ಇಸ್ಲಾಮಾಬಾದ್: ಹಿಂದೂ ಎಂಬ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿರುವ ದನೀಶ್ ಕನೇರಿಯಾ ಅವರು, ಹಲವು ವರ್ಷಗಳಿಂದ ಸಾಕಷ್ಟು ಜನರು ನನ್ನ ಧರ್ಮವನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಆದರೆ ವಿಫಲರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಟ್ವಿಟರ್ ಬಳಕೆದಾರನೋರ್ವ ಅವರ ಬಳಿ ನಿಮ್ಮ ಧರ್ಮವನ್ನು ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಇಸ್ಲಾಂ ಇಲ್ಲದೆ ಬದುಕಿಲ್ಲ’ ಎಂದು ಟ್ವಿಟರ್ನಲ್ಲಿ ಒಬ್ಬ ಅವರಿಗೆ ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ‘ನಾನೊಬ್ಬ ಹೆಮ್ಮೆಯ ಹಿಂದೂ’ ಎಂದು ಉತ್ತರಿಸಿದ್ದಾರೆ.
ಟ್ವಿಟರಿನಲ್ಲಿ ಅವರು ಪ್ರಶ್ನೋತ್ತರ ಸೆಷನ್ ಅನ್ನು ಹೋಸ್ಟ್ ಮಾಡಿದ್ದರು. ಈ ವೇಳೆ ತನ್ನ ವಿರುದ್ಧ ತಾರತಮ್ಯ ಧೋರಣೆಯನ್ನು ಅನುಸರಿಸಿದ ಎಲ್ಲರ ಹೆಸರನ್ನೂ ಅವರು ಬಹಿರಂಗಪಡಿಸಿದ್ದಾರೆ.
ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಇತ್ತೀಚಿಗೆ ಮಾಧ್ಯಮವೊಂದರಲ್ಲಿ ದನೀಶ್ ಕನೇರಿಯಾ ಅನುಭವಿಸಿದ ತಾರತಮ್ಯಗಳ ಬಗ್ಗೆ ಬಹಿರಂಗಪಡಿಸಿದ್ದರು. ಆ ಬಳಿಕ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು.
Many people like you tried to change my religion, but did not succeed. https://t.co/p260TxmFUL
— Danish Kaneria (@DanishKaneria61) January 30, 2020
I am proud to be a Hindu. #AskDanish https://t.co/rBUxo2PdRK
— Danish Kaneria (@DanishKaneria61) January 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.