟ ರಕ್ಷಣಾ ಪಡೆಯ ಯೋಧರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “ಸಂಸ್ಥಾಪನಾ ದಿನದ ಅಂಗವಾಗಿ ಭಾರತೀಯ ಕೋಸ್ಟ್ ಗಾರ್ಡ್ಗೆ ಶುಭಾಶಯಗಳು. ನಮ್ಮ ಕರಾವಳಿಯನ್ನು ಸುರಕ್ಷಿತವಾಗಿಡಲು ಮಾಡಿದ ಗಮನಾರ್ಹ ಪ್ರಯತ್ನಗಳಿಂದಾಗಿ ನಮ್ಮ ಕೋಸ್ಟ್ ಗಾರ್ಡ್ ಒಂದು ಮಹತ್ವದ ಛಾಪನ್ನು ಮೂಡಿಸಿದೆ. ಸಮುದ್ರ ಪರಿಸರ ವ್ಯವಸ್ಥೆಯ ಬಗ್ಗೆ ಅವರ ಕಾಳಜಿಯೂ ಅತ್ಯಂತ ಗಮನಾರ್ಹ” ಎಂದಿದ್ದಾರೆ.
1977 ರಲ್ಲಿ ಈ ದಿನ ಭಾರತೀಯ ಕೋಸ್ಟ್ ಗಾರ್ಡ್ ಅಸ್ತಿತ್ವಕ್ಕೆ ಬಂದಿತು.
ಇಂಡಿಯನ್ ಕೋಸ್ಟ್ ಗಾರ್ಡ್ ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಕಡಲ ಕಾನೂನನ್ನು ಜಾರಿಗೊಳಿಸುವ ಸಶಸ್ತ್ರ ಪಡೆ, ಭಾರತದ ಪ್ರಾದೇಶಿಕ ನೀರಿನ ಮೇಲೆ ಅದು ವ್ಯಾಪ್ತಿ ಮತ್ತು ವಿಶೇಷ ಆರ್ಥಿಕ ವಲಯವನ್ನು ಒಳಗೊಂಡಿದೆ.
ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಔಪಚಾರಿಕವಾಗಿ 18 ಆಗಸ್ಟ್ 1978 ರಂದು ಭಾರತದ ಸಂಸತ್ತಿನ ಕೋಸ್ಟ್ ಗಾರ್ಡ್ ಆಕ್ಟ್, 1978 ರ ಮೂಲಕ ಭಾರತದ ಸ್ವತಂತ್ರ ಸಶಸ್ತ್ರ ಪಡೆಯಾಗಿ ಸ್ಥಾಪಿಸಿಸಲಾಯಿತು. ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
Greetings to the Indian Coast Guard on their Foundation Day. Our Coast Guard has made a mark due to their remarkable efforts to keep our coasts safe. Their concern towards the marine ecosystem is also noteworthy.
— Narendra Modi (@narendramodi) February 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.