ಜೆಎನ್ಯು ಕಮ್ಯುನಿಸ್ಟರಿಗೆ ಭಾರಿ ಹೊಡೆತ ಬಿದ್ದಿದೆ, ಜೆಎನ್ಯುನಲ್ಲಿರುವ 8,500 ವಿದ್ಯಾರ್ಥಿಗಳ ಪೈಕಿ ಶೇ. 82% ವಿದ್ಯಾರ್ಥಿಗಳು ಸೆಮಿಸ್ಟರ್ ದಾಖಲಾತಿಗಾಗಿ ತಮ್ಮ ಹಾಸ್ಟೆಲ್ ಬಾಕಿಗಳನ್ನು ಪಾವತಿಸಿದ್ದಾರೆ ಎಂದು ಉಪಕುಲಪತಿ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ. ಜೆಎನ್ಯುನಲ್ಲಿ ಶುಲ್ಕ ಹೆಚ್ಚಳವನ್ನು ಪ್ರಸ್ತಾಪಿಸಿದಾಗ ಎಡಪಂಥೀಯ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲೇ ಹುಯಿಲು ಎಬ್ಬಿಸಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಎಡಪಂಥೀಯ ಗೂಂಡಾ ಸಿದ್ಧಾಂತವಾದ ಗೂಂಡಾಗಿರಿಯನ್ನು ಪ್ರತಿಭಟನೆಯ ಹೆಸರಿನಲ್ಲಿ ನಡೆಸಿದರು. ಅವರು ತಮ್ಮ ಜೀವನ ಮತ್ತು ಅಧ್ಯಯನಕ್ಕೆ ಎಂದೂ ಪ್ರಾಶಸ್ತ್ಯ ನೀಡುವುದಿಲ್ಲ. ರಾಜಕೀಯವಷ್ಟೇ ಅವರ ಗುರಿ. ಜೆಎನ್ಯುನ ಶೇ. 82 ರಷ್ಟು.
ಹಾಸ್ಟೆಲ್ ಶುಲ್ಕ ಹೆಚ್ಚಳದ ಹಿನ್ನಲೆಯಲ್ಲಿ ದಾಖಲಾತಿಯನ್ನು ಬಹಿಷ್ಕರಿಸಲು ಜೆಎನ್ಯುಎಸ್ಯು ಕರೆ ನೀಡಿತ್ತು. ಚಳಿಗಾಲದ ಸೆಮಿಸ್ಟರ್ನ ನೋಂದಣಿ ಜನವರಿ 17 ರಂದು ಕೊನೆಗೊಂಡಿದೆ ಮತ್ತು ದಂಡದೊಂದಿಗೆ ನೋಂದಣಿ ಇನ್ನೂ ಮುಕ್ತವಾಗಿರುವುದರಿಂದ ಉಳಿದ ವಿದ್ಯಾರ್ಥಿಗಳು ಸಹ ತಮ್ಮ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಜೆಎನ್ಯು ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸುದ್ದಿಯಾಗಿದೆ. ಎಡಪಂಥೀಯ ನಾಯಕರು ಮತ್ತು ಕೆಲವು ಪ್ರಖ್ಯಾತ ಪತ್ರಕರ್ತರು ಬಿಜೆಪಿಗೆ ಸೇರಿದ ಗೂಂಡಾಗಳ ಗುಂಪು ಮುಖವಾಡವನ್ನು ಧರಿಸಿ ಜೆಎನ್ಯು ಕ್ಯಾಂಪಸ್ನಲ್ಲಿ ಹಿಂಸಾಚಾರವನ್ನು ಹರಡುತ್ತಿದೆ ಎಂದು ಹೇಳಿಕೊಂಡಿತ್ತು, ಆದರೆ ಕೊನೆಗೆ ಎಡಪಂಥೀಯರೇ ಈ ದುಷ್ಕೃತ್ಯ ಎಸಗಿದ್ದು ಸಾಬೀತಾಗಿದೆ. ದಾಖಲಾತಿ ಪ್ರಕ್ರಿಯೆಗೆ ವಿರುದ್ಧವಾಗಿರುವ ವಿದ್ಯಾರ್ಥಿಗಳ ಗುಂಪು ನಿರ್ವಾಹಕ ಬ್ಲಾಕ್ನ ಮುಂಭಾಗದಿಂದ ಮುಖವಾಡ ಧರಿಸಿ ಪ್ರವೇಶಿಸಿ ದುಷ್ಕೃತ್ಯಗಳನ್ನು ಎಸಗಿತ್ತು.
