ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಹಳೆಯ ಕರೆನ್ಸಿ ಬಿಲ್ಡಿಂಗ್, ಬೆಲ್ವೆಡೆರೆ ಹೌಸ್, ಮೆಟ್ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಸೇರಿದಂತೆ ನಗರದ ನಾಲ್ಕು ನವೀಕರಿಸಿದ ಪಾರಂಪರಿಕ ಕಟ್ಟಡಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಎಂದು ಅವರ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನವೀಕರಣ ಕಾರ್ಯವು ದೇಶದ ವಿವಿಧ ಮೆಟ್ರೋ ನಗರಗಳಲ್ಲಿ ಅಪ್ರತಿಮ ಕಟ್ಟಡಗಳ ಸುತ್ತ ಸಾಂಸ್ಕೃತಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಸಚಿವಾಲಯದ ಉಪಕ್ರಮದ ಒಂದು ಭಾಗವಾಗಿದೆ.
ಈ ಯೋಜನೆಯನ್ನು ಕೋಲ್ಕತ್ತಾ, ದೆಹಲಿ, ಮುಂಬೈ, ಅಹ್ಮದಾಬಾದ್ ಮತ್ತು ವಾರಣಾಸಿ ನಗರಗಳಲ್ಲೂ ಕೈತ್ತಿಕೊಳ್ಳಲಾಗುತ್ತಿದೆ.
ಕೋಲ್ಕತ್ತಾ ಬಂದರು ಟ್ರಸ್ಟ್ನ 150 ನೆಯ ವಾರ್ಷಿಕೋತ್ಸವದಲ್ಲಿ ಕೂಡ ಪ್ರಧಾನಿ ಸಹ ಭಾಗವಹಿಸಲಿದ್ದಾರೆ. ಕೋಲ್ಕತ್ತಾ ಬಂದರು ಟ್ರಸ್ಟ್ನ ನಿವೃತ್ತ ಮತ್ತು ಅಸ್ತಿತ್ವದಲ್ಲಿರುವ ನೌಕರರ ಪಿಂಚಣಿ ನಿಧಿಯ ಕೊರತೆಯನ್ನು ಪೂರೈಸಲು ಪ್ರಧಾನಿ ಮೋದಿ ಅಂತಿಮ ಕಂತಿಗೆ 501 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜನವರಿ 12 ರಂದು ಸ್ವಾಮಿ ವಿವೇಕಾನಂದದ ಜನ್ಮದಿನದ ಅಂಗವಾಗಿ ಪ್ರಧಾನಿಗಳು ಕೋಲ್ಕತ್ತಾದಲ್ಲಿ ಇರುವ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.