ಕಳೆದ ಐದು ವರ್ಷಗಳಿಂದಲೂ ಎನ್ಡಿಎ ಸರ್ಕಾರಕ್ಕೆ ಮೂಲಸೌಕರ್ಯದ ಅಭಿವೃದ್ಧಿ ದೊಡ್ಡ ಆದ್ಯತೆಯಾಗಿದೆ. ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ, ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನೂ ಅದು ಮಾಡಿದೆ. ಮೂಲಸೌಕರ್ಯದಲ್ಲಿನ ಹೆಚ್ಚಿನ ಸಾರ್ವಜನಿಕ ಹೂಡಿಕೆಯು ತೈಲ ಕೊಡುಗೆಗಳಿಂದ ಬಂದಿದೆ, ಆರಂಭದ ವರ್ಷಗಳಲ್ಲಿ ಕಚ್ಚಾ ತೈಲ ಬೆಲೆಗಳ ಕುಸಿತದಿಂದಾಗಿ ಸರ್ಕಾರಕ್ಕೆ ಇದು ಸಾಧ್ಯವಾಗಿತ್ತು.
ಯುಪಿಎ ಸರ್ಕಾರವು ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಬಹಳ ಕಡಿಮೆ ಹೂಡಿಕೆ ಮಾಡಿತ್ತು, ಏಕೆಂದರೆ MGNREGA ನಂತಹ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಸರ್ಕಾರವನ್ನು ಮೂಲಸೌಕರ್ಯ ನಿರ್ಮಾಣಕ್ಕೆ ಹಣಕಾಸು ಒದಗಿಸುವುದನ್ನು ನಿರ್ಬಂಧಿಸಿತ್ತು. ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದ ಖರ್ಚು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ತೀವ್ರವಾಗಿ ಹೆಚ್ಚಾಗಿದೆ. ಮೊದಲ ವರ್ಷದಲ್ಲಿ ಸರ್ಕಾರವು ಮೂಲಸೌಕರ್ಯಕ್ಕಾಗಿ ಕೇವಲ 1.81 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಇದು 2018-19ರಲ್ಲಿ 5.97 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 19.36 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಖರ್ಚು ಮೂರು ಪಟ್ಟು ಹೆಚ್ಚಾಗಿದೆ.
ಬಿಜೆಪಿಯ 2019 ರ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಮುಂದಿನ ಐದು ವರ್ಷಗಳಲ್ಲಿ 102 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯಕ್ಕಾಗಿ ಖರ್ಚು ಮಾಡಲು ಮೋದಿ ಸರ್ಕಾರ ನಿರ್ಧರಿಸಿದೆ. ಇತ್ತೀಚಿಗಷ್ಟೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು National Infrastructure Pipeline (NIP) ಯನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 23 ವಲಯಗಳನ್ನು ಸರ್ಕಾರ ಗುರುತಿಸಿದ್ದು, ಅಲ್ಲಿ ಮುಂದಿನ ಐದು ವರ್ಷಗಳವರೆಗೆ 102 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಯೋಜನೆಗಳನ್ನು ಯೋಜಿಸಲಾಗಿದೆ.
102 ಲಕ್ಷ ಕೋಟಿ ರೂ. ವೆಚ್ಚದ ಪೈಕಿ ಕೇಂದ್ರ ಸರ್ಕಾರವು ಶೇ.39ರಷ್ಟು ನೀಡಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ, ಇಷ್ಟೇ ಮೊತ್ತವನ್ನು ರಾಜ್ಯ ಸರ್ಕಾರಗಳು ಕೂಡ ನೀಡಲಿವೆ ಮತ್ತು ಉಳಿದ ಶೇ.22ರಷ್ಟು ಖಾಸಗಿ ವಲಯದಿಂದ ಬರಲಿದೆ.
ಸರ್ಕಾರ ಒದಗಿಸಿದ ಮಾಹಿತಿಯ ಪ್ರಕಾರ, 42.7 ಲಕ್ಷ ಕೋಟಿ ರೂ. (43%) ಮೌಲ್ಯದ ಯೋಜನೆಗಳು ಅನುಷ್ಠಾನದಲ್ಲಿವೆ, 32.7 ಲಕ್ಷ ಕೋಟಿ ರೂ. (33%) ಯೋಜನೆಯು ಪರಿಕಲ್ಪನಾ ಹಂತದಲ್ಲಿದ್ದರೆ, 19.1 ಲಕ್ಷ ಕೋಟಿ ರೂ. (19%) ಯೋಜನೆಗಳು ಅಭಿವೃದ್ಧಿಯಲ್ಲಿವೆ.
