ಲಕ್ನೋ: ಉತ್ತರಪ್ರದೇಶ ರಾಜ್ಯದ ಏಕೈಕ ಮುಕ್ತ ವಿಶ್ವವಿದ್ಯಾಲಯವಾಗಿರುವ ಉತ್ತರ ಪ್ರದೇಶ ರಾಜಶ್ರೀ ಟಂಡನ್ ಓಪನ್ ಯೂನಿವರ್ಸಿಟಿ (UPRTOU) ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು 370 ನೇ ವಿಧಿ ಬಗೆಗೆ ಮೂರು ತಿಂಗಳ ಹೊಸ ಸರ್ಟಿಫಿಕೇಟ್ ಕೋರ್ಸ್ನ್ನು ಪ್ರಾರಂಭಿಸಿಲಿದೆ. ಈ ಕೋರ್ಸ್ ಪಠ್ಯಕ್ರಮದ ಒಂದು ಭಾಗವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.
UPRTOU ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಭಾತ್ ಮಿಶ್ರಾ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಹೊಸ ಕೋರ್ಸ್ ಜನವರಿ 10 ರಿಂದ ಜಾರಿಗೆ ಬಂದಿದೆ ಮತ್ತು ಪ್ರವೇಶಗಳು ಈಗಾಗಲೇ ಪ್ರಾರಂಭವಾಗಿವೆ. ಕೋರ್ಸ್ಗೆ ಶುಲ್ಕ 700 ರೂಪಾಯಿ ಆಗಿದೆ, ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ” ಎಂದಿದ್ದಾರೆ.
370 ನೇ ವಿಧಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ನಿಬಂಧನೆಗಳು ಮತ್ತು ಸೂಚನೆಗಳನ್ನು ಕೋರ್ಸ್ಗಳು ವಿದ್ಯಾರ್ಥಿಗಳಿಗೆ ವಿವರಿಸಲಿದೆ. “ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ತಪ್ಪು ಮಾಹಿತಿ ಅಭಿಯಾನದ ಹಿಂದಿನ ಸತ್ಯವನ್ನು ಯುವಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ” ಎಂದು ಮಿಶ್ರಾ ಹೇಳುತ್ತಾರೆ.
ಓಪನ್ ಯೂನಿವರ್ಸಿಟಿಯ ಉಪಕುಲಪತಿ ಪ್ರೊಫೆಸರ್ ಕಾಮೇಶ್ವರ ನಾಥ್ ಸಿಂಗ್ ಅವರು ಹೇಳಿಕೆ ನೀಡಿ, “ಯಾವುದೇ ಸಂಸ್ಥೆಗಳು ದೇಶದ ಸಮಸ್ಯೆಗಳು ಮತ್ತು ನೀತಿಗಳಿಂದ ದೂರವಿರಲು ಸಾಧ್ಯವಿಲ್ಲ. ಸಿಎಎ ಮತ್ತು 370ನೇ ವಿಧಿ ಎಂಬ ಎರಡು ವಿಷಯಗಳ ಸುತ್ತಲಿನ ತಪ್ಪು ಕಲ್ಪನೆಗಳನ್ನು ತಕ್ಷಣ ತೆಗೆದುಹಾಕುವ ಅವಶ್ಯಕತೆಯಿದೆ. ತಪ್ಪು ಕಲ್ಪನೆಯನ್ನು ತೊಡೆದು ವಿದ್ಯಾರ್ಥಿಗಳು ಮತ್ತು ಇತರರಲ್ಲಿ ಜಾಗೃತಿ ಮೂಡಿಸುವುದು ವಿಶ್ವವಿದ್ಯಾಲಯದ ನೈತಿಕ ಕರ್ತವ್ಯವಾಗಿದೆ” ಎಂದಿದ್ದಾರೆ.
ಜಾಗೃತಿ ಕೋರ್ಸ್ಗೆ ಅರ್ಹತೆ ಮಧ್ಯಂತರವಾಗಿದ್ದು, ಒಬ್ಬರು ಕೋರ್ಸ್ಗೆ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು. ವಿಶ್ವವಿದ್ಯಾನಿಲಯದ ಯಾವುದೇ ಕೋರ್ಸ್ ಜೊತೆಗೆ ಇದನ್ನು ಮಾಡಬಹುದಾಗಿದೆ.
“UPRTOU ಸಮಾಜದ ಪ್ರಸ್ತುತ ಸಮಸ್ಯೆಗಳ ಆಧಾರದ ಮೇಲೆ ಕೋರ್ಸ್ಗಳನ್ನು ನಡೆಸುತ್ತದೆ. ಕೋರ್ಸ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಸೈನ್ಮೆಂಟ್ ಅನ್ನು ನೀಡಲಾಗುತ್ತದೆ, ಅದು ಪೂರ್ಣಗೊಂಡ ನಂತರ ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ”ಎಂದು ಉಪಕುಲಪತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.