ನವದೆಹಲಿ: ಕಳೆದ ಶುಕ್ರವಾರ ಮೀರತ್ ನಗರವನ್ನೇ ಬೆಚ್ಚಿಬೀಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಇಬ್ಬರು ವ್ಯಕ್ತಿಗಳು ಪೊಲೀಸರ ಮೇಲೆ ಗುಂಡು ಹಾರಿಸಿರುವ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ್ದಾರೆ. ವೀಡಿಯೊವೊಂದರಲ್ಲಿ, ನೀಲಿ ಬಣ್ಣದ ಜಾಕೆಟ್ನಲ್ಲಿ ಮುಖವಾಡ ಧರಿಸಿದ ವ್ಯಕ್ತಿಯು ಬಂದೂಕಿನೊಂದಿಗೆ ತಿರುಗಾಡುವುದನ್ನು ಕಾಣಬಹುದು.
ಡಿಸೆಂಬರ್ 19 ಮತ್ತು 21 ರ ನಡುವೆ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ನಡೆದ ದಾಳಿ ಇದಾಗಿದ್ದು, ಇದುವೇ ನಮ್ಮನ್ನು ಕಠಿಣ ಕ್ರಮ ಜರುಗಿಸುವಂತೆ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರದಲ್ಲಿ ನಡೆದ ಘರ್ಷಣೆಗಳಲ್ಲಿ ರಾಜ್ಯಾದ್ಯಂತ 15 ಜನರು ಸಾವನ್ನಪ್ಪಿದ್ದರೆ, ಮೀರತ್ನಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿವೆ.
ಅಲ್ಲದೇ, ಪ್ರತಿಭಟನಾಕಾರರು ತಾವು ಪ್ಲಾಸ್ಟಿಕ್ ಬುಲೆಟ್ ಮತ್ತು ರಬ್ಬರ್ ಬುಲೆಟ್ಗಳನ್ನಷ್ಟೇ ಬಳಕೆ ಮಾಡಿದ್ದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನಾಕಾರರು ದೊಂಬಿ, ಗಲಾಟೆ, ದರೋಡೆಯಂತಹ ಕೃತ್ಯಗಳಿಗೆ ಇಳಿದ ಹಿನ್ನಲೆಯಲ್ಲಿ ಪೊಲೀಸರಿಗೆ ಪ್ರತಿದಾಳಿ ನಡೆಸುವುದು ಅನಿವಾರ್ಯವಾಗಿತ್ತು.
ಘಟನೆಯಲ್ಲಿ ಪೊಲೀಸರಿಗೆ ಸಾಕಷ್ಟು ಪ್ರಮಾಣದಲ್ಲಿ ಗಾಯಗಳಾಗಿವೆ. 21 ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ಒಟ್ಟು 288 ಪೊಲೀಸರಿಗೆ ಗಾಯಗಳಾಗಿವೆ. ಇವರಲ್ಲಿ 62 ಮಂದಿಗೆ ಸುಟ್ಟಗಾಯಗಳಾಗಿವೆ ಎಂದಿದ್ದಾರೆ.
ಆಸ್ತಿಪಾಸ್ತಿ ನಷ್ಟವನ್ನು ಭರಿಸುವಂತೆ ಪ್ರತಿಭಟನಾಕಾರರಿಗೆ ನೋಟಿಸ್ ಅನ್ನು ಉತ್ತರಪ್ರದೇಶ ಸರ್ಕಾರ ಜಾರಿ ಮಾಡಿದೆ. ಈ ಮೂಲಕ ಹಿಂಸೆಯ ವಿರುದ್ಧ ಕಠಿಣ ನಿಲುವನ್ನು ತಾಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.