ನವದೆಹಲಿ: 2019ರಲ್ಲಿ ರೈಲಿನಲ್ಲಿ ಅನಗತ್ಯವಾಗಿ ಚೈನ್ ಎಳೆದ ಘಟನೆಗಳು ಸುಮಾರು 55,373 ಸಂಭವಿಸಿವೆ. ಇದಕ್ಕೆ ಸಂಬಂಧಿಸಿದಂತೆ 45,000 ಕ್ಕೂ ಹೆಚ್ಚು ಜನರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಬಂಧಿಸಿದೆ. ಅನಗತ್ಯವಾಗಿ ಚೈನ್ ಎಳೆಯುವುದು ರೈಲಿನ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ ಮತ್ತು ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನಾನುಕೂಲತೆ ಉಂಟಾಗುತ್ತದೆ ಎಂದು ಭಾರತೀಯ ರೈಲ್ವೆ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಮಂಗಳವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಆರ್ಪಿಎಫ್ ಡಿಜಿ ಅರುಣ್ ಕುಮಾರ್, ರೈಲುಗಳ ಮೇಲೆ ಕಲ್ಲು ಎಸೆದ 400 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು. 2019 ರಲ್ಲಿ ಚೈನ್ ಎಳೆದ ಘಟನೆಗಳ ಸಂಖ್ಯೆ 55,373 ಆಗಿದ್ದು, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) 45,784 ಜನರನ್ನು ಬಂಧಿಸಿದೆ ಮತ್ತು 43,951 ಜನರನ್ನು ವಿಚಾರಣೆಗೆ ಒಳಪಡಿಸಿದೆ ಎಂದಿದ್ದಾರೆ.
46,223 ರೈಲುಗಳ ಮೇಲೆ ಚೈನ್ ಎಳೆದ ಘಟನೆಗಳಿಂದಾಗಿ ತೀವ್ರ ಪರಿಣಾಮ ಬೀರಿವೆ ಎಂದು ಆರ್ಪಿಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಅವಧಿಯಲ್ಲಿ 1,000 ಕ್ಕೂ ಹೆಚ್ಚು ರೈಲುಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು, 659 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ 404 ಜನರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಚೈನ್ ಎಳೆಯುವ ಮತ್ತು ಕಲ್ಲು ತೂರುವ ಘಟನೆಗಳು ಹೆಚ್ಚು ನಡೆಯುವ ಸ್ಥಳಗಳಲ್ಲಿ ನಾವು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದೇವೆ. ಮೇ 2019 ರಿಂದ ಚೈನ್ ಎಳೆಯುವ ಘಟನೆಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಕಲ್ಲು ತೂರಾಟದ ಪ್ರಕರಣಗಳೂ ಕಡಿಮೆಯಾಗಿವೆ ”ಎಂದು ಆರ್ಪಿಎಫ್ ಡಿಜಿ ಅರುಣ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.