ಬೆಂಗಳೂರು: ವಿಶ್ವದಲ್ಲೇ ಅತೀ ಹೆಚ್ಚು ಸಾರಿಗೆ ದಟ್ಟಣೆ ಇರುವ ನಗರ ಬೆಂಗಳೂರು ಎಂದು ಡಚ್ ನೈಜ-ಸಮಯದ ಸಂಚಾರ ಮಾಹಿತಿ ಮತ್ತು ಸೇವೆಗಳ ಕಂಪನಿ ತಿಳಿಸಿದೆ.
“ದಕ್ಷಿಣ ಭಾರತದ ನಗರಗಳಲ್ಲಿ ಸಂಚರಿಸುವ ಚಾಲಕರುಗಳು ತಮ್ಮ ಸರಾಸರಿ ಶೇಕಡಾ 71 ರಷ್ಟು ಹೆಚ್ಚುವರಿ ಪ್ರಯಾಣವನ್ನು ಸಾರಿಗೆ ದಟ್ಟಣೆಯಲ್ಲೇ ಕಳೆಯುವ ಪರಿಸ್ಥಿತಿ ಇದೆ. ಇದರಲ್ಲಿ ಬೆಂಗಳೂರು ಈ ವರ್ಷ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ” ಎಂದು ಟಾಮ್ಟಾಮ್ ಸಂಚಾರ ಸೂಚ್ಯಂಕ ಬುಧವಾರ ತಿಳಿಸಿದೆ.
ಏಪ್ರಿಲ್ 6 ರಂದು ಬೆಂಗಳೂರಿನಲ್ಲಿ ಅತಿ ಕಡಿಮೆ ದಟ್ಟಣೆ ದಾಖಲಾಗಿದೆ ಮತ್ತು ಆಗಸ್ಟ್ 20 ರಂದು ಶೇ 103 ರಷ್ಟು ದಟ್ಟಣೆ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಅತ್ಯಂತ ಕೆಟ್ಟ ಸಾರಿಗೆ ದಟ್ಟಣೆ ಸಮಯವನ್ನು ಶುಕ್ರವಾರ ಸಂಜೆ 7 ರಿಂದ ರಾತ್ರಿ 8 ರವರೆಗೆ ಎಂದು ಪರಿಗಣಿಸಲಾಗಿದೆ. “ಶುಕ್ರವಾರ ರಾತ್ರಿ 8 ಗಂಟೆಯ ನಂತರ ಪ್ರಯಾಣಿಸುವುದರಿಂದ ವರ್ಷಕ್ಕೆ 5 ಗಂಟೆಗಳವರೆಗೆ (30 ನಿಮಿಷಗಳ ಪ್ರಯಾಣಕ್ಕೆ) ನಮ್ಮ ಸಮಯವನ್ನು ಉಳಿಸಬಹುದು” ಎಂದು ವರದಿ ತಿಳಿಸಿದೆ.
ಟಾಮ್ಟಾಮ್ ಡಚ್ನ ಸ್ವತಂತ್ರ ಸ್ಥಳ ತಂತ್ರಜ್ಞಾನ ತಜ್ಞ ಸಂಸ್ಥೆಯಾಗಿದ್ದು, ನಕ್ಷೆಗಳು ಮತ್ತು ನ್ಯಾವಿಗೇಷನ್ ಸಾಫ್ಟ್ವೇರ್ ಅನ್ನು ಇದು ನೀಡುತ್ತದೆ. ಆಮ್ಸ್ಟರ್ಡ್ಯಾಮ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಾಮ್ಟಾಮ್ಗೆ 30 ದೇಶಗಳಲ್ಲಿ ಕಚೇರಿಗಳಿವೆ.
ಬೆಂಗಳೂರಿನ ಬಳಿಕ ಫಿಲಿಫೈನಿನ ರಾಜಧಾನಿ ಮನಿಲವನ್ನು ಇದು ಅತ್ಯಂತ ಸಾರಿಗೆ ದಟ್ಟಣೆಯ ನಗರ ಎಂದು ಹೇಳಿದೆ. ಐದು ಅತೀ ಹೆಚ್ಚು ಸಾರಿಗೆ ದಟ್ಟಣೆ ನಗರಗಳ ಪೈಕಿ ಭಾರತದ ಬೆಂಗಳೂರು, ಮುಂಬಯಿ ಮತ್ತು ಪುಣೆ ಸ್ಥಾನ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.