ಬಲೂರ್ಘಾಟ್: ನರ್ಸ್ವೊಬ್ಬಳು ಮಗುವಿಗೆ ಅಳವಡಿಸಲಾಗಿದ್ದ ಬ್ಯಾಂಡೇಜನ್ನು ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳನ್ನೇ ಕತ್ತರಿಸಿದ ಘಟನೆ ಪಶ್ಚಿಮಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ತನ್ನ ಕೃತ್ಯವನ್ನು ಮರೆಮಾಚುವುದಕ್ಕಾಗಿ ಆ ನರ್ಸ್ ಮಗುವಿನ ತುಂಡಾದ ಹೆಬ್ಬೆರಳನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ. ಹೆಬ್ಬೆರಳು ತಡವಾಗಿ ಪತ್ತೆಯಾದ ಕಾರಣ ಅದನ್ನು ಸರ್ಜರಿ ಮೂಲಕ ಮರುಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
8 ದಿನದ ಮಗು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿತ್ತು, ಇದೀಗ ನರ್ಸ್ನ ಬೇಜವಾಬ್ದಾರಿತನದಿಂದಾಗಿ ಆ ಮಗು ತನ್ನ ಎಡಗೈ ಹೆಬ್ಬೆರಳನ್ನು ಕಳೆದುಕೊಂಡಿದೆ.
ಈ ಬಗ್ಗೆ ಮಗುವಿನ ತಾಯಿ ನರ್ಸ್ನ್ನು ಪ್ರಶ್ನಿಸಿದಾಗ ಆಕೆ, ಮಗುವಿನ ಹೆಬ್ಬೆರಳನ್ನು ತುಂಡರಿಸುವುದು ಅವಶ್ಯಕವಾಗಿತ್ತು, ಅದಕ್ಕೆ ತುಂಡರಿಸಿದೆ ಎಂದು ಉತ್ತರಿಸಿದ್ದಾಳೆ ಎನ್ನಲಾಗಿದೆ.
ಇದೀಗ ನರ್ಸ್ ಮತ್ತು ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಈ ಘಟನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.