ಭಾರತದ ಮೂರು ಸೇನಾ ಪಡೆಗಳನ್ನು ಮುನ್ನಡೆಸುವ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸಿಡಿಎಸ್ (ಚೀಫ್ ಆಫ್ ಆರ್ಮಿ ಡೆಫೆನ್ಸ್ ಸ್ಟಾಫ್) ಅನ್ನು ನೇಮಕ ಮಾಡುವ ಬಗ್ಗೆ ಘೋಷಣೆಯನ್ನು ಮಾಡಿದ್ದರು. ಅದರಂತೆ ವಾಯು ಮತ್ತು ನೌಕಾ ಸೇನೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಿಡಿಎಸ್ ಹುದ್ದೆ ಸೃಷ್ಟಿಗೆ ಕೇಂದ್ರ ಭದ್ರತಾ ಸಂಪುಟ ಸಮಿತಿ ಕಳೆದ ವಾರ ಗ್ರೀನ್ ಸಿಗ್ನಲ್ ನೀಡಿತ್ತು.
ಪ್ರಸ್ತುತ ಸಿಡಿಎಸ್ ಹುದ್ದೆ ರಚನೆಯಾಗಿದೆ. ಈ ಹುದ್ದೆ ಎಲ್ಲರ ಕುತೂಹಲವನ್ನು ಕೆರೆಳಿಸಿದ್ದು, ಮುಂಬರುವ ದಿನಗಳಲ್ಲಿ ಇದರ ಕಾರ್ಯ ನಿರ್ವಹಣೆ ಹೇಗಿರಲಿದೆ ಎಂಬ ಬಗ್ಗೆಯೇ ಎಲ್ಲರ ಚಿತ್ತ ಹರಿದಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸನ್ನು ಕೇಂದ್ರ ಸರ್ಕಾರ 65ಕ್ಕೆ ನಿಗದಿ ಮಾಡಿದೆ. ಬಿಪಿನ್ ರಾವತ್ ಅವರಿಗೆ 64 ವರ್ಷವಾಗಿದ್ದು 4 ವರ್ಷಗಳ ಕಾಲ ಅವರೇ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳ ನೇತೃತ್ವ ಮತ್ತು ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.
ಮೂರು ಸೇನೆಗಳ ನಡುವೆ ಉತ್ತಮ ಸಂವಹನ ಸಮನ್ವಯ ಸಾಧಿಸುವುದು ಈ ಹುದ್ದೆಯ ಮುಖ್ಯ ಉದ್ದೇಶ. ಸೇನೆಗೆ ಹಂಚಿಕೆಯಾಗುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಮೂರು ಸೇನೆಗಳ ಸಂಬಂಧ ಏಕ ವ್ಯಕ್ತಿಯಾಗಿ ಪ್ರಧಾನಿಗಳಿಗೆ ಸಲಹೆ ನೀಡುವುದು. ಮೂರು ಸೇನೆಗಳ ಸಂಬಂಧ ಆಡಳಿತ್ಮಾಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ತ್ರಿಸೇನೆಗಳ ಜಂಟಿ ನಿರ್ವಹಣೆ ಹಾಗೂ ತರಬೇತಿ ಕೂಡಾ ಈ ರಕ್ಷಣಾ ಪಡೆಗಳ ಮುಖ್ಯಸ್ಥರ ವ್ಯಾಪ್ತಿಯಲ್ಲಿ ಬರಲಿದೆ. ಸೈಬರ್, ಬಾಹ್ಯಾಕಾಶ, ವಿಶೇಷ ಭದ್ರತಾ ದಳಗಳು ಕೂಡಾ ಮಹಾ ದಂಡನಾಯಕ ಕಚೇರಿ ವ್ಯಾಪ್ತಿಗೆ ಬರಲಿದೆ.
ಮೂರು ಸೇನೆಗಳ ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಿಸುವುದು ಸುದೀರ್ಘ ಕಾಲದ ಬೇಡಿಕೆಯಾಗಿದೆ. 20 ವರ್ಷಗಳ ಹಿಂದೆಯೇ ಈ ವಿಚಾರ ಪ್ರಸ್ತಾಪವಾಗಿದೆ. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೀಗ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ.
ಭಾರತೀಯ ಸೇನೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ADGPIಯು ಭಾರತದ ಮೊದಲ ಸಿಡಿಎಸ್ ಅವರು ಹೊಂದಲಿರುವ ಧ್ವಜ, ಪೀಕ್ ಕ್ಯಾಪ್, ಶೋಲ್ಡರ್ ಬ್ಯಾಡ್ಜ್ ಮತ್ತು ಬೆಲ್ಟ್ ಬಕಲ್ ಮುಂತಾದ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದೆ.
