ನವದೆಹಲಿ: ಪ್ರಾದೇಶಿಕ ವಿಮಾನಯಾನ ಸಂಪರ್ಕ ಆರ್ಸಿಎಸ್-ಉಡಾನ್ ಯೋಜನೆಯಡಿ ಸುಮಾರು 35 ಲಕ್ಷ ಪ್ರಯಾಣಿಕರು ಈವರೆಗೆ ವಿಮಾನ ಯಾನ ನಡೆಸಿದ್ದಾರೆ ಎಂದು ಕೇಂದ್ರ ಸೋಮವಾರ ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಇಲ್ಲಿಯವರೆಗೆ ಸುಮಾರು 34,74,000 ಪ್ರಯಾಣಿಕರನ್ನು ಆರ್ಸಿಎಸ್-ಉಡಾನ್ ಯೋಜನೆಯಡಿ ಹಾರಾಟ ನಡೆಸಲಾಗಿದೆ.
“ಪ್ರಯಾಣದ ಸಮಯವು ತೀವ್ರವಾಗಿ ಕಡಿಮೆಯಾಗಿದೆ ಮತ್ತು ಪ್ರವಾಸೋದ್ಯಮ, ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ದೇವಾಲಯಗಳ ಭೇಟಿ ಮುಂತಾದ ಕಾರ್ಯಗಳಿಗೆ ಉಡಾನ್ ಯೋಜನೆಯು ಸಾರ್ವಜನಿಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿದೆ” ಎಂದಿದೆ.
2019 ರ ಏಪ್ರಿಲ್ನಿಂದ ನವೆಂಬರ್ವರೆಗೆ ಅಸ್ತಿತ್ವದಲ್ಲಿರುವ ಮತ್ತು ಹೊಸ ವಿಮಾನ ನಿಲ್ದಾಣಗಳ ನವೀಕರಣಕ್ಕಾಗಿ 304.49 ಕೋಟಿ ರೂಪಾಯಿಯನ್ನು ವ್ಯಯಿಸಲಾಗಿದೆ.
2019 ರಲ್ಲಿ ಸರ್ಕಾರವು 33 ವಿಮಾನ ನಿಲ್ದಾಣಗಳನ್ನು ಒಳಗೊಂಡ 335 ಮಾರ್ಗಗಳನ್ನು ಅನುವು ಮಾಡಿಕೊಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.