ಚೆನ್ನೈ: ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳನ್ನು ಎದುರಿಸಲು ಜಗತ್ತಿನಾದ್ಯಂತದ ದೇಶಗಳು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಚೆನ್ನೈ ವಿದ್ಯಾರ್ಥಿಗಳು ಮಹತ್ವದ ಕಾರ್ಯವನ್ನು ಮಾಡಿ ಎಲ್ಲರಿಗೂ ಮಾದರಿ ಎನಿಸಿದ್ದಾರೆ. ಚೆನ್ನೈನ 300 ಶಾಲಾ ವಿದ್ಯಾರ್ಥಿಗಳು 300 ಸಸಿಗಳನ್ನು ನೆಡುವ ಮತ್ತು ನಗರದ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಸಣ್ಣ ಅರಣ್ಯವನ್ನು ಬೆಳೆಸುವ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ.
ವಿಶ್ವ ದಾಖಲೆಯನ್ನು ಸೃಷ್ಟಿಸುವ ಮತ್ತು ಜಾಗೃತಿ ಮೂಡಿಸುವ ಪ್ರಯತ್ನವಾಗಿ, ವಿದ್ಯಾರ್ಥಿಗಳು ಈ ಅರಣ್ಯೀಕರಣದ ಉಪಕ್ರಮಕ್ಕಾಗಿ ರೋಬೋಟ್ಗಳನ್ನು ಬಳಸಿದ್ದಾರೆ.
ಗಿಡ ನೆಡುವ ಅಭಿಯಾನ ವಿವಿಧ ಕಡೆಗಳಲ್ಲಿ ಚಾಲನೆಯಲ್ಲಿದ್ದರೂ, ಈ ವಿದ್ಯಾರ್ಥಿಗಳ ಅಭಿಯಾನ ವಿಭಿನ್ನವಾಗಿತ್ತು. ಸಣ್ಣ ರೋಬೋಟ್ಗಳು ಸಸಿಗಳನ್ನು ಹೊತ್ತುಕೊಂಡು ಹೋಗಿವೆ, ಮಕ್ಕಳು ರೋಬೋಗಳಿಗೆ ಗಿಡ ನೆಡುವ ಗುಂಡಿಯ ಕಡೆ ಹೋಗಲು ನಿರ್ದೇಶನವನ್ನು ನೀಡಿದ್ದಾರೆ.
ರೋಬೋಟ್ಗಳನ್ನು ನಿರ್ದೇಶಿಸಲು ಮೊಬೈಲ್ ಫೋನ್ಗಳನ್ನು ರಿಮೋಟ್ ಕಂಟ್ರೋಲ್ ಆಗಿ ಬಳಸಲಾಗಿದೆ. ಕೆಲವು ಮಕ್ಕಳು ತಾಂತ್ರಿಕ ಅಡಚಣೆಯನ್ನು ಎದುರಿಸಿದರೂ, ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.
ಗಿಟ್ಟ ನೆಟ್ಟ ಬಳಿಕ ಮಕ್ಕಳು ಗುಂಡಿಗೆ ಮಣ್ಣು ಮುಚ್ಚಿದರು, ಸಸಿಗಳಿಗೆ ನೀರುಣಿಸಲು ಮತ್ತೊಂದು ಮಾದರಿಯ ರೋಬೋಟ್ಗಳನ್ನು ನಿಯೋಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.