ಪ್ರತಿಪಕ್ಷಗಳು ಮತ್ತು ಎಡಪಂಥೀಯ ಕೂಟದ ನಕಲಿ ಬುದ್ಧಿಜೀವಿಗಳಿಗೆ ರಾಜಕೀಯ ಸ್ಟ್ರ್ಯಾಟಜಿಸ್ಟ್ಗಳ ಅವಶ್ಯಕತೆ ತುಂಬಾನೇ ಇದೆ. ಈ ಕೂಟದ ಅನೇಕ ಮೂರ್ಖರಿಗೆ ತಮ್ಮ ಸುಳ್ಳು ಅಭಿಯಾನಗಳು, ಸುಳ್ಳು ಪ್ರಚಾರಗಳು ಮತ್ತು ದಾರಿ ತಪ್ಪಿಸುವಂತಹ ಪ್ರತಿಭಟನೆಗಳು ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬುದರ ಅರಿವಿಲ್ಲ. ಇವರುಗಳು ಪ್ರತಿಭಟನೆ ಬಿಜೆಪಿಗೆ ಲಾಭ ತಂದುಕೊಡುತ್ತಿದೆ ಎಂಬುದನ್ನು ಊಹಿಸಲಾಗದಷ್ಟೂ ಕಳಪೆ ಮಟ್ಟದಲ್ಲಿ ಇವರುಗಳ ರಾಜಕೀಯ ಜ್ಞಾನ ಇದೆ. ಬೀದಿಯಲ್ಲಿ ನಿಂತು ಬೆಂಕಿ ಹಚ್ಚುವ ಮೂಲಕ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಲು ಮೂಲ ಭಾರತೀಯ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.
ಕಳೆದ ಒಂದು ತಿಂಗಳಿನಿಂದ ನಮ್ಮ ರಾಷ್ಟ್ರದ ಬೀದಿಗಳಲ್ಲಿ ನಡೆಯುತ್ತಿರುವ ಸಾಮೂಹಿಕ ಹಿಂಸಾಚಾರ ಮತ್ತು ಈಗ ಜೆಎನ್ಯುನಲ್ಲಿ ನಡೆಯುತ್ತಿರುವ ನಾಟಕಗಳು ಎಡಪಂಥೀಯರನ್ನು ದಿಗ್ವಿಜಯದ ಉನ್ಮಾದದಲ್ಲಿ ತೇಲಿಸಿದಂತಿದೆ. ಇದರ ಪರಿಣಾಮವು ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ತೋರಲಿದೆ ಎಂಬುದು ಶತಸಿದ್ಧ. 2021 ರ ಉತ್ತರ ಪ್ರದೇಶದ ಚುನಾವಣೆಯಲ್ಲೂ ಪರಿಣಾಮ ಗೋಚರಿಸಲಿದೆ.
ಜೆಎನ್ಯುನಲ್ಲಿ ನಾಟಕ ಶುರುವಾದಾಗ ಕಾಂಗ್ರೆಸ್ ಮತ್ತು ಅದರ ಸ್ನೇಹ ಕೂಟಗಳು ಕ್ಷಿಪ್ರವಾಗಿ ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದವು. ಬಿಜೆಪಿಯೇ ದಾಂಧಲೆಯನ್ನು ನಡೆಸಿದೆ ಎಂದು ಆರೋಪಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಬಹಿರಂಗಪಡಿಸಿದ ಮಾಹಿತಿಗಳು, ಸಿಸಿಟಿವಿ ಕ್ಯಾಮೆರಾಗಳು ಹೇಳಿದ ಕಥೆ ಭಿನ್ನವಾಗಿತ್ತು. ಇದನ್ನು ದೇಶದ ಗಮನಿಸಿದೆ.
“ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ, ಇನ್ ಶ ಅಲ್ಲಾ ಇನ್ ಶ ಅಲ್ಲಾ ” ಎನ್ನುವ ಉದ್ಘೋಷ ಎಲ್ಲಿಂದ ಹೊರಟಿತು ಮತ್ತು ಯಾರು ಹೊರಡಿಸಿದರು ಎಂಬುದನ್ನು ದೇಶದ ಜನ ನೋಡಿದ್ದಾರೆ. ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಾದಾಗ ಯಾರು ಸಂಭ್ರಮಾಚರಿಸಿದರು ಎಂಬುದನ್ನೂ ಜನ ನೋಡಿದ್ದಾರೆ. ಜಿನ್ನಾವಾಲ ಆಜಾದಿ ಚಾಯಿಯೇ ಎಂದವರ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಅವರಿಗೆ ಯಾವ ಪಕ್ಷಗಳು ಬೆಂಬಲ ನೀಡುತ್ತಿವೆ ಎಂಬುದನ್ನೂ ಗಮನಿಸುತ್ತಿದ್ದಾರೆ. ಪ್ರತಿಪಕ್ಷಗಳು ನಡೆಸುತ್ತಿರುವ ಬೀದಿ ನಾಟಕಗಳನ್ನು ನೋಡುತ್ತಾ ಮನೋರಂಜನೆಯನ್ನು ಪಡೆಯುತ್ತಿದ್ದಾರೆ.
