ಸೌದಿ: ಮಹಿಳೆಯರ ವಿಷಯದಲ್ಲಿ ವಿಪರೀತ ಸಂಪ್ರದಾಯವಾದಿಯಾಗಿದ್ದ ಸೌದಿ ಅರೇಬಿಯಾ ನಿಧಾನಕ್ಕೆ ತನ್ನ ನಿಲುವನ್ನು ಸಡಿಲಗೊಳಿಸುತ್ತದೆ. ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಇಲ್ಲಿ ಮಹಿಳಾ ಮಿಲಿಟರಿ ವಿಭಾಗವನ್ನು ತೆರೆಯಲಾಗಿದೆ. ಈ ಮೂಲಕ ಮಹಿಳೆಯರಿಗೆ ಸೇನೆ ಸೇರುವ ಅವಕಾಶವನ್ನು ಮಾಡಿಕೊಟ್ಟಿದೆ.
ಸೌದಿಯ ಚೀಫ್ ಆಫ್ ಸ್ಟಾಫ್ ಜನರಲ್ ಫಯಾದ್ ಅಲ್-ರುವಾಯಿಲಿ ಭಾನುವಾರ ಸಶಸ್ತ್ರ ಪಡೆಗಳ ಮಹಿಳೆಯರಿಗಾಗಿನ ಮೊದಲ ಮಿಲಿಟರಿ ವಿಭಾಗವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಶಸ್ತ್ರ ಪಡೆಗಳ ಪ್ರವೇಶ ಮತ್ತು ನೇಮಕಾತಿಯ ಸಾಮಾನ್ಯ ಆಡಳಿತ ಮಹಾನಿರ್ದೇಶಕ ಮೇಜರ್ ಜನರಲ್ ಇಮಾದ್ ಅಲ್-ಐದಾನ್ ಅವರು, ಸಶಸ್ತ್ರ ಪಡೆಗಳಲ್ಲಿನ ವಿವಿಧ ಹಂತದ ಪ್ರವೇಶದ ಕಾರ್ಯವಿಧಾನಗಳು ಮತ್ತು ಮಹಿಳೆಯರು ಕೆಲಸ ಮಾಡುವ ಕ್ಷೇತ್ರಗಳ ಬಗ್ಗೆ ವಿವರಿಸಿದ್ದಾರೆ.
ಸಶಸ್ತ್ರ ಪಡೆಗಳ ವಿವಿಧ ಶಾಖೆಗಳಲ್ಲಿ ಮಹಿಳಾ ಸಶಸ್ತ್ರ ಸಿಬ್ಬಂದಿಯ ಅಗತ್ಯಗಳನ್ನು ಈಡೇರಿಸುವ ಮತ್ತು ಪೂರೈಸುವ ಉದ್ದೇಶದಿಂದ ಈ ವಿಭಾಗವನ್ನು ರಚಿಸಲಾಗಿದೆ ಎಂದು ರುವಾಲಿ ಹೇಳಿದ್ದಾರೆ.
ಬುರ್ಖಾ ಧರಿಸದೆ ಮತ್ತು ಪುರುಷರು ಜೊತೆ ಇಲ್ಲದೆ ಮನೆಯಿಂದ ಹೊರಗೆ ಬರಲೇ ಬಾರದು ಎಂಬಷ್ಟು ಕಟ್ಟುನಿಟ್ಟಾಗಿದ್ದ ಸೌದಿ ಅರೇಬಿಯಾ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ವಿಷಯದಲ್ಲಿ ತನ್ನ ನಿಮಯಗಳನ್ನು ಸಡಿಲಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.