ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್ ಬ್ರೇಕರ್ಗಳನ್ನು ತೆಗೆದುಹಾಕುವ ವಿಶೇಷ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಿಶೇಷವಾಗಿ ಟೋಲ್ ಪ್ಲಾಜಾಗಳಲ್ಲಿ ಸುಗಮ ಮತ್ತು ಕಿರಿಕಿರಿ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಈ ಹೆಜ್ಜೆಯನ್ನು ಮುಂದಿಡಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವುದರಿಂದ ಮತ್ತು ನಗದು ಟೋಲ್ ಲೇನ್ಗಳನ್ನು ಫಾಸ್ಟ್ಯಾಗ್ ಲೇನ್ಗಳಾಗಿ ಪರಿವರ್ತಿಸುತ್ತಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ನಿರ್ಮಿಸಲಾದ ಸ್ಪೀಡ್ ಬ್ರೇಕರ್ಗಳು / ರಂಬಲ್ ಸ್ಟ್ರಿಪ್ಗಳನ್ನು ತೆಗೆದು ಹಾಕುವ ಕಾರ್ಯ ಮಾಡಲಾಗುತ್ತಿದೆ. ಇದು ಸುಗಮ ವಾಹನ ಸಂಚಾರಕ್ಕೆ ಪೂರಕವಾಗಲಿದೆ.
ವಿವಿಧ ವರ್ಗಗಳ ರಸ್ತೆಗಳು ಮತ್ತು ವಿಭಿನ್ನ ಸಂದರ್ಭಗಳಲ್ಲಿ ವಾಹನಗಳ ಅನುಕೂಲಕರ ಮತ್ತು ಸುರಕ್ಷತೆಯ ಸಂಚಾರಕ್ಕಾಗಿ ಸ್ಪೀಡ್ ಬ್ರೇಕರ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವು ಸ್ಥಳಗಳಲ್ಲಿ, ಕ್ರಮಬದ್ಧವಾದ ಸಂಚಾರ ಮತ್ತು ಸುಧಾರಿತ ಸುರಕ್ಷತೆಯನ್ನು ಉತ್ತೇಜಿಸಲು ವೇಗ ನಿಯಂತ್ರಕ ಅಗತ್ಯವಾಗುತ್ತದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ವ್ಯಾಪ್ತಿಯಲ್ಲಿನ ಅನಗತ್ಯ ಸ್ಥಳಗಳಲ್ಲಿ ಇರುವ ಸ್ಪೀಡ್ ಬ್ರೇಕರ್ಗಳನ್ನು ತೆಗೆದುಹಾಕುವ ಕಾರ್ಯ ಮಾಡಲಾಗುತ್ತಿದೆ.
ಸ್ಪೀಡ್ ಬ್ರೇಕರ್ಗಳು ವಿಳಂಬ, ವಾಹನಗಳಿಗೆ ಹಾನಿ, ಪ್ರಯಾಣಿಕರಿಗೆ ತೊಂದರೆ ಮತ್ತು ಹೆಚ್ಚು ಇಂಧನವನ್ನು ವ್ಯಯವಾಗುವಂತೆ ಮಾಡುತ್ತದೆ. ಇವುಗಳನ್ನು ತೆಗೆದು ಹಾಕಿದರೆ, ಸಮಯ ಮತ್ತು ಹಣ ಉಳಿತಾಯವಾಗಲಿದೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಅದರಲ್ಲೂ ಅಂಬ್ಯುಲೆನ್ಸ್ ಪ್ರಯಾಣ, ವಯಸ್ಸಾದವರನ್ನು ಹೊತ್ತೊಯ್ಯುವ ವಾಹನಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಿದೆ.
ಹೆದ್ದಾರಿಗಳಲ್ಲಿ ಕಿರಿಕಿರಿ ಮುಕ್ತ ಸಂಚಾರವನ್ನು ಒದಗಿಸಲು ಫಾಸ್ಟ್ಯಾಗ್ ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು 2019 ರ ಡಿಸೆಂಬರ್ 15 ರಿಂದ ಜಾರಿಗೆ ತರಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ತಡೆರಹಿತ ಪ್ರಯಾಣವನ್ನು ಒದಗಿಸುವ ಬದ್ಧತೆಯ ಮತ್ತೊಂದು ಹೆಜ್ಜೆಯೆಂದರೆ ಸ್ಪೀಡ್ ಬ್ರೇಕರ್ ಮುಕ್ತ ಹೆದ್ದಾರಿಗಳ ಪರಿಚಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.