ನವದೆಹಲಿ: ಭಾರತದ ನೌಕಾಪಡೆಯ ಬಲಿಷ್ಠತೆಗೆ ಮಹತ್ವದ ಉತ್ತೇಜನ ಸಿಗಲಿದೆ, ಸ್ಥಳೀಯವಾಗಿ ನಿರ್ಮಿಸಿದ ಆ್ಯಂಟಿ-ಸಬ್ಮರೀನ್ ಟಾರ್ಪೆಡೊ ‘ವರುಣಾಸ್ತ್ರ’ ದ ಮೊದಲ ಬ್ಯಾಚ್ ಪಡೆಯಲು ಭಾರತೀಯ ನೌಕಾಪಡೆಯು ಸಿದ್ಧವಾಗಿದೆ.
ವರದಿಯ ಪ್ರಕಾರ, ಹೆವಿವೇಯ್ಟ್ ಟಾರ್ಪೆಡೊದ ಮೊದಲ ಬ್ಯಾಚ್ ಅನ್ನು ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರಿಸಲಾಗುತ್ತಿದೆ ಮತ್ತು ಸಿಂಧು ಕ್ಲಾಸ್ ಜಲಾಂತರ್ಗಾಮಿ ನೌಕೆಗಳು ಮತ್ತು ಇತರ ನೌಕಾ ಹಡಗುಗಳಿಗೆ ಇದನ್ನು ಅಳವಡಿಸಲಾಗುತ್ತಿದೆ. ದೇಶೀಯವಾಗಿ ಇದನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಎಂಟು ದೇಶಗಳಲ್ಲಿ ಭಾರತವೂ ಒಂದಾಗಿದೆ.
ಸುಮಾರು 1.5 ಟನ್ಗಳಷ್ಟು ತೂಕವಿರುವ ವರುಣಾಸ್ತ್ರವು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಸೇರಿದಂತೆ 40 ಕಿ.ಮೀ.ವರೆಗಿನ ನೀರಿನಲ್ಲಿ ಗುರಿಗಳನ್ನು ನಾಶಮಾಡಲು ಸಮರ್ಥವಾಗಿದೆ. ಇದು ಗಂಟೆಗೆ ಸುಮಾರು 40 ನಾಟಿಕಲ್ ಮೈಲುಗಳಷ್ಟು (74 ಕಿಮೀ) ವೇಗದಲ್ಲಿ 250 ಕೆಜಿ ಹೆಚ್ಚಿನ ಸ್ಫೋಟಕಗಳನ್ನು ಸಾಗಿಸಬಲ್ಲದು.
ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ನೇವಲ್ ಸೈನ್ಸ್ ಅಂಡ್ ಟೆಕ್ನಾಲಜಿಕಲ್ ಲ್ಯಾಬೊರೇಟರಿ (ಎನ್ಎಸ್ಟಿಎಲ್) ವಿನ್ಯಾಸಗೊಳಿಸಿದ ಟಾರ್ಪಿಡೊವನ್ನು ಭಾರತೀಯ ನೌಕಾಪಡೆ ಜುಲೈ 2018 ರಲ್ಲಿ ಸೇರಿಸಿಕೊಂಡಿತ್ತು, ಅದರ ನಂತರ ಇಂತಹ 63 ವ್ಯವಸ್ಥೆಗಳಿಗೆ 1,187 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಡರ್ ನೀಡಲಾಗಿತ್ತು.
ವರದಿಯ ಪ್ರಕಾರ, ವರುಣಾಸ್ತ್ರವನ್ನು ಕೋಲ್ಕತಾ ಕ್ಲಾಸ್, ರಜಪೂತ್ ಕ್ಲಾಸ್ ಮತ್ತು ದೆಹಲಿ ಕ್ಲಾಸ್ ಡಿಸ್ಟ್ರಾಯರ್ ಹೊತ್ತೊಯ್ಯಲಿದೆ. ಇದನ್ನು ಕಮೋರ್ಟಾ ಕ್ಲಾಸ್ ಕಾರ್ವೆಟ್ ಮತ್ತು ತಲ್ವಾರ್ ಕ್ಲಾಸ್ ಫ್ರಿಗೇಟ್ಗಳಿಗೆ ಅಳವಡಿಸಲಾಗಲಿದೆ. ಭಾರತೀಯ ನೌಕಾಪಡೆಯ ಅತಿದೊಡ್ಡ ಸಿಂಧುಘೋಷ್ ಕ್ಲಾಸ್ ಜಲಾಂತರ್ಗಾಮಿ ನೌಕೆಗಳು ವರುಣಾಸ್ತ್ರವನ್ನು ಸಾಗಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.