ನವದೆಹಲಿ: ಭಾರತೀಯ ವಾಯುಸೇನೆ ತನ್ನ ಫೈಟರ್ ಸ್ಕ್ವಾಡ್ರನ್ ಬಲವನ್ನು ಹೆಚ್ಚಿಸಲು 36 ಫ್ರೆಂಚ್ ರಫೆಲ್ ಜೆಟ್ಗಳನ್ನು ಮತ್ತು ದೇಶೀಯ ತೇಜಸ್ ಲೈಟ್ ಕಂಬಾತ್ ಏರ್ಕ್ರಾಫ್ಟ್ (ಎಲ್ಸಿಎ) ಅನ್ನು ಸೇರ್ಪಡೆಗೊಳಿಸುತ್ತಿದೆ. ಇನ್ನೊಂದೆಡೆ, ವಾಯುಸೇನಾ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರ ನೇತೃತ್ವದಲ್ಲಿ ವಾಯುಸೇನೆ ತನ್ನ ಯುದ್ಧ-ಹೋರಾಟದ ಘಟಕಗಳನ್ನು ಉತ್ತೇಜಿಸಲು ತನ್ನ ಹೆಚ್ಚು ತರಬೇತಿ ಪಡೆದ ಮತ್ತು ಪ್ರೇರೇಪಿತ ಸಿಬ್ಬಂದಿಗಳ ಪ್ರಮುಖ ಪುನರ್ ರಚನೆಯನ್ನು ಸಹ ಕೈಗೊಳ್ಳುತ್ತಿದೆ.
ಭಾರತೀಯ ವಾಯುಸೇನೆಯು ಇತ್ತೀಚಿನ ತಿಂಗಳುಗಳಲ್ಲಿ ತನ್ನ ಯುದ್ಧ ವಿಮಾನ ಸ್ಕ್ವಾಡ್ರನ್ಗಳ ಶಕ್ತಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ.
“ಕಳೆದ ಕೆಲವು ತಿಂಗಳುಗಳಲ್ಲಿ 2,000 ಕ್ಕೂ ಹೆಚ್ಚು ವಾಯು ಯೋಧರು ಮತ್ತು ತಂತ್ರಜ್ಞರನ್ನು ಫೈಟರ್ ಸ್ಕ್ವಾಡ್ರನ್ಗಳಿಗೆ ಸೇರಿಸಲಾಗಿದೆ. ಈ ಸಿಬ್ಬಂದಿಯನ್ನು ವಾಯು ಪ್ರಧಾನ ಕಛೇರಿ ಮತ್ತು ಕಮಾಂಡ್ ಕೇಂದ್ರ ಕಚೇರಿಯಿಂದ ಕರೆತರಲಾಗಿದೆ, ಅಲ್ಲಿ ಅವರು ತಾಂತ್ರಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿರಲಿಲ್ಲ” ಎಂದು ಉನ್ನತ ಐಎಎಫ್ ಮೂಲಗಳು ತಿಳಿಸಿವೆ.
ಫೈಟರ್ ಸ್ಕ್ವಾಡ್ರನ್ಗಳಲ್ಲಿ ಹೆಚ್ಚಿನ ವಾಯು ಯೋಧರು ಅಸ್ತಿತ್ವದಲ್ಲಿರುವ ಸಿಬ್ಬಂದಿಗಳ ಕೆಲಸದ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ ಮತ್ತು ಹಾರುವ ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತಾರೆ. ಸೇವೆಯಲ್ಲಿನ ಪುನರ್ ರಚನೆಯನ್ನು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದಿದೆ.
ಪ್ರಧಾನ ಕಚೇರಿಯಲ್ಲಿ ಪುನರ್ ರಚನೆಯ ಹೊರತಾಗಿ, ಸೇವೆಯಲ್ಲಿರುವ ಫ್ಲ್ಯಾಗ್ ಆಫೀಸರ್ಗಳಿಗೆ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ಐಎಎಫ್ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಫೆಬ್ರವರಿ 26, 2019 ರಂದು ಪಾಕಿಸ್ಥಾನದಲ್ಲಿ ಬಾಲಕೋಟ್ ವೈಮಾನಿಕ ದಾಳಿ ನಡೆದ ನಂತರ ಕಳೆದ ಒಂದು ವರ್ಷದಲ್ಲಿ ಐಎಎಫ್ ತನ್ನ ಹೋರಾಟದ ಸಾಮರ್ಥ್ಯವನ್ನು ಬಲಪಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.