ಚಂಡೀಗಢ: ಕಳೆದ 25 ವರ್ಷಗಳಿಂದ ಶೂ ಉತ್ಪಾದನೆಯಲ್ಲಿ ತೊಡಗಿರುವ ಹರಿಯಾಣ ಮೂಲದ ಕಂಪನಿಯೊಂದು ಪರಿಸರಸ್ನೇಹಿ ಹೆಜ್ಜೆಯನ್ನು ಮುಂದಿರಿಸಿದೆ. ಹೊಟ್ಟು, ಕಬ್ಬು ಹಾಗೂ ನೀಲಗಿರಿಯಂತಹ ಜೈವಿಕವಾಗಿ ಕರಗಬಲ್ಲ ವಸ್ತುಗಳನ್ನು ಬಳಸಿ ಶೂಗಳನ್ನು ತಯಾರಿಸುತ್ತಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಇಂದ್ರೇಶ್ವರ ಸಿಂಗ್ ಪಾಲ್ ಅವರು ಜೈವಿಕ ವಿಘಟನೀಯ ಶೂಗಳ ತಯಾರಿಕೆಯ ಹಿಂದಿನ ಅಗತ್ಯತೆ ಮತ್ತು ಪರಿಕಲ್ಪನೆಯನ್ನು ವಿವರಿಸಿದ್ದು, “ನಾವು ಕಳೆದ 25 ವರ್ಷಗಳಿಂದ ವಿಶ್ವದ ಅತ್ಯುತ್ತಮ ಬ್ರಾಂಡ್ಗಳಿಗೆ ಶೂಗಳನ್ನು ತಯಾರಿಸುತ್ತಿದ್ದೇವೆ. ಈ ಶೂಗಳು ಪರಿಸರದಲ್ಲಿ ಉಳಿದು ಹೋಗುತ್ತವೆ ಮತ್ತು ಕರಗಲು 50-200 ವರ್ಷಗಳನ್ನು ತೆಗೆತುಕೊಳ್ಳುತ್ತದೆ. ಪರಿಸರ ಪ್ರಜ್ಞೆಯನ್ನು ಹೊಂದಿರುವ ಜನರಿಗೆ ಶೂಗಳನ್ನು ತಯಾರಿಸುವುದು ನಮ್ಮ ಪ್ರಯತ್ನವಾಗಿತ್ತು. ಈ ಶೂಗಳು ಜೈವಿಕವಾಗಿ ಕರಗುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಶೂಗಳಿಗಿಂತ ಇದು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಪರಿಸರದ ಮೇಲೆ ಇದು ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡುವುದಿಲ್ಲ. ಬೇಗ ಇದು ಜೈವಿಕವಾಗಿ ಕರಗಿಹೋಗುತ್ತದೆ”ಎಂದು ಪಾಲ್ ತಿಳಿಸಿದ್ದಾರೆ.
“ನಾವು ಕಳೆದ ಎರಡು ವರ್ಷಗಳಿಂದ 100 ಪ್ರತಿಶತದಷ್ಟು ಜೈವಿಕ ವಿಘಟನೀಯ ಶೂಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಜೈವಿಕ ವಿಘಟನೀಯ ಶೂಗಳು ಶೇಕಡಾ 82 ರಷ್ಟು ಜೈವಿಕ ಅಂಶವನ್ನು ಹೊಂದಿವೆ ಮತ್ತು ಸಸ್ಯ ಆಧಾರಿತ ಮೂಲಗಳಾದ ನೀಲಗಿರಿ, ಕಬ್ಬು ಇತ್ಯಾದಿಗಳಿಂದ ತಯಾರಿಸಲ್ಪಟ್ಟಿದೆ. ನಮ್ಮ ಪ್ರಾಯೋಗಿಕ ಕಾರ್ಯತಂತ್ರ ಯಶಸ್ವಿಯಾಗಿದ್ದು ಜನರು ಸಂತುಷ್ಟರಾಗಿದ್ದಾರೆ “ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.