ಭೋಪಾಲ್: ಕೇಂದ್ರ ಸರ್ಕಾರದ ನೆರವಿನೊಂದಿಗೆ ನಡೆಯುತ್ತಿರುವ, ಕೌಟುಂಬಿಕ ಹಿಂಸೆ ಮತ್ತು ಇತರ ಅಪರಾಧಗಳಿಗೆ ಬಲಿಯಾದ ಮಹಿಳೆಯರಿಗೆ ಸಹಾಯ ಮಾಡುವ ‘ಗೌರವಿ’ಯು, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಇದರಡಿಯಲ್ಲಿ ಮಹಿಳೆಯರಿಗೆ ಇ-ರಿಕ್ಷಾ ಓಡಿಸುವ ಕೌಶಲ್ಯವನ್ನು ಕಲಿಸಿಕೊಡಲಾಗುತ್ತಿದೆ.
ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ದೊರಕಿಸಿಕೊಡಲು ಮತ್ತು ಅವರ ಸಾಲಗಳನ್ನು ತೀರಿಸಲು ಸಹಾಯ ಮಾಡುವ ಮೂಲಕ ಅವರಿಗೆ ಸ್ವಾವಲಂಬಿಗಳಾಗಿ ಬದುಕುವುದನ್ನು ‘ಗೌರವಿ’ ಸಂಸ್ಥೆ ಕಲಿಸಿಕೊಡುತ್ತಿದೆ.
“ತರಬೇತಿ ಕಾರ್ಯಕ್ರಮಕ್ಕೆ ಬರುತ್ತಿರುವ ಹೆಚ್ಚಿನ ಮಹಿಳೆಯರು ಅನಕ್ಷರಸ್ಥರು. ಒಂದು ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ, ಅದರ ನಂತರ ಅವರಿಗೆ ಇ-ರಿಕ್ಷಾಗಳನ್ನು ಪಡೆಯಲು ಸಾಲ ಪಡೆಯುವಲ್ಲಿ ಸಹ ನಾವು ಅವರಿಗೆ ಸಹಾಯ ಮಾಡುತ್ತೇವೆ. ಪರವಾನಗಿ ಮತ್ತು ಇದರ ದಾಖಲೆಗಳನ್ನು ಪಡೆಯುವಲ್ಲಿ ಕೂಡ ನಾವು ಸಹಾಯ ಮಾಡುತ್ತೇವೆ “ಎಂದು ಸಂಸ್ಥೆಯ ನಿರ್ದೇಶಕಿ ಶಿವಾನಿ ಹೇಳುತ್ತಾರೆ.
“ಗೌರವಿ ಮೂಲಕ ಮಹಿಳೆಯರಿಗೆ ವಾಹನ ಚಾಲನೆ ಮಾಡುವ ಕೌಶಲ್ಯ ತರಬೇತಿಯನ್ನು ನೀಡುವ ಪ್ರಯತ್ನವಾಗಿದೆ. ಇದು ಕೌಟುಂಬಿಕ ಹಿಂಸೆ ಮತ್ತು ನಿಂದನೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಸಹಾಯ ಮಾಡುವ ಒಂದು ಕೇಂದ್ರವಾಗಿದೆ. ಇಲ್ಲಿಗೆ ಬರುವ ಹೆಚ್ಚಿನ ಮಹಿಳೆಯರು ಮನೆಯ ಏಕೈಕ ಆರ್ಥಿಕ ಆಧಾರಸ್ತಂಭವಾಗಿದ್ದಾರೆ” ಎಂದು ಅವರು ಹೇಳುತ್ತಾರೆ.
ಮೊದಲ ಬ್ಯಾಚ್ನ 12 ಮಹಿಳೆಯರಿಗೆ ಈ ತರಬೇತಿಯನ್ನು ನೀಡಲಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 40 ಮಹಿಳೆಯರಿಗೆ ತರಬೇತಿ ನೀಡಲು ಸಂಸ್ಥೆ ಯೋಜಿಸಿದೆ.
“ಪ್ರಸ್ತುತ ತರಬೇತಿ ಪ್ರಕ್ರಿಯೆಯಲ್ಲಿರುವ 12 ಮಹಿಳೆಯರು ಹೆಚ್ಚಿನ ಉತ್ಸಾಹವನ್ನು ತೋರಿಸಿದ್ದಾರೆ. ಈ ವರ್ಷ ಕನಿಷ್ಠ 40 ಮಹಿಳೆಯರಿಗೆ ಕೌಶಲ್ಯವನ್ನು ಕಲಿಸುವ ಗುರಿ ಹೊಂದಿದ್ದೇವೆ. ಇಲ್ಲಿಗೆ ಬರುವ ಹೆಚ್ಚಿನ ಮಹಿಳೆಯರು ಕೌಟುಂಬಿಕ ಹಿಂಸಾಚಾರವನ್ನು ಎದುರಿಸಿದ್ದಾರೆ ಅಥವಾ ವರದಕ್ಷಿಣೆ ಕಿರುಕುಳಕ್ಕೆ ಗುರಿಯಾಗಿದ್ದಾರೆ. ಮತ್ತೆ ಹೋರಾಡಲು ಮತ್ತು ಮತ್ತೆ ಎದ್ದೇಳಲು ಅವರಿಗೆ ಇದು ದೊಡ್ಡ ಅವಕಾಶವಾಗಿದೆ “ಎಂದು ಶಿವಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.