ನವದೆಹಲಿ: ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ಮಾನದಂಡಕ್ಕೆ ಅನುಗುಣವಾಗಿ ದೇಶದ ನಾಲ್ಕು ವಿಮಾನ ನಿಲ್ದಾಣಗಳು ತಮ್ಮ ವ್ಯವಸ್ಥೆಗಳನ್ನು ಗ್ರೇಡಿಂಗ್ ಮಾಡುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರೊಂದಿಗೆ ಲೆವಲ್ 1 ರಿಂದ ಲೆವಲ್ 2 ನೇ ಹಂತಕ್ಕೆ ಪರಿವರ್ತನೆಯಾಗಿವೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹೇಳಿದೆ.
ವಿಮಾನ ನಿಲ್ದಾಣಗಳು 2018ರಲ್ಲಿ ಗ್ರೇಡಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡವು ಮತ್ತು ಇಂಗಾಲದ ಹೊರಸೂಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದವು.
“ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಲೆವೆಲ್ 2ಕ್ಕೆ ಮೇಲ್ದರ್ಜೆಗೇರಲು ಅಗತ್ಯವಿರುವ ಎಲ್ಲ ಅವಶ್ಯಕತೆಗಳನ್ನು ಪೂರೈಸಿದೆ. ಕಾರ್ಬನ್ ನಿರ್ವಹಣಾ ಯೋಜನೆ ಅಳವಡಿಕೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದ್ದು ಮೇಲ್ದರ್ಜೆಗೇರಲು ಕಾರಣವಾಗಿದೆ”ಎಂದು ಎಎಐ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ನಾಲ್ಕು ವರ್ಷಗಳ ಸಿಒ 2 ಹೊರಸೂಸುವಿಕೆಗೆ ಒದಗಿಸಲಾದ ಮಾಹಿತಿಯ ಪ್ರಕಾರ, ಈ ವಿಮಾನ ನಿಲ್ದಾಣಗಳು ವಾಯು ದಟ್ಟಣೆಯ ಹೆಚ್ಚಳದ ಹೊರತಾಗಿಯೂ ಇಂಗಾಲದ ಹೊರಸೂಸುವಿಕೆಯ ಇಳಿಕೆಗೆ ಸಾಕ್ಷಿಯಾಗಿವೆ
ಎಸಿಐನ ಗ್ರೇಡಿಂಗ್ ವ್ಯವಸ್ಥೆಯು ಮ್ಯಾಪಿಂಗ್, ಕಡಿತ, ಆಪ್ಟಿಮೈಸೇಶನ್ ಮತ್ತು ತಟಸ್ಥತೆ ಎಂಬ ನಾಲ್ಕು ವಿಭಾಗಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.