ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ನಮೋ ಆ್ಯಪ್’ನ ಹೊಸ ಅವತರಣಿಕೆ ಬಿಡುಗಡೆಗೊಂಡಿದೆ. ಎಕ್ಸ್ಕ್ಲೂಸಿವ್ ಸುದ್ದಿಗಳಿಗೆ ಸುಲಲಿತವಾಗಿ ಮತ್ತು ಸುಲಭವಾಗಿ ಪ್ರವೇಶ ಪಡೆಯಲು ಹೊಸ ಅವತರಣಿಕೆಯಲ್ಲಿ ಹೊಸ ಹೊಸ ಫೀಚರ್ಗಳನ್ನು ಸೇರಿಸಲಾಗಿದೆ.
ನಮೋ ಆಪ್ನ ನವೀನ, ಅತೀ ವೇಗದ, ನಯ ಮತ್ತು ಅತ್ಯುತ್ತಮ ಅವತರಣಿಕೆ ಇದಾಗಿದೆ. ಇದರ ಪ್ರಾಮುಖ್ಯತೆಗಳೆಂದರೆ,
ಈವೆಂಟ್ ಪ್ಲಾಟ್ಫಾರ್ಮ್: ಜನರ ಸಮೀಪದಲ್ಲಿನ ಕಾರ್ಯಕ್ರಮ, ಸಮಾವೇಶ ಇತ್ಯಾದಿಗಳ ಬಗೆಗಿನ ಮಾಹಿತಿಯನ್ನು ಇದು ಒದಗಿಸುತ್ತದೆ. ಇದರಿಂದಾಗಿ ಸಮಾರಂಭದಲ್ಲಿ ಭಾಗಿಯಾಗುವ, ಆಹ್ವಾನ ನೀಡುವ ಮತ್ತು ಹಂಚುವ ಅವಕಾಶಕ್ಕೆ ಇದು ಅನುವು ಮಾಡಿಕೊಡುತ್ತದೆ.
ಡೌನ್ಲೋಡ್ ಸೆಕ್ಷನ್: ಲೇಖನ, ಸಮೀಕ್ಷೆ, ವೀಡಿಯೋ ಮತ್ತು ಫೋಟೋಗಳು ಇದರಲ್ಲಿ ಸಿಗಲಿವೆ.
ಸುಧಾರಿತ ಸರ್ಚ್ ರಿಸಲ್ಟ್: ಸುಧಾರಿತ ಸರ್ಚ್ ವ್ಯವಸ್ಥೆ ಯ ಮೂಲಕ ಲೇಖನ, ಫೋಟೋಗಳು, ವಿಡಿಯೋಗಳು ಇತ್ಯಾದಿಗಳನ್ನು ಸುಲಲಿತವಾಗಿ ಪತ್ತೆ ಮಾಡಬಹುದಾಗಿದೆ.
2019ರ ಲೋಕಸಭೆಯ ಬಳಿಕ ಈ ಆ್ಯಪ್ ಎರಡನೇಯ ಬಾರಿಗೆ ಅಪ್ಡೇಟ್ ಆಗುತ್ತಿದೆ. ಚುನಾವಣೆಯ ಸಂದರ್ಭದಲ್ಲೂ ಇದನ್ನು ಅಪ್ಡೇಟ್ ಮಾಡಲಾಗಿತ್ತು. ಬಳಿಕ ಸೆಪ್ಟಂಬರ್ ತಿಂಗಳಲ್ಲಿ ನವೀಕರಿಸಲಾಗಿತ್ತು. ಇದೀಗ ಮತ್ತೊಮ್ಮೆ ಹೊಸ ಅವತರಣಿಗೆ ಬಿಡುಗಡೆಯಾಗಿದೆ. ಮೋದಿಯವರ ರಾಜಕೀಯ ಪ್ರಯಾಣದ ವಿವಿಧ ಆಯಾಮಗಳನ್ನು ಈ ಆ್ಯಪ್ ತೋರಿಸುತ್ತದೆ. ಬಿಜೆಪಿ ದೇಶದಾದ್ಯಂತ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ.
In the new version of the NaMo App, special focus has been laid on top notch user experience in the Your Voice section of Volunteer module. Tweets, infographics & content related to trending topics can be shared directly by users. Check it out!
— narendramodi_in (@narendramodi_in) January 8, 2020
Did you check out the new version of NaMo App yet?
Downloading & reading booklets got easier on Volunteer module. You can read right there, in the Downloads section of Volunteer module. A new booklet is awaiting you on the ‘Dynamic December’ of the Modi Govt. Check the App out!

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.