ಎರಡು ಬಾರಿ ದೇಶದ ಜನರ ಕೈಯಲ್ಲಿ ಹೀನಾಯವಾಗಿ ಸೋಲುಂಡವರು ಹತಾಶೆಯಲ್ಲಿ ಮಾಡುತ್ತಿರುವ ಕೃತ್ಯಗಳನ್ನು ನೋಡಿ ದೇಶದ ಮೌನಿ ನಾಗರಿಕ ಭ್ರಮ ನಿರಸನಗೊಂಡಿದ್ದಾನೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಬಳಸಿಕೊಂಡು ಎಡ ಪಕ್ಷಗಳು ಭಾರತದಲ್ಲಿ ನೆಲೆಯೂರಲು ಹರಸಾಹಸ ಪಡುತ್ತಿವೆ. ಕಾಂಗ್ರೆಸ್ ಕೂಡ ತನಗೂ ಒಂದಿಷ್ಟು ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದೆ. ಜನ ನಮ್ಮ ಅವತಾರಕ್ಕೆ ಭೇಷ್ ಅನ್ನುತ್ತಾರೆ ಎಂಬ ಭ್ರಮೆಯಲ್ಲಿ ಇವರು ತೇಲುತ್ತಿದ್ದಾರೆ.
2014ರಲ್ಲಿ ಮೋದಿಯವರ ಕೈಗೆ ದೇಶದ ಜನರು ಅಧಿಕಾರವನ್ನು ನೀಡಿದರು. 2019ರಲ್ಲಿ ಅವರನ್ನು ಇನ್ನಷ್ಟು ಹೆಚ್ಚಿನ ಮತಗಳಿಂದ ಗೆಲ್ಲಿಸಿದರು. ಹೀಗಾಗಿ ಮೋದಿಯನ್ನು ಭವಿಷ್ಯದಲ್ಲಿ ಕಟ್ಟಿ ಹಾಕಲೇಬೇಕಾದ ಅನಿವಾರ್ಯತೆ ಪ್ರತಿಪಕ್ಷಗಳಿಗೆ ಒದಗಿದೆ. ಇಲ್ಲವಾದರೆ ಅವರ ಅಸ್ತಿತ್ವಕ್ಕೆ ಧಕ್ಕೆ ಎಂಬುದನ್ನು ಅವರು ಅರಿತಿದ್ದಾರೆ. ಆದರೆ ಮೋದಿಯನ್ನು ಕಟ್ಟಿ ಹಾಕುವ ವಿಧಾನ ಅರಿಯದೆ ಬೀದಿಯಲ್ಲಿ ನಿಂತು ಗೂಳಿಡುತ್ತಿದ್ದಾರೆ. ಎಡಪಂಥೀಯರು ತಮ್ಮ ಶಕ್ತಿಯನ್ನು ಪ್ರದರ್ಶನಕ್ಕಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಬಿಜೆಪಿಯನ್ನು 2014 ಮತ್ತು 2019ರಲ್ಲಿ ಬೆಂಬಲಿಸಿದವರು ಪ್ರತಿಪಕ್ಷಗಳ ದೊಂಬರಾಟದವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಪ್ರತಿಪಕ್ಷಗಳು ಎಷ್ಟೇ ಗಲಾಟೆ, ದೊಂಬಿ ನಡೆಸಿದರೂ ಮತದಾರ ತನ್ನ ಮನಸ್ಸನ್ನು ಬದಲಾಯಿಸಲಾರ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಉಜ್ವಲ ಯೋಜನೆ, ಉಜಾಲ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ವಸತಿ ಯೋಜನೆ, ಮುದ್ರಾ ಯೋಜನೆ, ವಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗಳ ಬಗ್ಗೆ ಪ್ರಾಮಾಣಿಕ ನಾಗರಿಕ ಗಮನ ಹರಿಸುತ್ತಾನೆಯೇ ಹೊರತು ಗಲಾಟೆ, ದೊಂಬಿಗಳ ಮೇಲಲ್ಲ.
ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಾನೂನಾತ್ಮಕವಾಗಿ ಸರ್ಕಾರವನ್ನು ವಿರೋಧಿಸಬೇಕು. ಆದರೆ ನಮ್ಮ ದೇಶದ ಪ್ರತಿಪಕ್ಷಗಳು ಆಯ್ಕೆ ಮಾಡಿಕೊಂಡ ವಿಧಾನವೇ ಬೇರೆ. ಅವುಗಳ ಸರ್ಕಾರವನ್ನು ವಿರೋಧಿಸಲು ನಡೆಸುತ್ತಿರುವ ಆವಾಂತರಗಳು ದೇಶದ ಪ್ರಾಮಾಣಿಕ ನಾಗರಿಕನಿಗೆ ಭ್ರಮ ನಿರಸವನ್ನುಂಟು ಮಾಡಿದೆ. ಮುಂಬರುವ ಚುನಾವಣೆಯಲ್ಲಿ ತಾವು ಮಾಡಿದ ಪಾಪಕ್ಕೆ ಈ ಪಕ್ಷಗಳು ಶಿಕ್ಷೆ ಅನುಭವಿಸುವುದು ಖಚಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.