ದಾಖಲಾತಿಗೆ ಬಂದ ವಿದ್ಯಾರ್ಥಿಗಳನ್ನು ದಾಖಲಾತಿಗೆ ವಿರುದ್ಧವಾಗಿರುವ ವಿದ್ಯಾರ್ಥಿಗಳ ಗುಂಪೊಂದು ಥಳಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆಯನ್ನು ಮತ್ತು ದಾಖಲಾತಿ ಬಹಿಷ್ಕಾರಕ್ಕಾಗಿ ಹೋರಾಟವನ್ನು ಎಡ ಆಡಳಿತದ ಜೆಎನ್ಯುಎಸ್ಯು ಪ್ರಾರಂಭಿಸಿತ್ತು ಮತ್ತು ಒಂದು ವಾರದಿಂದ ಇದು ನಡೆಯುತ್ತಲೇ ಇದೆ. ಜನವರಿ 3 ರಂದು, ಮುಖವಾಡ ಧರಿಸಿದ್ದ ವಿದ್ಯಾರ್ಥಿಗಳ ಗುಂಪು ಮಾಹಿತಿ ಕೇಂದ್ರದ ಕಚೇರಿಗೆ ಬಲವಂತವಾಗಿ ಪ್ರವೇಶಿಸಿ, ವಿದ್ಯುತ್ ಸರಬರಾಜನ್ನು ಸ್ವಿಚ್ ಆಫ್ ಮಾಡಿ, ಎಲ್ಲಾ ತಾಂತ್ರಿಕ ಸಿಬ್ಬಂದಿಯನ್ನು ಬಲವಂತವಾಗಿ ಹೊರಹಾಕಿತ್ತು ಮತ್ತು ಆನ್ಲೈನ್ ದಾಖಲಾತಿಗಳನ್ನು ನಡೆಸಲು ಅನುಮತಿಸದಿರುವ ಉದ್ದೇಶದಿಂದ ಸರ್ವರ್ಗಳನ್ನು ನಿಷ್ಕ್ರಿಯಗೊಳಿಸಿತು. ದಾಖಲಾತಿ ಪ್ರಕ್ರಿಯೆಯ ಆರಂಭವಾದ ದಿನಾಂಕದಿಂದಲೇ ಜೆಎನ್ಯುಎಸ್ಯು ನೇತೃತ್ವದ ಎಸ್ಐಎಫ್ಐ, ಎಐಎಸ್ಎಯಿಂದ ಎಡಪಂಥೀಯ ಗೂಂಡಾಗಳು ದಾಖಲಾತಿ ವಿರುದ್ಧ ಗೂಂಡಾಗಿರಿ ನಡೆಸುತ್ತಾ ಬಂದಿದ್ದರೂ ಅಲ್ಲಿನ ಬಹುಪಾಲು ವಿದ್ಯಾರ್ಥಿಗಳು ನೋಂದಣಿಯನ್ನು ಮಾಡಿಸಿದ್ದಾರೆ.
ವಿಶ್ವವಿದ್ಯಾನಿಲಯದ ಎಡಪಂಥೀಯರು ಜನವರಿ 3 ಮತ್ತು ಜನವರಿ 4 ರಂದು ವಿನಾಶಕಾರಿ ಚಟುವಟಿಕೆಗಳನ್ನು ಆಶ್ರಯಿಸಿದಾಗ ನೋಂದಣಿಯನ್ನು ವಿರೋಧಿಸಿದವರು ಜೆಎನ್ಯು ಕ್ಯಾಂಪಸ್ನಲ್ಲಿ ವೈಫೈ ಸೇವೆಯನ್ನು ನಿಲ್ಲಿಸಿದ್ದರು ಮತ್ತು ಜೆಎನ್ಯು ವೆಬ್ಸೈಟ್ ಅನ್ನು ಆಫ್ಲೈನ್ನಲ್ಲಿ ಇರಿಸಿದ್ದರು. ಮುಂದಿನ ಸೆಮಿಸ್ಟರ್ಗೆ ಯಾವುದೇ ದಾಖಲಾತಿ ನಡೆಯದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಹಿಂಸಾಚಾರವು ನೋಂದಣಿಗೆ ವಿರುದ್ಧವಾದ ಎಡಪಂಥೀಯರ ಆಜ್ಞೆಯನ್ನು ಇತರ ವಿದ್ಯಾರ್ಥಿಗಳು ವಿರೋಧಿಸುತ್ತಿರುವುದರ ಪರಿಣಾಮವಾಗಿದೆ. ನೂರಾರು ವಿದ್ಯಾರ್ಥಿಗಳು ಅವರ ಆಜ್ಞೆಯನ್ನು ಧಿಕ್ಕರಿಸಿದಾಗ ಇವರುಗಳು ಹಿಂಸಾಚಾರವನ್ನು ನಡೆಸಿ ಭೀತಿ ಸೃಷ್ಟಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಹಿಂಸಾಚಾರವು ವಿದ್ಯಾರ್ಥಿಗಳ ನಡುವೆ ಗೊಂದಲ ಮತ್ತು ಘರ್ಷಣೆಗೆ ಕಾರಣವಾಯಿತು, ಪೊಲೀಸರ ಮಧ್ಯಪ್ರವೇಶ ಅನಿವಾರ್ಯವಾಯಿತು. ಪೊಲೀಸರ ಕಾರಣದಿಂದಾಗಿ ಜೆಎನ್ಯು ಆಡಳಿತವು ಮತ್ತೆ ಹಿಡಿತ ಸಾಧಿಸಿತು. ದಾಖಲಾತಿ ಪ್ರಕ್ರಿಯೆ ಸರಾಗಗೊಂಡಿತು ಮತ್ತು ಎಡ ಗೂಂಡಾಗಳು ಹಿನ್ನಡೆಯನ್ನು ಅನುಭವಿಸಬೇಕಾಯಿತು.
ದಾಖಲಾತಿ ಮಾಡಿಕೊಂಡಿರುವ 82% ವಿದ್ಯಾರ್ಥಿಗಳು ಎಡಪಂಥೀಯರಿಗೆ ಇಡೀ ಕ್ಯಾಂಪಸ್ ಅನ್ನು ಸುಲಿಗೆ ಮಾಡಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಮತ್ತು ಸರಾಸರಿ ಜೆಎನ್ಯು ವಿದ್ಯಾರ್ಥಿಗಳು ಈ ಹುಚ್ಚುತನದ ಪ್ರತಿಭಟನಾ ಸಂಸ್ಕೃತಿಯ ಸಂಕೋಲೆಗಳಿಂದ ತಮ್ಮನ್ನು ಮುಕ್ತಗೊಳಿಸಲು ಶ್ರಮಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.