ಗಾಂಧೀನಗರ: ಗುಜರಾತ್ ಮೂಲದ ನೀಲಂಶಿ ಪಟೇಲ್ ಅವರು ಹದಿಹರೆಯದ ವಯಸ್ಸಿನಲ್ಲಿ ಅತೀ ಉದ್ದನೆಯ ಕೂದಲನ್ನು ಹೊಂದಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಅವರ ಕೂದಲು ಪ್ರಸ್ತುತ 190 ಸೆಮೀ ಅಥವಾ 6 ಅಡಿ ಮತ್ತು 2.8 ಇಂಚುಗಳಷ್ಟು ಉದ್ದವಿದೆ.
ನಿಜ ಜೀವನದ ರಾಪುಂಜೆಲ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ 17 ವರ್ಷದ ನೀಲಂಶಿ ಈ ಹಿಂದೆ 2018 ರ ನವೆಂಬರ್ 21 ರಂದು 170.5-ಸೆಂಟಿಮೀಟರ್ ಉದ್ದನೆಯ ಕೂದಲನ್ನು ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದರು.
“ಭಾರತದ ಟೀನೇಜ್ ರೆಕಾರ್ಡ್ ಹೋಲ್ಡರ್ ನೀಲಂಶಿ ಪಟೇಲ್ ಅವರ ಉದ್ದನೆಯ ಕೂದಲನ್ನು ಇತ್ತೀಚೆಗೆ ಮರುಪರಿಶೀಲಿಸಲಾಯಿತು. ಪ್ರಸ್ತುತ ಅವರ ಕೂದಲು 190 ಸೆಂ.ಮೀ.ಯಷ್ಟು ಉದ್ದವಾಗಿದೆ” ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಶುಕ್ರವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದೆ. ನೆಲದ ಮೇಲೆ ಕೂದಲು ಹರಡಿರುವ ಈಕೆಯ ಎರಡು ಫೋಟೋಗಳನ್ನು ಅದು ಪೋಸ್ಟ್ ಮಾಡಿದೆ.
ತನ್ನ ಉದ್ದನೆಯ ಕೂದಲಿನ ಹಿಂದಿನ ರಹಸ್ಯದ ಬಗ್ಗೆ ಹೇಳಿರುವ ನೀಲಂಶಿ, ಮನೆಯಲ್ಲಿ ಅಮ್ಮ ಕೆಲವೊಂದು ರಹಸ್ಯ ಪದಾರ್ಥಗಳನ್ನು ಹಾಕಿ ಮಾಡುವ ಎಣ್ಣೆಯನ್ನು ಮಾತ್ರ ನಾನು ಬಳಸುತ್ತೇನೆ ಎಂದಿದ್ದಾಳೆ.
“ನಾನು ನನ್ನ ಕೂದಲನ್ನು ಪ್ರೀತಿಸುತ್ತೇನೆ, ನನ್ನ ಕೂದಲನ್ನು ಕತ್ತರಿಸಲು ನಾನು ಎಂದಿಗೂ ಬಯಸುವುದಿಲ್ಲ. ಗಿನ್ನಿಸ್ ಪುಸ್ತಕದಲ್ಲಿ ನನ್ನ ಹೆಸರನ್ನು ಹೊಂದುವುದು ನನ್ನ ತಾಯಿಯ ಕನಸಾಗಿತ್ತು” ಎಂದಿದ್ದಾಳೆ.
“ನಾನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನ ಜೀವನದಲ್ಲಿ ಹೊಸ ಜಗತ್ತು ಇದೆ. ಇಡೀ ಜಗತ್ತು ನನ್ನನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ” ಎಂದಿದ್ದಾಳೆ.
ನೀಲಂಶಿ ಅವರು ವಾರಕ್ಕೊಮ್ಮೆ ತನ್ನ ಕೂದಲನ್ನು ತೊಳೆದುಕೊಳ್ಳುತ್ತಾರೆ ಮತ್ತು ಅವಳ ಕೂದಲು ಒಣಗಲು ಅರ್ಧ ಗಂಟೆ ಬೇಕು, ಅದನ್ನು ಬಾಚಿಕೊಳ್ಳಲು ಒಂದು ಗಂಟೆ ಬೇಕು.
ತನ್ನ ವೃತ್ತಿಜೀವನದ ಗುರಿಗಳ ಬಗ್ಗೆ ಮಾತನಾಡಿದ 12 ನೇ ತರಗತಿಯ ವಿದ್ಯಾರ್ಥಿನಿ ನೀಲಂಶಿ, ತಾನು ಸಾಫ್ಟ್ವೇರ್ ಎಂಜಿನಿಯರ್ ಆಗಲು ಬಯಸುತ್ತೇನೆ ಮತ್ತು ಪ್ರಸ್ತುತ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.