ಭಾರತದ 71ನೇ ಗಣರಾಜ್ಯೋತ್ಸವ ಸಮಾರಂಭ ನವದೆಹಲಿಯಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಅವರು ಮುಖ್ಯ ಅತಿಥಿಯಾಗಿ ಈ ಸಂದರ್ಭದಲ್ಲಿ ಹಾಜರಿದ್ದರು.
ಭಾರತದ ಮಿಲಿಟರಿ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಈ ಸಂದರ್ಭದಲ್ಲಿ ನಡೆದ ಪರೇಡ್ಗಳು ಜಗತ್ತಿನ ಮುಂದೆ ಅನಾವರಣಗೊಳಿಸಿತು.
16 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 22 ಸ್ತಬ್ಧಚಿತ್ರಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳ 6 ಸ್ತಬ್ಧಚಿತ್ರಗಳು ಭಾರತದ ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಆರ್ಥಿಕ ಪ್ರಗತಿಯನ್ನು ರಾಜಪಥದಲ್ಲಿ ಪ್ರದರ್ಶಿಸಿದವು.
ಗಣರಾಜ್ಯೋತ್ಸವದಲ್ಲಿ ಕಂಡ ಹಲವು ಪ್ರಥಮಗಳ ಬಗೆಗಿನ ಒಂದು ಹಿನ್ನೋಟ ಇಲ್ಲಿದೆ
🔹 ಧನುಷ್ ಗನ್ ಸಿಸ್ಟಮ್. ಕ್ಯಾಪ್ಟನ್ ಮ್ರಿಗಂಕ್ ಭಾರದ್ವಾಜ್ ಇದನ್ನು ಕಮಾಂಡ್ ಮಾಡಿದರು. ಈ ವ್ಯವಸ್ಥೆಯು ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಪ್ರದರ್ಶನಗೊಳ್ಳುತ್ತಿದೆ. 15ಎಂಎಂ/45 ಕ್ಯಾಲಿಬರ್ ಧನುಷ್ ಗನ್ ವ್ಯವಸ್ಥೆಯನ್ನು ಆರ್ಡೆನ್ಸ್ ಫ್ಯಾಕ್ಟರಿ ಬೋರ್ಡ್ ಸಂಪೂರ್ಣ ದೇಶಿಯವಾಗಿ ವಿನ್ಯಾಸಗೊಳಿಸಿದೆ. 36.5 ಕಿಮೀಗಳ ಗರಿಷ್ಠ ವ್ಯಾಪ್ತಿಯನ್ನು ಹೊಂದಿರುವ ಇದು, ಆಟೋಮ್ಯಾಟಿಕ್ ಗನ್ ಅಲೈನ್ಮೆಂಟ್ ಮತ್ತು ಪೋಸಿಷನಿಂಗ್ ಸಾಮರ್ಥ್ಯವನ್ನು ಹೊಂದಿದೆ.
🔹 ಸಂಪ್ರದಾಯವನ್ನು ಮುರಿದು ಪ್ರಧಾನಿ ನರೇಂದ್ರ ಮೋದಿಯವರು ಹೊಸದಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಎಲ್ಲಿ ಗಣರಾಜ್ಯೋತ್ಸವದಂದು ಬೆಳಗ್ಗೆ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದರು. ಅಮರ್ ಜವಾನ್ ಜ್ಯೋತಿ ಬದಲು ರಾಷ್ಟ್ರೀಯ ಸ್ಮಾರಕದಲ್ಲಿ ಅವರು ನಮನವನ್ನು ಸಲ್ಲಿಸಿದ್ದಾರೆ.
🔹 ಕ್ಯಾಪ್ಟನ್ ತಾನಿಯಾ ಶೆರ್ಗಿಲ್ ಅವರು ಗಣರಾಜ್ಯೋತ್ಸವದ ಪರೇಡಿನಲ್ಲಿ ಇಂದು ಆಲ್ ಮೆನ್ ಕಂಟಿನ್ಜೆಂಟ್ ಅನ್ನು ಮುನ್ನಡೆಸಿದರು. ಈ ಸಾಧನೆ ಮಾಡಿದ ಎರಡನೇ ಮಹಿಳೆ ಎನಿಸಿಕೊಂಡರು.
🔹 ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗಿಯಾಗುತ್ತಿದೆ.
🔹 ಈ ಬಾರಿಯ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯೆಂದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಆಂಟಿ ಸೆಟಲೈಟ್ ವೆಪನ್ ಮಿಷನ್ ಶಕ್ತಿಯನ್ನು ಪರೇಡಿನಲ್ಲಿ ಪ್ರದರ್ಶಿಸಿತು. ಶತ್ರುರಾಷ್ಟ್ರಗಳ ಸೆಟಲೈಟ್ ಅನ್ನು ಹೊಡೆದುರುಳಿಸುವಲ್ಲಿ ಮಿಶನ್ ಶಕ್ತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
🔹 ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯು ಮಹಿಳಾ ಬೈಕರ್ಗಳ ತಂಡ ಸಾಹಸಮಯ ಪ್ರದರ್ಶನವನ್ನು ನೀಡಿತು. ಇನ್ಸ್ಪೆಕ್ಟರ್ ಸೀಮಾ ನಾಗ್ ನೇತೃತ್ವದ ತಂಡ ಚಲಿಸುತ್ತಿರುವ ಮೋಟಾರ್ಸೈಕಲಿನ ತುದಿಯಲ್ಲಿ ನಿಂತು ಸೆಲ್ಯೂಟ್ ಮಾಡಿದೆ.
🔹 ಫ್ಲೈ ಫಾಸ್ಟ್-ಗ್ರಾಂಡ್ ಫಿನಾಲೆ ಮತ್ತು ಬಹುನಿರೀಕ್ಷಿತ ಪೆರೇಡ್ ಸನ್ನಿವೇಶದಲ್ಲಿ ಮೂರು ಸುಧಾರಿತ ಲಘು ಹೆಲಿಕಾಫ್ಟರ್ಗಳು ‘ತ್ರಿಶೂಲ’ದ ರಚನೆಯನ್ನು ಮಾಡಿ ಎಲ್ಲರ ಕಣ್ಮನ ಸೆಳೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.