ನವದೆಹಲಿ: ಫೆಬ್ರವರಿ 2016 ರಲ್ಲಿ ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ (ಐಎಫ್ಆರ್) ಅನ್ನು ಯಶಸ್ವಿಯಾಗಿ ಆಯೋಜಿಸಿದ ವಿಶಾಖಪಟ್ಟಣಂ ನಗರವು, ಈ ವರ್ಷದ ಮಾರ್ಚ್ ತಿಂಗಳಲ್ಲಿ ಮತ್ತೊಂದು ಅಂತರರಾಷ್ಟ್ರೀಯ ನೌಕಾ ಕಾರ್ಯಕ್ರಮ ‘ಮಿಲನ್’ ಅನ್ನು ಆಯೋಜಿಸಲು ಸಜ್ಜಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
‘ಮಿಲನ್ 2020’ ಎನ್ನುವುದು ಬಹು ಆಯಾಮದ ನೌಕಾ ಕಾರ್ಯಕ್ರಮವಾಗಿದ್ದು, ಸ್ನೇಹಪರ ವಿದೇಶಿ ನೌಕಾಪಡೆಗಳ ನಡುವಿನ ವೃತ್ತಿಪರ ಸಂವಹನವನ್ನು ಹೆಚ್ಚಿಸುಸಲಿದೆ ಮತ್ತು ಕಡಲಲ್ಲಿ ಪರಸ್ಪರರ ಸಾಮರ್ಥ್ಯ ವೃದ್ಧಿಸಲಿದೆ ಮತ್ತು ಉತ್ತಮ ಸಮರಭ್ಯಾಸಕ್ಕೆ ವೇದಿಕೆಯಾಗಲಿದೆ.
‘Synergy Across the Seas’ ಎಂಬ ಥೀಮ್ ನೊಂದಿಗೆ ಸಮರಾಭ್ಯಾಸವು ಸ್ನೇಹಪರ ವಿದೇಶಿ ನೌಕಾಪಡೆಯ ಕಾರ್ಯಾಚರಣಾ ಕಮಾಂಡರ್ಗಳಿಗೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಪರಸ್ಪರ ಸಂವಹನ ನಡೆಸಲು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ.
ಸುಮಾರು 41 ನೌಕಾಪಡೆಗಳನ್ನು ಇದಕ್ಕಾಗಿ ಆಹ್ವಾನಿಸಲಾಗಿದೆ, ಇದರಲ್ಲಿ 30 ಕ್ಕೂ ಹೆಚ್ಚು ನೌಕಾಪಡೆಗಳಿಂದ ‘ಮಿಲನ್ 2020’ ರಲ್ಲಿ ಭಾಗವಹಿಸುವ ಬಗ್ಗೆ ದೃಡೀಕರಣಗಳನ್ನು ಸ್ವೀಕರಿಸಲಾಗಿದೆ.
ಈ ಮೆಗಾ ಈವೆಂಟ್ಗೆ ಇನ್ನೂ ಸುಮಾರು ಎರಡು ತಿಂಗಳುಗಳಿರುವಾಗ ಪೂರ್ವ ಸಿದ್ಧತೆಗಳು ಈಸ್ಟರ್ನ್ ನೇವಲ್ ಕಮಾಂಡ್ (ಇಎನ್ಸಿ)ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.