ನವದೆಹಲಿ: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ಕ್ಕೆ ಸಜ್ಜಾಗಿರುವ ಗಗನಯಾನಿಗಳಿಗೆ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory) ಈಗಾಗಲೇ ಆಹಾರಗಳನ್ನು ಸಿದ್ಧಪಡಿಸುತ್ತಿದೆ. ಎಗ್ ರೋಲ್ಸ್, ವೆಜ್ ರೋಲ್ಸ್, ಇಡ್ಲಿ, ಮೂಂಗ್ ದಾಲ್ ಹಲ್ವಾ, ಮತ್ತು ವೆಜ್ ಪಲಾವ್ ಸೇರಿದಂತೆ ಹಲವಾರು ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮೈಸೂರಿನಲ್ಲಿರುವ ಪ್ರಯೋಗಾಲಯವು ಗಗನಯಾನಿಗಳಿಗೆ ಮಿಷನ್ ವೇಳೆ ಆಹಾರ ಹೀಟರ್ಗಳನ್ನು ಕೂಡ ಒದಗಿಸಲಿದೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯಿಲ್ಲದ ಕಾರಣ ಗಗನಯಾತ್ರಿಗಳು ಎದುರಿಸುವ ತೊಂದರೆಗಳನ್ನು ಗಮನಿಸಿ, ನೀರು ಮತ್ತು ಇತರ ದ್ರವಗಳನ್ನು ಕುಡಿಯಲು ಸಹಾಯ ಮಾಡುವ ವಿಶೇಷ ಪಾತ್ರೆಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಜನವರಿ 1 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಲ್ಕು ಗಗನಯಾತ್ರಿಗಳನ್ನು ತನ್ನ ಮಿಷನ್ ‘ಗಗನಯಾನ’ಕ್ಕಾಗಿ ಆಯ್ಕೆ ಮಾಡಿದೆ ಇವರು ಶೀಘ್ರದಲ್ಲೇ ರಷ್ಯಾದಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಲಿದ್ದಾರೆ.
ಗಗನಯಾನ ಮಿಷನ್ನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿರುವ ಇಸ್ರೋ ಮುಖ್ಯಸ್ಥರು, “ಈ ವರ್ಷ ನಾವು ಹಲವಾರು ಪರೀಕ್ಷೆಗಳನ್ನು ನಡೆಸಲಿದ್ದೇವೆ. ಅಲ್ಲದೇ, ಅಂತಿಮವಾಗಿ ನಾಲ್ಕು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಅವರು ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ಪ್ರಾರಂಭಿಸಲಿದ್ದಾರೆ” ಎಂದಿದ್ದಾರೆ.
ಗಗನಯಾನ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.