ನವದೆಹಲಿ: ನಿವೃತ್ತರಾಗಲಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ಸೇನೆಯ ಮಹಾ ಪ್ರಧಾನ ದಂಡನಾಯಕ (ಸಿಡಿಎಸ್)ನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಸ್ಥಾನವನ್ನು ವಹಿಸಿಕೊಂಡ ನಂತರ ತಮ್ಮ ಕಾರ್ಯತಂತ್ರವನ್ನು ಯೋಜಿಸುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ ಯುದ್ಧ ಸ್ಮಾರಕ ಇಂದು ಬೆಳಿಗ್ಗೆ ಮಾಲಾರ್ಪಣೆಯನ್ನು ಮಾಡಿ ಗೌರವ ನಮನ ಸಲ್ಲಿಸಿದ ಬಳಿಕ ರಾವತ್ ಸುದ್ದಿಗಾರರೊಂದಿಗೆ ಮಾತನಾಡಿದರು.
“ಸೇನೆಯ ಮಹಾ ದಂಡನಾಯಕನ ಸ್ಥಾನವು ಅನೇಕ ಜವಾಬ್ದಾರಿಗಳನ್ನು ಹೊಂದಿದೆ. ಇಲ್ಲಿಯವರೆಗೆ, ನಾನು ಸೈನ್ಯದ ಮುಖ್ಯಸ್ಥನಾಗಿ ನನ್ನ ಜವಾಬ್ದಾರಿಗಳತ್ತ ಗಮನ ಹರಿಸುತ್ತಿದ್ದೆ. ನಾನು ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡ ನಂತರ ನನ್ನ ಹೊಸ ಪಾತ್ರಕ್ಕಾಗಿ ಕಾರ್ಯತಂತ್ರವನ್ನು ಯೋಜಿಸುತ್ತೇನೆ” ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
28ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜನರಲ್ ಮನೋಜ್ ನರವಾಣೆ ಅವರಿಗೆ ರಾವತ್ ಅವರು ಅಭಿನಂದನೆಗಳನ್ನು ಸಲ್ಲಿಸಿದರು. “ನನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ನನಗೆ ಸಾಧ್ಯವಾಗಿದ್ದು ಸಮಸ್ತ ಸೈನಿಕರಿಂದಾಗಿ. ಹೀಗಾಗಿ ಅವರಿಗೆ ನಾನು ಶುಭ ಹಾರೈಸುತ್ತೇನೆ. ಸೇನಾ ಮುಖ್ಯಸ್ಥರು ಏಕಾಂಗಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಮತ್ತು ಎಲ್ಲರ ಸಹಕಾರ ಮತ್ತು ತಂಡದ ಕೆಲಸದಿಂದ ಮಾತ್ರ ಕೆಲಸ ಮಾಡಬಹುದು ಎಂದು ನಾನು ಹೇಳ ಬಯಸುತ್ತೇನೆ. ಬಿಪಿನ್ ರಾವತ್ ಎಂಬುದು ಕೇವಲ ಒಂದು ಹೆಸರು. ಎಲ್ಲರ ಸಹಕಾರ ಇದ್ದಾಗ ಮಾತ್ರ ಬಿಪಿನ್ ರಾವತ್ ಕೆಲಸ ಮಾಡಬಹುದು “ಎಂದು ಅವರು ಹೇಳಿದರು.
“ನಾಳೆ, ನಾನು ಸೇನೆ ಮಹಾ ದಂಡನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದೇನೆ. ಹೊಸ ಸ್ಥಾನವನ್ನು ವಹಿಸಿಕೊಂಡ ನಂತರ ನನ್ನ ಆದ್ಯತೆಗಳ ಬಗ್ಗೆ ಮಾತನಾಡುತ್ತೇನೆ. ಈ ಹುದ್ದೆಯ ಕೆಲಸವು ಸಾಕಷ್ಟು ಸಂಕೀರ್ಣವಾಗಿದೆ. ನಾನು ಈ ಸ್ಥಾನದಲ್ಲಿದ್ದವರೆಗೆ, ನಾನು ಸೇನಾ ಮುಖ್ಯಸ್ಥನಾಗಿದ್ದಷ್ಟು ಕಾಲ ಆ ಕೆಲಸ ನಗ್ಗೆ ಮಾತ್ರ ಗಮನ ಹರಿಸುತ್ತೇನೆ. ನನಗೆ ವಹಿಸಲಾಗಿರುವ ಹೊಸ ಜವಾಬ್ದಾರಿಗಳ ಬಗ್ಗೆ ಹುದ್ದೆ ಅಲಂಕರಿಸಿದ ಬಳಿಕ ಯೋಚಿಸುತ್ತೇನೆ “ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.