ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರತಿವರ್ಷ ಜನವರಿ 9 ರಂದು ಭಾರತವು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಣೆ ಮಾಡುತ್ತದೆ. 1915 ರ ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿಯವರು ಅಹಮದಾಬಾದ್ಗೆ ಮರಳಿದ ದಿನವನ್ನು ನೆನಪಿಸುವುದು ಕೂಡ ಈ ದಿನದ ಉದ್ದೇಶವಾಗಿದೆ.
ಈ ಆಚರಣೆ ವಿದೇಶಿ ಭಾರತೀಯ ಸಮುದಾಯಕ್ಕೆ ಭಾರತದಲ್ಲಿ ಸರ್ಕಾರಿ ಮತ್ತು ಭಾರತೀಯ ಸಮುದಾಯಗಳೊಂದಿಗೆ ಪರಸ್ಪರ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತವೆ. 2003ರಲ್ಲಿ ಆರಂಭವಾದ ಈ ದಿನಾಚರಣೆಯು ಭಾರತ ಸರ್ಕಾರದ ವಿದೇಶ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಾಣಿಜ್ಯ ಮಂಡಳಿಯ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಿಂದ ಪ್ರಾಯೋಜಿಸಲ್ಪಟ್ಟಿದೆ.
ಈ ಆಚರಣೆಯ ಉದ್ದೇಶಗಳೆಂದರೆ :
▪ಎನ್ಆರ್ಐಗಳು ಭಾರತದ ಬಗ್ಗೆ ತಮ್ಮ ಭಾವನೆಗಳನ್ನು ಮತ್ತು ಗ್ರಹಿಕೆಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ಒದಗಿಸುವುದು.
▪ವಿಶ್ವದ ಎಲ್ಲಾ ದೇಶಗಳಲ್ಲಿ ಇರುವ ಎನ್ಆರ್ಐಗಳ ಜಾಲವನ್ನು ರಚಿಸುವುದು ಮತ್ತು ಭಾರತದ ಯುವ ಪೀಳಿಗೆಯನ್ನು ಅವರೊಂದಿಗೆ ಸಂಪರ್ಕಿಸುವುದು.
▪ವಿದೇಶದಲ್ಲಿ ವಾಸಿಸುವ ಭಾರತೀಯ ಕಾರ್ಮಿಕರು ಎದುರಿಸುತ್ತಿರುವ ತೊಂದರೆಗಳನ್ನು ತಿಳಿಯುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವುದು
▪ಸಾಗರೋತ್ತರ ಭಾರತೀಯರನ್ನು ತಮ್ಮ ಬೇರುಗಳೊಂದಿಗೆ ಮರುಸಂಪರ್ಕಿಸುವುದು ಮತ್ತು ಅವರು ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವಂತೆ ಮಾಡುವುದು.
ಮಹಾತ್ಮ ಗಾಂಧಿ 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನವಾದ್ದರಿಂದ ಈ ದಿನವು ಹೆಚ್ಚಿನ ಮಹತ್ವವನ್ನು ಹೊಂದಿದೆ. ನಿಸ್ಸಂದೇಹವಾಗಿ, ಪ್ರಪಂಚದಾದ್ಯಂತ ಹಲವಾರು ಭಾಗಗಳಲ್ಲಿ ವಾಸಿಸುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ಸರ್ಕಾರಕ್ಕೆ ಇದು ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು ಮತ್ತು ಭಾರತವನ್ನು ಬ್ರಿಟಿಷ್ ಅಥವಾ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸಿದ ಶ್ರೇಷ್ಠ ಪ್ರವಾಸಿಗರಾದರು. ಅವರು ಭಾರತೀಯರ ಜೀವನವನ್ನು ಬದಲಿಸಿದ್ದಲ್ಲದೆ, ವ್ಯಕ್ತಿಯ ಕನಸುಗಳು ಮತ್ತು ಆಸೆಗಳನ್ನು ಈಡೇರಿಸಲು ಸ್ಪಷ್ಟ ಮಾರ್ಗವನ್ನು ತೋರಿಸಿದರು. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯನ್ನು ಸಹ ಸೃಷ್ಟಿಸಿದರು. ಅನಿವಾಸಿ ಭಾರತೀಯ ಅಥವಾ ಪ್ರವಾಸಿ ಭಾರತಕ್ಕೆ ತರಬಹುದಾದ ಬದಲಾವಣೆ ಮತ್ತು ಅಭಿವೃದ್ಧಿಯ ಸಂಕೇತವಾಗಿ ಗಾಂಧೀಜಿ ತಮ್ಮ ಜೀವನವನ್ನು ಪ್ರಸ್ತುತಪಡಿಸಿದರು.
ಪ್ರವಾಸಿ ಭಾರತೀಯ ದಿವಸ್ ಅಥವಾ ಅನಿವಾಸಿ ಭಾರತೀಯ ದಿನವನ್ನು ಪ್ರತಿ ವರ್ಷ ಜನವರಿ 9 ರಂದು ಕೇಂದ್ರ ಸರ್ಕಾರವು 2015 ರವರೆಗೆ ದೊಡ್ಡ ಸಮಾರಂಭದೊಂದಿಗೆ ಆಚರಿಸುತ್ತಿತ್ತು, ಆದರೆ ಈಗ ಭಾರತದ ಅಭಿವೃದ್ಧಿಯಲ್ಲಿ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ಸಮಾರಂಭವನ್ನು ಏರ್ಪಡಿಸಿ ಆಚರಿಸಲಾಗುತ್ತದೆ. 2019ರ ಜನವರಿಯಲ್ಲಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೊಡ್ಡ ಸಮಾರಂಭವನ್ನು ಏರ್ಪಡಿಸಿತ್ತು. ಇನ್ನು ಮುಂದಿನ ವರ್ಷ ಸಮಾರಂಭ ನಡೆಯಲಿದೆ.
ಭಾರತ ಸರ್ಕಾರದ ಪ್ರಕಾರ, ಎನ್ಆರ್ಐಗೆ ವಿಶ್ವದಾದ್ಯಂತ ವ್ಯಾಪಾರ ಮತ್ತು ಅಭಿವೃದ್ಧಿ ಕಾರ್ಯತಂತ್ರಗಳ ವಿಷಯದಲ್ಲಿ ಜಾಗತಿಕ ಮಾನ್ಯತೆ ಇದೆ. ಅವರಿಗೆ ಕೆಲವು ಅವಕಾಶಗಳನ್ನು ಒದಗಿಸಿದರೆ ಅವರು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ತಮ್ಮ ತಾಯಿನಾಡಿನ ಮೇಲೆ ತುಂಬುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಗೆ ಕೊಡುಗೆ ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.