ಚೆನ್ನೈ: ತಮಿಳುನಾಡಿನ ತಿರುಚ್ಚಿಯ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ.
50 ವರ್ಷದ ಪಿ.ಶಂಕರ್ ಅವರು ತಿರುಚ್ಚಿಯ ತುರೈಯೂರ್ ನಗರದ ಯೆರ್ಕುಡಿ ಗ್ರಾಮದವರಾಗಿದ್ದಾರೆ. ಮೋದಿಯವರ ಜನಪರ ಯೋಜನೆಗಳಿಂದ ಪ್ರಭಾವಿತನಾಗಿ ಅವರಿಗೆ ಗೌರವವನ್ನು ಸೂಚಿಸಲು ದೇಗುಲವನ್ನು ನಿರ್ಮಾಣ ಮಾಡಿರುವುದಾಗಿ ಅವರು ಹೇಳಿದ್ದಾರೆ.
“ನನಗೆ ಶೌಚಾಲಯ ಸೌಲಭ್ಯವಿರಲಿಲ್ಲ. ಈಗ ನನಗೆ ಶೌಚಾಯ ದೊರೆತಿದೆ. ಮೋದಿಯವರ ಎಲ್ಲಾ ಕಲ್ಯಾಣ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿದ್ದು ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದೆ. ಆದ್ದರಿಂದ ನಾನು ಅವರಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ.
ರೈತ ಶಂಕರ್ ಅವರು ತಮ್ಮ ಉಳಿತಾಯವನ್ನು ಬಳಸಿ ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರತಿದಿನ ಪೂಜೆಯನ್ನು ಮಾಡುತ್ತಾರೆ.
“ನಾನು 10 ಎಕರೆ ಭೂಮಿಯನ್ನು ಹೊಂದಿರುವ ರೈತ. ನಾನು ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಈ ತುಂಡು ಭೂಮಿಯನ್ನು ಖರೀದಿಸಿದೆ. ಮೋದಿ ಅವರ ದೂರದೃಷ್ಟಿಯ ಕಲ್ಯಾಣ ಯೋಜನೆಗಳಿಂದ ಪ್ರಭಾವಿತನಾಗಿ ನಾನು ಅವರನ್ನು ಇಷ್ಟಪಡುತ್ತೇನೆ. ಕಳೆದ ವರ್ಷ ಈ ಪ್ರದೇಶದಲ್ಲಿ ಬರಗಾಲ ಉಂಟಾಗಿತ್ತು . ಹೀಗಾಗಿ ನಾನು 5 ಎಕರೆ ಭೂಮಿಯಲ್ಲಿ ಸೂಚಿಸಿದಂತೆ ಹನಿ ನೀರಾವರಿ ವ್ಯವಸ್ಥೆಯನ್ನು ಆರಿಸಿಕೊಂಡೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದರಿಂದ ನಾನು ಲಾಭವನ್ನು ಗಳಿಸುತ್ತಿದ್ದೇನೆ “ಎಂದು ಅವರು ಹೇಳಿದ್ದಾರೆ.
“ನಾವು ಎಂಟು ತಿಂಗಳ ಹಿಂದೆಯೇ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದ್ದೆವು. ಗಳಿಕೆಯ ಹಣವನ್ನು ಉಳಿಸಿದ ದೇವಾಲಯ ನಿರ್ಮಾಣದ ಕೆಲಸವನ್ನು ಕೈಗೊಂಡಿದ್ದೇನೆ. ಈ ದೇವಾಲಯಕ್ಕೆ ನಾನು 1.25 ಲಕ್ಷ ರೂ. ಖರ್ಚು ಮಾಡಿದ್ದೇನೆ. ನಾನು ಮೋದಿ ಪ್ರತಿಮೆಗೆ ಪ್ರತಿದಿನ ಪೂಜಿಸುತ್ತೇನೆ” ಎಂದು ಶಂಕರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.