ಲಕ್ನೋ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಫೆಬ್ರವರಿ ತಿಂಗಳಲ್ಲಿ ಲಕ್ನೋದಲ್ಲಿ ‘ಡಿಫೆನ್ಸ್ ಎಕ್ಸ್ಪೋ -2020’ ನಡೆಯಲಿದೆ ಎಂದು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಗೂ ಮೊದಲು ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಡಿಫೆನ್ಸ್ ಎಕ್ಸ್ಪೋ -2020’ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಫೆಬ್ರವರಿಯಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್ಪೋಗೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಅಲ್ಲದೇ, ಭಾರತದಲ್ಲಿ ರಕ್ಷಣಾ ಉತ್ಪಾದನೆ ಮತ್ತು ಏರೋಸ್ಪೇಸ್ ತಯಾರಿಕೆಗೆ ಉತ್ತರ ಪ್ರದೇಶವು ಪ್ರಮುಖ ತಾಣವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
”ಉತ್ತರ ಪ್ರದೇಶದಲ್ಲಿ, ನಾವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿದ್ದೇವೆ. ನಾವು ಲಕ್ನೋದಲ್ಲಿ ಹೂಡಿಕೆದಾರರ ಶೃಂಗಸಭೆ, ವಾರಣಾಸಿಯಲ್ಲಿ ಎನ್ಆರ್ಐ ಸಮ್ಮೇಳನ ಮತ್ತು ಪ್ರಯಾಗರಾಜ್ನಲ್ಲಿ ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಇಲ್ಲಿ ಆಯೋಜಿಸಲಾದ ಅನೇಕ ಕಾರ್ಯಕ್ರಮಗಳು ಜಾಗತಿಕ ಮನ್ನಣೆಯನ್ನು ಗಳಿಸಿವೆ” ಎಂದಿದ್ದಾರೆ.
ಎಕ್ಸ್ಪೋಗೆ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರಿಗೆ ಆದಿತ್ಯನಾಥ್ ಧನ್ಯವಾದ ಅರ್ಪಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, “ಡಿಫೆನ್ಸ್ ಎಕ್ಸ್ಪೋ 2020 ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪ್ರದರ್ಶನವಾಗಿದೆ. ಯುಪಿ ಯ ಲಕ್ನೋದಲ್ಲಿ ನಡೆಯಲಿರುವ ಭಾರತದ ಅತಿದೊಡ್ಡ ಎಕ್ಸ್ಪೋ ಇದಾಗಿದೆ. ಅನೇಕ ಹೂಡಿಕೆದಾರರು ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಬರುತ್ತಿದ್ದಾರೆ ಮತ್ತು ಅವರು ಹೂಡಿಕೆ ಮಾಡವತ್ತ ಎದುರು ನೋಡುತ್ತಿದ್ದಾರೆ” ಎಂದಿದ್ದಾರೆ.
“ಭಾರತ: ಉದಯೋನ್ಮುಖ ರಕ್ಷಣಾ ಉತ್ಪಾದನಾ ಕೇಂದ್ರ’ ಎಂಬ ಥೀಮ್ನಲ್ಲಿ ‘ಡಿಫೆನ್ಸ್ ಇಂಡಿಯಾ ಎಕ್ಸ್ಪೋ 2020” ಅನ್ನು ಆಯೋಜನೆಗೊಳಿಸಲಾಗುತ್ತಿದೆ. ‘ಡಿಜಿಟಲ್ ಟ್ರಾನ್ಸ್ಫರ್ಮೇಷನ್ ಆಫ್ ಡಿಫೆನ್ಸ್’ಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.