Wednesday, 26th February 2020
×
Home About Us Advertise With s Contact Us

ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ “ಗೋಕುಲೋತ್ಸವ”

ಮಂಜೇಶ್ವರ : ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ “ಗೋಕುಲೋತ್ಸವ” ಕಾರ್ಯಕ್ರಮವು ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯಲ್ಲಿ ನಡೆಯಿತು.

ಮೊದಲಿಗೆ ಬಾಲಗೋಕುಲಗಳ ಮಕ್ಕಳಿಂದ ಶ್ರೀ ಸತ್ಯನಾರಾಯಣ ಭಜನಾ ಮಂದಿರದಿಂದ ಶ್ರೀರಾಮ ಎಯುಪಿ ಶಾಲೆ ಕುಬಣೂರು ತನಕ ಶೋಭಾಯಾತ್ರೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ “ಗೋಕುಲೋತ್ಸವ”ದ ಉದ್ಘಾಟನೆಯನ್ನು ಶ್ರೀಮತಿ ಅರುಣ ಕೆ ಮುಖ್ಯೋಪಾಧ್ಯಾಯಿನಿ, ಶ್ರೀರಾಮ ಎ.ಯು.ಪಿ ಶಾಲೆ ಕುಬಣೂರು ಇವರು ದೀಪ ಪ್ರಜ್ವಲನದ ಮೂಲಕ ನಡೆಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಬಾಲಕೃಷ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೀರಾಮ ಎ.ಯು.ಪಿ ಶಾಲೆ ಹಾಗೂ ಬಾಲಗೋಕುಲ ತಾಲೂಕು ಪ್ರಮುಖ್ ಶ್ರೀ ರಾಮಚಂದ್ರ ಭಟ್ಳೆ ಹಳೆಮನೆ ಉಪಸ್ಥಿತರಿದ್ದರು.

ಉದ್ಘಾಟನೆ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ ಪುರುಷೋತ್ತಮ ಪ್ರತಾಪನಗರ ಮಾತನಾಡುತ್ತಾ ಧರ್ಮದ ರಕ್ಷಣೆ ಸಂಸ್ಕಾರಯುತ ವ್ಯಕ್ತಿಗಳಿಂದ ಆಗಬೇಕಿದೆ. ಅಂತಹ ಸಂಸ್ಕಾರಯುತ ವ್ಯಕ್ತಿ ಸಮಾಜದ ನಿರ್ಮಾಣದ ಕೆಲಸ ಬಾಲಗೋಕುಲಗಳಿಂದ ಆಗುತ್ತಿದೆ ಎಂಬುದಾಗಿ ಹೇಳಿದರು. ಇಂದು ನಾವು ಒಬ್ಬ ವ್ಯಕ್ತಿಯ ಕುಟುಂಬದಿಂದ ಹಿಡಿದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ವ್ಯಕ್ತಿಯೇ ಕಾರಣ.ಆದರೆ ವ್ಯಕ್ತಿ ಸಂಸ್ಕಾರವಂತನಾಗಿ ಆತ್ಮಕ್ಕೆ ಪೂರಕವಾಗಿ ಬದುಕಿದಾಗ ವ್ಯಕ್ತಿಯ ಜೀವನಕ್ಕೆ ಸರಿಯಾದ ದಿಕ್ಕು ಸಿಗಲು ಸಾಧ್ಯ. ಈ ಬಾಲಗೋಕುಲಗಳ ಮೂಲಕ ಬಾಲ್ಯದಿಂದಲೇ ಹಿಂದೂ ಸಂಸ್ಕಾರ ಕಲಿಸಿ ಕೊಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ನಂತರ ಬಾಲಗೋಕುಲಗಳ ಮಕ್ಕಳಿಗೆ ದೇಶ ಭಕ್ತಿಗೀತೆ, ವಂದೇ ಮಾತರಂ ಹಾಡುವ ಸ್ಪರ್ಧೆ, ಕುಣಿತ ಭಜನೆ ಹಾಗೂ ವಿವಿಧ ಆಟದ ಸ್ಪರ್ಧೆಗಳು ನಡೆದವು. ಗೋಕುಲೋತ್ಸವದಲ್ಲಿ ಮಂಜೇಶ್ವರ ತಾಲೂಕಿನ 27 ಬಾಲಗೋಕುಲಗಳ ಒಟ್ಡು 436 ಮಕ್ಕಳು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಎಯುಪಿ ಶಾಲೆಯ ಸಂಚಾಲಕಿ ಶ್ರೀಮತಿ ಮೋಕ್ಷದಾ ಬಿ ಶೆಟ್ಟಿ ಅವರು ವಹಿಸಿದ್ದರು. ಸಮಾರೋಪ ಭಾಷಣವನ್ನು ಶ್ರೀ ಪುಂಡರೀಕಾಕ್ಷ, ಯೋಗಾಚಾರ್ಯ ಬೆಳ್ಳೂರು ಇವರು ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್, ಶ್ರೀ ಸುಬ್ರಾಯ ನಂದೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಬಾಲಗೋಕುಲಗಳ ಮಕ್ಕಳಿಗೆ ‌ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top