ಇಂಧನ ಕ್ಷೇತ್ರದಲ್ಲಿ 24.54 ಲಕ್ಷ ಕೋಟಿ ರೂಪಾಯಿಗಳು ಅಥವಾ ಒಟ್ಟು ಹೂಡಿಕೆಯ ಶೇಕಡಾ 24 ರಷ್ಟು ಹೆಚ್ಚಿನ ಹೂಡಿಕೆಯನ್ನು ಪ್ರಸ್ತಾಪಿಸಲಾಗಿದೆ. ಇಂಧನ ಕ್ಷೇತ್ರದಲ್ಲಿ, ಮುಂದಿನ ಐದು ವರ್ಷಗಳವರೆಗೆ ಸರ್ಕಾರದ ಗಮನವು ನವೀಕರಿಸಬಹುದಾದ ಶಕ್ತಿಯ ಮೇಲೆ ಇರಲಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಉಷ್ಣ ಶಕ್ತಿಯಲ್ಲಿ ಗರಿಷ್ಠ ಹೂಡಿಕೆ ಮಾಡಲಾಗುತ್ತಿದೆ. ನವೀಕರಿಸಬಹುದಾದ ಹೂಡಿಕೆಯ ಬಳಿಕ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದತ್ತ ಹೆಚ್ಚಿನ ಗಮನ ನೀಡಲಾಗಿದೆ, ಎನರ್ಜಿ ಪೈನಲ್ಲಿ ಫ್ಯೂಝಿಲ್ ಇಂಧನಗಳ ಕೊಡುಗೆಯನ್ನು ಕಡಿಮೆ ಮಾಡಲು ಸರ್ಕಾರ ಗಮನ ಹರಿಸುತ್ತಿದೆ.
ರಸ್ತೆ ಮತ್ತು ಮೂಲಸೌಕರ್ಯದಲ್ಲಿ 31 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಸರ್ಕಾರ ನಿಗದಿಪಡಿಸಿದೆ. ಮೊದಲ ಅವಧಿಯ ಐದು ವರ್ಷಗಳಲ್ಲಿ ಮೋದಿ ಸರ್ಕಾರ ವರ್ಷಕ್ಕೆ ಸುಮಾರು ಎರಡು ರಸ್ತೆಗಳನ್ನು ನಿರ್ಮಿಸಿದೆ. ಮುಂದಿನ ಐದು ವರ್ಷಗಳಲ್ಲಿ, ದೇಶದ ಹಲವು ಭಾಗಗಳನ್ನು 19 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಯೋಜನೆಯೊಂದಿಗೆ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಸಂಪರ್ಕಿಸುವತ್ತ ಗಮನ ಹರಿಸಲಾಗುತ್ತಿದೆ. ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೆ ಮುಂದಿನ ಐದು ವರ್ಷಗಳಲ್ಲಿ 13 ಲಕ್ಷ ಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ನಿರೀಕ್ಷೆ ಮಾಡುತ್ತಿದೆ.
ನಗರ ಮೂಲಸೌಕರ್ಯಗಳಾದ ಒಳಚರಂಡಿ, ನಗರ ಸಂಪರ್ಕ, ಕಡಿಮೆ ಆದಾಯದ ವಸತಿಗಳು 16 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಪಡೆಯಲು ಸಿದ್ಧವಾಗಿದೆ. ಭಾರತದ ಹಿಂದಿನ ಎಲ್ಲಾ ಸರ್ಕಾರಗಳು ನಗರೀಕರಣವನ್ನು ಸಮಸ್ಯೆಯೆಂದು ಕಂಡವು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆಯ ಮೂಲಕ ನಗರೀಕರಣದ ವೇಗವನ್ನು ಕಡಿಮೆ ಮಾಡಲು ಪ್ರಯತ್ನಿಸಿದವು. ಆದರೆ, ವಾಸ್ತವವಾಗಿ ನಗರಗಳು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿವೆ. ಆದ್ದರಿಂದ, ನಗರೀಕರಣವನ್ನು ನಿರ್ವಹಿಸುವ ಅಗತ್ಯವಿದೆ. ಉತ್ತಮವಾಗಿ ನಿರ್ವಹಿಸಲಾಗುವ ನಗರೀಕರಣದ ದಿಕ್ಕಿನಲ್ಲಿ 16 ಲಕ್ಷ ಕೋಟಿ ರೂ. ಹೂಡಿಕೆ ಯೋಜನೆ ನಿರ್ಣಾಯಕ ಹೆಜ್ಜೆಯಾಗಿದೆ.
ಕೃಷಿ ಆದಾಯವನ್ನು ಸುಧಾರಿಸಲು ಮತ್ತು ಗ್ರಾಮೀಣ ಸಂಕಷ್ಟವನ್ನು ಕೊನೆಗೊಳಿಸಲು ಸಹಾಯ ಮಾಡುವ ನೀರಾವರಿ ಮತ್ತು ಗ್ರಾಮೀಣ ಮೂಲಸೌಕರ್ಯವು 8 ಟ್ರಿಲಿಯನ್ ರೂಪಾಯಿಗಳ ಹೂಡಿಕೆಯನ್ನು ಪಡೆಯಲು ಸಿದ್ಧವಾಗಿದೆ.
ಮುಂದಿನ ಐದು ವರ್ಷಗಳಲ್ಲಿ 100 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ 2024 ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿರಂತರ ಆರ್ಥಿಕ ಬೆಳವಣಿಗೆಗೆ ಮೂಲಸೌಕರ್ಯಗಳಲ್ಲಿನ ಹೂಡಿಕೆ ಅತ್ಯಂತ ನಿರ್ಣಾಯಕ ಅಂಶವಾಗಿದೆ ಎಂಬುದನ್ನು ಚೀನಾ ಮತ್ತು ಇತರ ಪೂರ್ವ ಏಷ್ಯಾದ ಆರ್ಥಿಕತೆಗಳು ತೋರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.