ಟ್ವಿಟ್ ಮಾಡಿರುವ ADGPI, “ಸಿಡಿಎಸ್ ಅವರ ರ್ಯಾಂಕ್ ಬ್ಯಾಡ್ಜ್ ಮತ್ತು ಅಕ್ಯೂಟ್ರೆಮೆಂಟ್ಗಳು ಭಾರತೀಯ ಸೇನೆಯ ಜಂಟಿತನವನ್ನು ಪ್ರತಿಬಿಂಬಿಸುತ್ತದೆ. ಸಿಡಿಎಸ್ ಅವರ ಕಚೇರಿಯು ಸೌತ್ ಬ್ಲಾಕ್ನಲ್ಲಿ ಇರುವ ಸಾಧ್ಯತೆ ಇದೆ, ಸಿಡಿಎಸ್ ಅವರು ಪೇರೆಂಟ್ ಸರ್ವಿಸ್ ಸಮವಸ್ತ್ರ ಹೊಂದಲಿದ್ದಾರೆ” ಎಂದಿದೆ. ಸಿಡಿಎಸ್ ಸಮವಸ್ತ್ರಕ್ಕೆ ಸಂಬಂಧಿಸಿದ ಚಿಹ್ನೆ ಮತ್ತು ಫೋಟೋಗಳನ್ನು ಅದು ಹಂಚಿಕೊಂಡಿದೆ.
ಜನರಲ್ ಬಿಪಿನ್ ರಾವತ್ ಅವರು ಮೂರು ಸೇನಾ ಪಡೆಯ ಏಕೈಕ ರಕ್ಷಣಾ ಮುಖಸ್ಥರಾಗಿ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಎಲ್ಲಾ ಸೈನಿಕರಿಗೂ ಗೌರವಾರ್ಪಣೆ ಮಾಡಿ ಮಾತನಾಡಿದ ಅವರು, “ಎಲ್ಲಾ ಶ್ರೇಣಿಯವರಿಗೆ, ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರಿಗೆ, ವೀರ ಮಾತೆಯರು, ವೀರ ನಾರಿ ಮತ್ತು ಮಾಜಿ ಯೋಧರಿಗೆ ನನ್ನ ಕೃತಜ್ಞತೆಗಳು. ಹಿಮಾವೃತ ಶೀತ ಚಳಿಗಾಲವನ್ನು ಎದುರಿಸಿ ದಿಟ್ಟರಾಗಿ ದೇಶದ ಸೇವೆ ಮಾಡುತ್ತಿರುವ ಉತ್ತರ, ಪಶ್ಚಿಮ ಮತ್ತು ಪೂರ್ವದ ಸೈನಿಕರಿಗೆ ನನ್ನ ಅಭಿನಂದನೆಗಳು” ಎಂದು ರಾವತ್ ಹೇಳಿದ್ದಾರೆ.
ಸಿಡಿಎಸ್ ಆಗಿ ರಾವತ್ ಅವರ ನೇತೃತ್ವದಲ್ಲಿ ಸರ್ಕಾರವು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸಿದೆ. ಮೂರು ಸೇವೆಗಳ ಜಂಟಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮೂರು ಸೇವೆಗಳ ಕಮಾಂಡ್ ಅನ್ನು ಪುನರ್ರಚಿಸುವಲ್ಲಿ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ರಕ್ಷಣಾ ಸಚಿವಾಲಯದ (ಎಂಒಡಿ) ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿರುವ ಸಿಡಿಎಸ್, ಪರಮಾಣು ಕಮಾಂಡ್ ಪ್ರಾಧಿಕಾರದ ಮಿಲಿಟರಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
Car Flag #CDS pic.twitter.com/jD1gbQsm9S
— ADG PI – INDIAN ARMY (@adgpi) December 31, 2019
Peak Cap #CDS pic.twitter.com/HNn5tcAcDG
— ADG PI – INDIAN ARMY (@adgpi) December 31, 2019
Shoulder Rank Badges #CDS pic.twitter.com/OvlhrGe7zi
— ADG PI – INDIAN ARMY (@adgpi) December 31, 2019
Belt Buckle #CDS pic.twitter.com/VvgnuCm0sT
— ADG PI – INDIAN ARMY (@adgpi) December 31, 2019
Belt Buckle #CDS pic.twitter.com/VvgnuCm0sT
— ADG PI – INDIAN ARMY (@adgpi) December 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.